Blog

  • ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ

    ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ

    ಬೆಂಗಳೂರು: ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.

    ಈ ಶೃಂಗಸಭೆಯಲ್ಲಿ, ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030, ಮತ್ತು ಸ್ಟಾರ್ಟ್ಅಪ್ ನೀತಿ 2025-2030 ಗಳಂತಹ ಮೂರು ಪ್ರಮುಖ ನೀತಿಗಳನ್ನು ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡಲಾಗಿದೆ. ದತ್ತಾಂಶ ಚಾಲಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿಯಿಂದ, ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್ ಗಳಿಗೆ ಜಾಗತಿಕ ತಾಣವಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. 2034 ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾ ನೀತಿ 2025-30 ಸಹಕಾರಿಯಾಗಲಿದೆ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿಯಂತಹ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ.

    ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿರುವ  ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು
    ಅಂತರರಾಷ್ಟ್ರೀಯ ಸಹಭಾಗಿತ್ವದಲ್ಲಿ ನಾವೀನ್ಯತೆ  ಮತ್ತು ತಂತ್ರಜ್ಞಾನದಲ್ಲಿ ಹೊಸ  ಆವಿಷ್ಕಾರಗಳನ್ನು ಸಂಶೋಧಿಸಿ, ಸೃಷ್ಟಿಸಿ   ಹೊಸ ದಿಕ್ಕಿನಲ್ಲಿ ಹೆಜ್ಜೆಗಳನ್ನಿಟ್ಟು ವಿಶ್ವದ ಗಮನವನ್ನು ಕರ್ನಾಟಕದತ್ತ

    ಈ ಸಮಾವೇಶದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಪರಿಣತರು ತಮ್ಮ  ಜ್ಞಾನ, ಕೌಶಲ್ಯಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡು
    ರಾಜ್ಯದ ಭವಿಷ್ಯವನ್ನು ರೂಪಿಸುವಲ್ಲಿ ಪರಿವರ್ತನೆಯ ಹರಿಕಾರರಾಗುತ್ತಾರೆಂದು ಎಂದರು .

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಒಂದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ವಿಚಾರಗಳು, ಸಂವಾದಗಳು, ಬಂಡವಾಳ ಹೂಡಿಕೆ ಆವಿಷ್ಕಾರ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಹಲವು ಉತ್ತಮ ಅವಕಾಶಗಳಿಗೆ ಜಾಗತಿಕ ವೇದಿಕೆಯಾಗಿ ಹೊಸ ಮುನ್ನುಡಿ ಬರೆಯಲಿ ಎಂದು ಹಾರೈಸುತ್ತೇನೆ ಎಂದರು.

    ಈ  ವರ್ಷದ ಧ್ಯೇಯವಾಕ್ಯ: “ಭವಿಷ್ಯೀಕರಣಗೊಳ್ಳಿ-ಅಜ್ಞಾತವನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ , ಜಗತ್ತನ್ನು ಮುಂದೆ  ಕೊಂಡೊಯ್ಯುವುದು” ಎಂಬುದಾಗಿದೆ. ಈ ಆಶಯ  ನಮ್ಮ ಸಾಮೂಹಿಕ ಧ್ಯೇಯದ  ಸಂಕಲ್ಪವನ್ನು ಎತ್ತಿ ಹಿಡಿಯುತ್ತದೆ.

    ಈ ಧ್ಯೇಯ ವಾಕ್ಯದ ಆಶಯದಂತೆ ಬೆಂಗಳೂರು  ತಂತ್ರಜ್ಞಾನ ಶೃಂಗಸಭೆ- 2025, ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ
    600ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1200ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ದೇಶದ ನಿಯೋಗಗಳು ಮತ್ತು ಸಾವಿರಾರು ಪರಿಣತರು ಮುಂದಿನ ದಶಕಗಳಲ್ಲಿ ತಂತ್ರಜ್ಞಾನದ ರೂಪುರೇಷೆಗಳನ್ನು , ಹೊಸ ಸಾಧ್ಯತೆಗಳನ್ನು ಇಲ್ಲಿ ಸಂವಾದಿಸಿ, ಕೇವಲ ಕರ್ನಾಟಕಕ್ಕಾಗಲಿ ಅಥವಾ ಭಾರತಕ್ಕೆ ಆಗಲಿ ಮಾತ್ರವಲ್ಲ, ಇಡೀ ಜಗತ್ತಿಗೇ ತೆರೆದಿಡುತ್ತಾರೆ .

    ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 2025  ಪರಿವರ್ತನೆಯ ಹರಿಕಾರ ಎಂಬುದನ್ನು ಈಗಾಗಲೇ ಹೇಳಿದ್ದೇನೆ. ಇದು ಶೈಕ್ಷಣಿಕ ವಲಯವನ್ನು ಉದ್ಯಮಕ್ಕೆ ಬೆಸೆಯುತ್ತದೆ.  ನವೋದ್ಯಮಗಳನ್ನು ಹೂಡಿಕೆದಾರರಿಗೆ ಪರಿಚಯಿಸುತ್ತದೆ. ಅನ್ಯ ದೇಶಗಳ ಪರಿಣಿತರನ್ನು ಸಂಶೋಧಕರನ್ನು, ನೀತಿ ನಿರೂಪಕರನ್ನು ಪರಸ್ಪರ ಬೆಸೆಯುವುದಲ್ಲದೇ ,  ಜಾಗತಿಕ ಮಾರುಕಟ್ಟೆಗಳನ್ನು ಸಂಪರ್ಕಿಸಲು ಬೃಹತ್ ವೇದಿಕೆಯಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದರು

    ನುಡಿಯಂತೆ ತಂತ್ರಜ್ಞಾನವು ಸಾಮಾಜಿಕ ಒಳಿತನ್ನು, ಆರ್ಥಿಕ ನ್ಯಾಯವನ್ನು, ಸುಸ್ಥಿರ ಅಭಿವೃದ್ಧಿಯನ್ನು, ,ಮತ್ತು  ಸಮಾಜದ ಎಲ್ಲರಿಗೂ ಸಮೃದ್ಧಿಯನ್ನು ಒದಗಿಸಬೇಕು ಎಂಬ ನಮ್ಮ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ  ಕೂಡಿರುವ  ಡಿಜಿಟಲ್ ಯುಗದಲ್ಲಿ ನಾವು ನಿಂತಿದ್ದೇವೆ.

    ದಿಟ್ಟ, ಮಾನವೀಯ ಮತ್ತು ಪರಿವರ್ತನಾತ್ಮಕ ಭವಿಷ್ಯವನ್ನು ಸಹ-ಸೃಷ್ಟಿಸಲು ಇಡೀ ಜಗತ್ತಿಗೆ ಕರ್ನಾಟಕದ ಆಹ್ವಾನವಾಗಿದೆ. ದಶಕಗಳಿಂದ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ. ಆದರೆ ಇಂದು, ಅದು ಇನ್ನೂ ದೊಡ್ಡದಾಗಿ, ನಾವೀನ್ಯತೆ, ಪ್ರತಿಭೆ, ಸಂಶೋಧನೆ ಮತ್ತು ತಾಂತ್ರಿಕ ನಾಯಕತ್ವದ ಮುಂಚೂಣಿಯಲ್ಲಿ ಜಾಗತಿಕ ಕೇಂದ್ರವಾಗಿ ಬೆಳೆದು ನಿಂತಿದೆ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತದೆ

    ಆಕಸ್ಮಿಕವಲ್ಲ; ಇದು ದೂರದೃಷ್ಟಿಯ ನೀತಿಗಳು, ಆಳವಾದ ಸಾಂಸ್ಥಿಕ ಶಕ್ತಿ ಮತ್ತು ಪ್ರತಿ ಹಂತದಲ್ಲೂ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಪೋಷಿಸುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿದೆ.  ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ‌.  85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ.ರಾಜ್ಯದ

    4.3% ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ. IISc, IIM-B, IIIT-B, NCBS, JNCASR, NIMHANS, DRDO ಪ್ರಯೋಗಾಲಯಗಳು, ISRO ಕೇಂದ್ರಗಳು ಮತ್ತು ಹಲವಾರು ವಿಶ್ವ ದರ್ಜೆಯ ಖಾಸಗಿ ವಿಶ್ವವಿದ್ಯಾಲಯಗಳಂತಹ ಪ್ರಮುಖ ಸಂಸ್ಥೆಗಳ ತವರಾಗಿ, ಸಾಟಿಯಿಲ್ಲದ ಬೌದ್ಧಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಪೋಷಿಸುತ್ತದೆ ಎಂಬುದು ಅತ್ಯಂತ ಮಹತ್ವದ ವಿಚಾರ.

    ಉದ್ಯಮಶೀಲತಾ ಶಕ್ತಿಗೆ  ಬೆಂಗಳೂರು ಅನ್ವರ್ಥವಾಗಿದೆ. ಕರ್ನಾಟಕವು 16,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದೆ ಮತ್ತು ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟನ್ನು ರಾಜ್ಯವು ಕೊಡುಗೆ ನೀಡಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ.

    ಭಾರತದ ಐಟಿ ರಫ್ತಿನಲ್ಲಿ ನಾವು 42% ಕೊಡುಗೆ ನೀಡುತ್ತೇವೆ, ಇದರ ಮೌಲ್ಯ 3.2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು, ಮತ್ತು ಈ ಪ್ರಗತಿ
    ವರ್ಷದಿಂದ ವರ್ಷಕ್ಕೆ 27% ರಷ್ಟು ವೇಗವಾಗಿ ಬೆಳೆಯುತ್ತಿದೆ. ರಾಜ್ಯವು 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ, ಇದು ಭಾರತದ ಒಟ್ಟು ಕಂಪನಿಯ ಮೂರನೇ ಒಂದು ಭಾಗವಾಗಿದೆ.

    ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಅನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್-ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ. ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿಯೇ ಭಾರತದ ಮೊದಲ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದೇವೆ ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ.

    ಸರ್ಕಾರದ ದೂರದೃಷ್ಟಿಯ ಆಡಳಿತದ ಪರಿಣಾಮವಾಗಿ , ಜಾಗತಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಸಕ್ರಿಯವಾಗಿ ಪಾಲ್ಗೊಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ಪರಿಸರ ವ್ಯವಸ್ಥೆಯು ವಿಶ್ವದರ್ಜೆಯ ಇಂಜಿನಿಯರಿಂಗ್, ಪಾರದರ್ಶಕ ನೀತಿ , ಸದೃಢ ಐಪಿ ಸಂಸ್ಕೃತಿ ಹಾಗೂ ವೈವಿಧ್ಯಮಯ ಜಾಗತಿಕ ಸಮುದಾಯಗಳನ್ನು ಒಳಗೊಂಡಿದೆ. ನಮ್ಮ ವಾಣಿಜ್ಯ ಪರಿಸರಕ್ಕೆ ಉನ್ನತಮಟ್ಟದ ಕಾನೂನು, ಆರ್ಥಿಕ ಹಾಗೂ ತಾಂತ್ರಿಕ ಬಲದ ಬೆಂಬಲವಿದೆ. ವಿಶೇಷವಾಗಿ ಬೆಂಗಳೂರಿನ ಹವಾಮಾನ, ಬಹುಸಂಸ್ಕೃತಿಗಳು ವಿಶ್ವದ ಜನರನ್ನು ಆಕರ್ಷಿಸುತ್ತವೆ. ಒಟ್ಟಾರೆ ,ರಾಜ್ಯವು ಹೂಡಿಕೆದಾರರಿಗೆ ಸಂಶೋಧನೆಯಿಂದ ಮಾರುಕಟ್ಟೆಯವರೆಗೂ, ಮೂಲಸೌಕರ್ಯದಿಂದ ಕೌಶಲ್ಯದವರೆಗಿನ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಿದ್ದು, ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂದರು.

    ಡೀಪ್ ಸೈನ್ಸ್ ಮತ್ತು ಸುಧಾರಿತ ಇಂಜಿನಿಯರಿಂಗ್ ವ್ಯವಸ್ಥೆ ಒದಗಿಸಲು ರಾಜ್ಯ ಬದ್ಧವಾಗಿದ್ದು, ಎಐ, ಸೈಬರ್-ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಷನ್ ಮತ್ತು ರೊಬೊಟಿಕ್ಸ್ನಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಕ್ವಾಂಟಮ್ ತಂತ್ರಜ್ಞಾನದ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಮುಂದಾಗಿರುವ ನಮ್ಮ ಸರ್ಕಾರ, ಮುಂದಿನ ಪೀಳಿಗೆಗಾಗಿ ಟೈರ್ 2 ನಗರಗಳನ್ನು ನಾವಿನ್ಯತೆಯ ಕ್ಲಸ್ಟರ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ .
    ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ- ಹೂಡಿಕೆದಾರರಿಗೆ ಸಿಎಂ ಕರೆ

    ಈ ಎಲ್ಲ ಕ್ರಮಗಳು ಕೇವಲ ಆರ್ಥಿಕತೆಯನ್ನು ಕೇಂದ್ರೀಕರಿಸದೇ, ಸಮಾನ ಬೆಳವಣಿಗೆಗೂ ಬದ್ಧವಾಗಿವೆ. ರಾಜ್ಯದ ಪ್ರತಿ ಜಿಲ್ಲೆಯೂ ಹಾಗೂ ಯುವಪೀಳಿಗೆಯು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ನಮ್ಮ ಆಡಳಿತದ ಮಾದರಿಯು ಪಾರದರ್ಶಕತೆ, ನಿರೀಕ್ಷಿತ ನಡೆ ಹಾಗೂ ಸ್ಥಿರತೆಗೆ ಬದ್ಧವಾಗಿದೆ. ನಮ್ಮ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಮುಂದುವರೆದಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಲಿ, ಸ್ಟಾರ್ಟ್ ಅಪ್ ಆಗಲಿ, ಶೈಕ್ಷಣಿಕ ಸಂಶೋಧನೆಯಾಗಲಿ, ಯಾವುದೇ ಕ್ಷೇತ್ರದ ಬಂಡವಾಳ ಹೂಡಿಕೆ ಕರ್ನಾಟಕ ರಾಜ್ಯ ತಾಣವಾಗಿವೆ. ಏಐ , ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.

    Karnataka is leading the global technology revolution

  • ಅರಣ್ಯ-ಕಂದಾಯ ಭೂಮಿ ಸಮಸ್ಯೆ – ಸರ್ಕಾರ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಬೇಕು

    ಅರಣ್ಯ-ಕಂದಾಯ ಭೂಮಿ ಸಮಸ್ಯೆ – ಸರ್ಕಾರ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಬೇಕು

    ಚಿಕ್ಕಮಗಳೂರು:  ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಬಗೆಹರಿಸಲು ಸರ್ಕಾರ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಬೇಕು. ಗ್ರಾಮ ಮಟ್ಟದಲ್ಲಿ ವರದಿ ತಯಾರಿಸಬೇಕು. ಅದನ್ನು ಬಿಟ್ಟು ಎಸ್‌ಐಟಿ ರಚನೆ ಮಾಡಿರುವುದು ಸೂಕ್ತವಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಆರ್ಮಿ‌ ಇಂಡಿಯಾದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಹೇಳಿದರು.

    1980ರ ಈಚೆಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಒಪ್ಪಂದದ ಮೇರೆಗೆ ಸಾಮಾಜಿಕ ಅರಣ್ಯಕ್ಕೆ ಕಂದಾಯ ಭೂಮಿ ವರ್ಗಾಯಿಸಲಾಗಿದೆ. ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಿಕೊಂಡ ಕಂದಾಯ ಭೂಮಿಗೆ ಅರಣ್ಯ ಎಂದು ಪಹಣಿಯಲ್ಲಿ ನಮೂದಿಸಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

    ರೈತರ, ದಲಿತರ, ಬಡವರ ಮನೆ, ಕೃಷಿ ಜಮೀನು, ದಾರಿ, ಶಾಲೆಗಳಿಗೆ ಜಾಗ ಮೀಸಲಿಟ್ಟಿಲ್ಲ. ಆದ್ದರಿಂದ 1980ರ ನಂತರದ ಅಧಿಸೂಚಿತ ಅರಣ್ಯ ಪ್ರದೇಶಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಬೇಕು. ಇಲ್ಲದಿದ್ದರೆ ಇದು ರೈತರಿಗೆ ಮರಣ ಶಾಸನವಾಗಲಿದೆ. ಪರಿಸರಕ್ಕೆ ಮಾರಕವಾದ ಅಕೇಶಿಯ, ನೀಲಗಿರಿ, ಸಾಗುವಾನಿ ಮರಗಳನ್ನು ಅರಣ್ಯ ಇಲಾಖೆ ಬೆಳೆಸಿದೆ. ಇದರಿಂದಾಗಿ ಆನೆ, ಹುಲಿ, ಕಾಡುಕೋಣ, ಮಂಗ, ನವಿಲು, ಕಾಡು ಹಂದಿಗಳು ರೈತರ ತೋಟ, ಹೊಲ, ಗದ್ದೆಗಳಿಗೆ ಬರುತ್ತಿವೆ ಎಂದು ದೂರಿದರು.

    ಮೂಗ್ತಿಹಳ್ಳಿಯಿಂದ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ತನಕ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು. ಜಿಲ್ಲೆಯ ಎಲ್ಲಾ ರಸ್ತೆಗಳ ಗುಂಡಿ ಮುಚ್ಚಬೇಕು. ರಸ್ತೆ ಬದಿಯ ಕಾಡು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

    ಕಾಳಿಂಗ ಸರ್ಪಗಳ ಅಧ್ಯಯನದ ಹೆಸರಿನಲ್ಲಿ ಅವುಗಳ ಮೊಟ್ಟೆ ತಂದು ಕೃತಕವಾಗಿ ಮರಿಮಾಡಿ ಪಿಐಜಿ ಅಳವಡಿಸಿರುವುದು ಅವೈಜ್ಞಾನಿಕ. ಇದರಿಂದ ಕಾಳಿಂಗ ಸರ್ಪಗಳ ಸ್ವಾಭಾವಿಕ ಜೀವನಕ್ಕೆ ಧಕ್ಕೆ ಉಂಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಪ್ರಾಣಿಗಳ ಹಾವಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ, ಅಂಗವಿಕಲರಾದರೆ ₹50 ಲಕ್ಷ ಪರಿಹಾರ ನೀಡಬೇಕು. ಆನೆ ಮತ್ತು ಕಾಡು ಪ್ರಾಣಿಗಳು ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

    ಪತ್ರಿಕಾಗೋಷ್ಠಿಯಲ್ಲಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತುಳಸೇಗೌಡ, ರಾಜು, ಜಿಲ್ಲಾ ಸಂಚಾಲಕ ಡಿ.ಎಸ್. ರಮೇಶಗೌಡ ಹಾಜರಿದ್ದರು.

    Forest-Revenue Land Issue – Government should form a high-level joint committee
  • ಎಸ್ಟಿ ಒಳಮೀಸಲು ಜಾರಿಗೆ ಶಾಂತರಾಂ ಸಿದ್ದಿ ಆಗ್ರಹ

    ಎಸ್ಟಿ ಒಳಮೀಸಲು ಜಾರಿಗೆ ಶಾಂತರಾಂ ಸಿದ್ದಿ ಆಗ್ರಹ

    ಚಿಕ್ಕಮಗಳೂರು:  ಕರ್ನಾಟಕ ರಾಜ್ಯ ಸರಕಾರ ಪರಿಶಿಷ್ಟ ಪಂಗಡದಲ್ಲಿಯೂ ಒಳಮೀಸಲು ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಂ ಸಿದ್ದಿ ಆಗ್ರಹಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜನಾಂಗಕ್ಕೆ ಒಳಮೀಸಲು ನೀಡುವ ಸಂಬಂಧ ೨೦೨೪ ಆಗಸ್ಟ್ ೧ ರಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಅದರಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲು ವರ್ಗೀಕರಣ ಮಾಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದರು.

    ಪರಿಶಿಷ್ಟ ಜಾತಿಗೆ ಮಾತ್ರವಲ್ಲದೆ ಪರಿಶಿಷ್ಟ ಪಂಗಡಗಳಿಗೂ ಒಳಮೀಸಲು ನೀಡಲು ತೀರ್ಪು ನೀಡಿದೆ. ಆದರೆ, ರಾಜ್ಯ ಸರಕಾರ ಬರಿ ಪರಿಶಿಷ್ಟ ಜಾತಿಗಳತ್ತ ಮಾತ್ರ ಗಮನಹರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ರಾಜ್ಯದ ಪರಶಿಷ್ಟ ಪಂಗಡದಲ್ಲಿ ೫೦ ಜಾತಿಗಳಿವೆ. ೨೦೧೧ ರ ಜನಗಣತಿ ಪ್ರಕಾರ ಈ ೫೦ ಜಾತಿಗಳ ಒಟ್ಟು ಜನಸಂಖ್ಯೆ ೪೨.೪೮ ಲಕ್ಷ ಇದೆ. ಇದರಲ್ಲಿ ವಾಲ್ಮೀಕಿ ಸಮುದಾಯದ್ದೇ ೩೨.೯೬ ಲಕ್ಷ ಜನಸಂಖ್ಯೆ ಇದ್ದರೆ, ಉಳಿದ ೪೯ ಜಾತಿಗಳದ್ದು ಕೇವಲ ೯.೫೨ ಲಕ್ಷ. ಹೀಗಾಗಿ ಸರಕಾರ ಈಗ ನೀಡುತ್ತಿರುವ ಹೆಚ್ಚಿನ ಮೀಸಲು ಪ್ರಬಲ ಪಂಗಡದ ಪಾಲಾಗುತ್ತಿದೆ ಎಂದು ವಿವರಿಸಿದರು.

    ಎಷ್ಟೋ ಆದಿವಾಸಿ ಜಾತಿಗಳಲ್ಲಿ ಸರಕಾರಿ ನೌಕರಿ ಎಂಬುದು ಗಗನಕುಸುಮವಾಗಿದೆ. ಕೆಲವು ಜಾತಿಗಳಿಗೆ ಸಂಖ್ಯಾಬಲ ಇದ್ದರೂ ಅವರ ಸಂಖ್ಯೆ ೫೦ ಸಾವಿರದ ಆಸುಪಾಸಿನಲ್ಲಿದೆ. ಹೀಗಿರುವಾಗ ಪರಿಶಿಷ್ಟ ಪಂಗಡದೊಳಗೆ ಪ್ರಬಲ ಎನಿಸುವ ವಾಲ್ಮೀಕಿ ಸಮುದಾಯವೇ ಉಳಿದ ತಬ್ಬಲಿ ಜಾತಿಗಳನ್ನು ತಾಯ್ತನದಿಂದ ಪೊರೆಯಬೇಕಿದೆ. ಪರಿಶಿಷ್ಟ ಪಂಗಡಗಳ ನಡುವೆ ಒಳಮೀಸಲು ಹಂಚಿಕೆಯು ಸಾಧ್ಯವಾದರೆ ಸಣ್ಣ, ಅತಿಸಣ್ಣ ಜಾತಿಗಳಿಗೂ ಅವರ ಪಾಲು ದಕ್ಕುತ್ತದೆ ಎಂದರು.

    ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪರಿಶಿಷ್ಟ ಪಂಗಡದಲ್ಲೂ ಒಳಮೀಸಲು ಜಾರಿಗೆ ತರಬೇಕು. ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಸ್ಪಷ್ಟಪಡಿಸಿದರು.

    ಸಮುದಾಯದ ಮುಖಂಡ ಪ್ರೊ. ಜಡೇಗೌಡ ಮಾತನಾಡಿ, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವರ್ಗೀಕರಣ ಮಾಡುವಾಗ ನಿಖರ ದತ್ತಾಂಶಗಳ ಸಂಗ್ರಹ, ಹಿಂದುಳಿದಿರುವಿಕೆಯ ಅಧ್ಯಯನ, ಸಮಾನರು ಮತ್ತು ಅಸಮಾನರು ಒಂದೇ ಗುಂಪಿನಲ್ಲಿ ಇರದಂತೆ ಎಚ್ಚರವಹಿಸುವುದು ಈ ಮೂರು ಅಂಶಗಳನ್ನು ಉಲ್ಲೇಖಿಸಿದೆ. ಇದರ ಆಧಾರದಲ್ಲಿ ಅಧ್ಯಯನ ನಡೆಸಿ ವರ್ಗೀಕರಣದ ಸೂತ್ರಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಸರಕಾರ ಪ್ರತ್ಯೇಕ ಆಯೋಗವನ್ನು ರಚಿಸಬೇಕು ಎಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಆದಿವಾಸಿ ಪರಿಷತ್ತಿನ ಮುಖಂಡರಾದ ಮುತ್ತಪ್ಪ, ಮಹೇಶ್‌ನಾಯಕ, ಮಿಟ್ಟುರಂಜಿತ್, ಜಯರಾಂ, ಮಡೆನೇರಲು ಶಂಕರ್, ಪಿ. ರಾಜೇಶ್ ಇದ್ದರು.

    Shantaram Siddi demands implementation of internal reservation for STs

  • ಚಿಕ್ಕಮಗಳೂರು ಸೇರಿ ಎಲ್ಲ ಜಿಲ್ಲೆಗಳಿಗೂ ಇಷ್ಟರಲ್ಲೇ ಹೊಸ ಬಸ್‌ಗಳ ವ್ಯವಸ್ಥೆ

    ಚಿಕ್ಕಮಗಳೂರು ಸೇರಿ ಎಲ್ಲ ಜಿಲ್ಲೆಗಳಿಗೂ ಇಷ್ಟರಲ್ಲೇ ಹೊಸ ಬಸ್‌ಗಳ ವ್ಯವಸ್ಥೆ

    ಚಿಕ್ಕಮಗಳೂರು: ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲ್ಲ ಜಿಲ್ಲೆಗಳಿಗೂ ಹೊಸ ಬಸ್‌ಗಳನ್ನು ಒದಗಿಸುವುದಲ್ಲದೆ, ಚಿಕ್ಕಮಗಳೂರು-ಮೈಸೂರು ನಡುವೆ ಎರಡು ವೋಲ್ವೊ ಬಸ್‌ಗಳ ವ್ಯವಸ್ಥೆ ಕಲ್ಪಿಸುವುದಾಗಿಯೂ, ಇಲ್ಲಿನ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ವ್ಯವಸ್ಥೆಗೂ ಅನುಮೋದನೆ ನೀಡುವುದಾಗಿಯೂ ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

    ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಆವರಣದಲ್ಲಿ ಇಂದು ಬೆಳಿಗ್ಗೆ ನೂತನ ಬಸ್ ನಿಲ್ದಾಣ ಶಂಕುಸ್ಥಾಪನೆ ಹಾಗೂ ನೂತನ ವಸತಿ ಗೃಹಗಳನ್ನು ಉದ್ಘಾಟಿಸಿ ಅವರು ಮಾತನಾಡಿ ಮೈಸೂರು ಹಾಗೂ ಚಿಕ್ಕಮಗಳೂರು ನಡುವೆ ವೋಲ್ವೊ ಬಸ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಉಭಯ ಬಸ್ ನಿಲ್ದಾಣಗಳ ನಡುವೆ ಸ್ಕೈವಾಕ್ ನಿರ್ಮಿಸುವಂತೆ ಶಾಸಕ ಹೆಚ್.ಡಿ.ತಮ್ಮಯ್ಯ ಅವರ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈ ಬಾರಿಯ ಬಜೆಟ್‌ನಲ್ಲಿ ೨ ಸಾವಿರ ಬಸ್‌ಗಳನ್ನು ಒಟ್ಟಾರೆ ನಿಗಮಕ್ಕೆ ಒದಗಿಸಲಾಗಿದ್ದು, ಅವುಗಳಲ್ಲಿ ೯೦೦ ಬಸ್‌ಗಳನ್ನು ಕೆ.ಎಸ್.ಆರ್.ಟಿ.ಸಿ.ಗೆ ನೀಡಲಾಗುವುದು. ಇನ್ನೂ ಎರಡು-ಮೂರು ತಿಂಗಳಲ್ಲಿ ಈ ಬೇಡಿಕೆ ಈಡೇರಲಿದೆ ಎಂದರು.

    ಶಕ್ತಿ ಯೋಜನೆಯಡಿ ನವೆಂಬರ್ ೧೭ ರವರೆಗೆ ೬೦೦ ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಇಷ್ಟೊಂದು ಕಡಿಮೆ ಅವಧಿಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಹಿಳೆಯರು ಉಚಿತವಾಗಿ ಓಡಾಡಿದ ನಿದರ್ಶನ ಎಲ್ಲೂ ಇಲ್ಲ. ಇದಕ್ಕಾಗಿ ಅನೇಕ ಪ್ರಶಸ್ತಿಗಳು ಬಂದಿದ್ದು, ಸರ್ಕಾರದಿಂದ ಈ ವೆಚ್ಚವನ್ನು ಭರಿಸಲು ೧೫,೪೨೨ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ತಾವು ಸಚಿವರಾದ ಬಳಿಕ ಎರಡೂವರೆ ವರ್ಷಗಳ ಅವಧಿಯಲ್ಲಿ ನಿಗಮಕ್ಕೆ ಸುಮಾರು ೫,೮೦೦ ಬಸ್‌ಗಳನ್ನು ಖರೀದಿಸಲಾಗಿದೆ. ಹಿಂದೆ ನಾಲ್ಕು ವರ್ಷಗಳಲ್ಲಿ ನಾನಾ ಕಾರಣಗಳಿಂದ ಕೆಎಸ್‌ಆರ್‌ಟಿಸಿಯಿಂದ ಬಸ್ ಖರೀದಿಸಿರಲಿಲ್ಲ. ಈ ನಡುವೆ ನಿಗಮಕ್ಕೆ ೯ ಸಾವಿರ ಸಿಬ್ಬಂದಿಯನ್ನು ಭರ್ತಿ ಮಾಡಲಾಗಿದೆ. ಒಂದು ಸಾವಿರ ಮಂದಿಯನ್ನು ಅನುಕಂಪದ ಆಧಾರದಲ್ಲಿ ನೇಮಕ ಮಾಡಲಾಗಿದೆ ಎಂದು ಹೇಳಿದರು.

    ಇಲ್ಲಿನ ಒಂದೂವರೆ ಎಕರೆ ಪ್ರದೇಶದಲ್ಲಿ ಸುಮಾರು ೨೦ ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ೧೪ ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ನಿಲ್ದಾಣಕ್ಕೆ ಶಾಸಕರಾದ ಹೆಚ್.ಡಿ.ತಮ್ಮಯ್ಯ ಅವರು ಕಾರಣಕರ್ತರು. ಅಲ್ಲದೆ, ಸುಮಾರು ೨.೩೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ೧೨ ವಸತಿಗೃಹಗಳನ್ನು ಉದ್ಘಾಟಿಸಲಾಗಿದೆ ಎಂದರು.

    ಈಗಾಗಲೇ ೯.೧೫ ಕೋಟಿ ರೂ. ವೆಚ್ಚದಲ್ಲಿ ತರೀಕೆರೆ ಬಸ್ ನಿಲ್ದಾಣ ಹಾಗೂ ೬ ಕೋಟಿ ರೂ. ವೆಚ್ಚದಲ್ಲಿ ಕಡೂರು ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶೃಂಗೇರಿಯಲ್ಲಿ ೮.೮೨ ಲಕ್ಷ ರೂ. ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸಲು ಅನುದಾನ ಒದಗಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭವಾಗಿದೆ. ಅಲ್ಲದೆ ಬೀರೂರಿನ ಬಸ್ ನಿಲ್ದಾಣವನ್ನು ೨.೫ ಕೋಟಿ ರೂ. ವೆಚ್ಚದ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ತರೀಕೆರೆಯಲ್ಲಿ ಬಸ್ ಘಟಕ ನಿರ್ಮಾಣಕ್ಕೆ ೯ ಕೋಟಿ ರೂ. ಗಳ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

    ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅವರು ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮವನ್ನು ನೀಡಿದ ಜಿಲ್ಲೆ ಇದು. ಜೊತೆಗೆ ತಾವು ಕೂಡ ಈ ಜಿಲ್ಲೆಯವರೇ ಆಗಿದ್ದು, ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ.ತಮ್ಮಯ್ಯ ಅವರು ಮಾತನಾಡಿ, ಈ ನಗರಕ್ಕೆ ಹೈಟೆಕ್ ಬಸ್ ನಿಲ್ದಾಣದ ಅವಶ್ಯಕತೆ ಇದೆ ಎಂಬುದು ಚಿಕ್ಕಮಗಳೂರು ಜನತೆಯ ಆಶಯವಾಗಿತ್ತು. ರಾಜ್ಯ ಸರ್ಕಾರದ ಆಸಕ್ತಿಯಿಂದ ೧೯.೮೭ ಕೋಟಿ ರೂ.ಗಳ ವೆಚ್ಚದ ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರಕಿದೆ ಎಂದು ತಿಳಿಸಿದರು.

    ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಾರ್ಷಿಕ ೫೭ ಸಾವಿರ ಕೋಟಿ ರೂ.ಗಳ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ರಾಜ್ಯದ ಸಾರ್ವಜನಿಕರ ಬದುಕಿನ ತಲಾದಾಯದಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿರುವಂತಾಗಿದೆ ಎಂದರು. ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ನವೆಂಬರ್ ೧೬ ರಂದು ಗುದ್ದಲಿಪೂಜೆ ನೆರವೇರಿಸಲಾಗಿದೆ. ಡಿಸೆಂಬರ್ ಒಂದರಿಂದ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಮಾರ್ಚ್ ೩೧ ರೊಳಗೆ ೨೨.೫ ಕೋಟಿ ರೂ.ವೆಚ್ಚದಲ್ಲಿ ನಗರದ ಎಲ್ಲಾ ಪ್ರಮುಖ ರಸ್ತೆಗಳ ಡಾಂಬರೀಕರಣ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು. ೩೫ ಕೋಟಿ ರೂ.ಗಳ ವೆಚ್ಚದಲ್ಲಿ ಗ್ರಾಮಾಂತರ ಭಾಗದ ಎಲ್ಲಾ ರಸ್ತೆಗಳನ್ನು ಕೂಡ ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

    ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿದರು. ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾಗೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಟಿ.ಡಿ.ರಾಜೇಗೌಡ, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಸಿ.ಶಿವಾನಂದಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಮುಖಂಡರಾದ ಕೆ.ಎಸ್.ಶಾಂತೇಗೌಡ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಗುತ್ತಿಗೆದಾರ ರವಿಶಂಕರ್, ಕಾರ್ಯಕ್ರಮದಲ್ಲಿದ್ದರು.

    New buses to be provided to all districts including Chikkamagaluru soon

  • ಸಮಯೋಚಿತ ಬೆಂಬಲಕ್ಕಾಗಿ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಿ

    ಸಮಯೋಚಿತ ಬೆಂಬಲಕ್ಕಾಗಿ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಿ

    ಚಿಕ್ಕಮಗಳೂರು:  ಪ್ಲಾಂಟೇಷನ್ ವಲಯ ಪುನಶ್ಛೇತನಗೊಳಿಸಲು ನೀತಿ ಸಮನ್ವಯ ಮತ್ತು ಸಮಯೋಚಿತ ಬೆಂಬಲಕ್ಕಾಗಿ ಮಿಸಲಾದ ಪ್ಲಾಂಟೇಶನ್ ನಿರ್ದೇಶನಾಲಯ ಸ್ಥಾಪಿಸಬೇಕೆಂದು ಕೆಪಿಎ ಅಧ್ಯಕ್ಷ ಎ.ರಮೇಶರಾವ್ ಆಗ್ರಹಿಸಿದರು.

    ಕರ್ನಾಟಕ ಪ್ಲಾಂಟರ್‍ಸ್ ಅಸೋಸಿಯೇಷನ್ ತೋಟಗಾರಿಕಾ ವಲಯದ ಸಮಸ್ಯೆಗಳು ಕುರಿತಂತೆ ನಗರದ ದಿ ಸೆರಾಯ್ ಹೋಟೇಲ್ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಅಭಿಪ್ರಾಯ ಹಂಚಿಕೊಂಡರು.

    ಹವಾಮಾನದಲ್ಲಿ ವೈಪರಿತ್ಯ, ಕಾರ್ಮಿಕರ ಕೊರತೆ, ಮಾನವ-ಪ್ರಾಣಿ ಸಂಘರ್ಷ, ಬ್ರ್ಯಾಂಡಿಂಗ್‌ನಲ್ಲಿ ತೊಡಕು, ಮಾರುಕಟ್ಟೆ ಅಸ್ಥಿರv, ನಿಯಂತ್ರಿತ ಹೊರೆಗಳನ್ನು ನಿಭಾಯಿಸಲು ವಿಶೇಷ ಪರಿಣಿತಿಯನ್ನು ಒದಗಿಸುವಂತೆ ಪ್ಲಾಂಟೇಷನ್ ನಿರ್ದೇಶನಾಲಯ ಕಾರ್‍ಯನಿರ್ವಹಿಸಬೇಕೆಂದವರು ಆಗ್ರಹಿಸಿದರು. ಕೇರಳ ಮಾದರಿಯ ಪ್ಲಾಂಟೇಶನ್ ಡೈರಕ್ಟರಿ ಅಗತ್ಯವೆಂದು ಪ್ರತಿಪಾದಿಸಿದರು.

    ಕಾಫಿ, ಟೀ, ಏಲಕ್ಕಿ, ಮೆಣಸು, ರಬ್ಬರ್ ಮತ್ತಿತರರ ತೋಟಗಾರಿಕಾ ವಲಯದ ವಿವಿಧ ಬೆಳೆಗಳಲ್ಲಿ ತೊಡಗಿರುವ ವೈಯಕ್ತಿಕ ತೋಟಗಾರರು, ಸಂಸ್ಥೆಗಳು, ಕಂಪನಿಗಳನ್ನು ಒಳಗೊಂಡ ಸಂಸ್ಥೆ ಕರ್ನಾಟಕ ಪ್ಲಾಂಟರ್‍ಸ್ ಅಸೋಸಿಯೇಷನ್ ೧೯೫೮ರಲ್ಲಿ ಸ್ಥಾಪನೆಗೊಂಡಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಚಾಮರಾಜನಗರ, ದಕ್ಷಿಣಕನ್ನಡ ಮತ್ತು ಮೈಸೂರು ಸೇರಿದಂತೆ ಪ್ರಮುಖ ತೋಟಗಾರಿಕಾ ಜಿಲ್ಲೆಗಳಲ್ಲಿ ಸದಸ್ಯರನ್ನು ಹೊಂದಿದೆ. ತೋಟಗಾರಿಕೆ-ಕೈಗಾರಿಕೆಯನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದರು.

    ಉದ್ಯಮವನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು, ತೋಟದಾದ್ಯಂತ ಜೈವಿಕ ವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆ ಉತ್ತೇಜಿಸುವುದು, ತೋಟಗಾರಿಕೆ ಸಮಸ್ಯೆ ನಿವಾರಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಹಿನ್ನಲೆ ಹೊಂದಿರುವ ಕೆಪಿಎ ತೋಟಗಾರರು ಮತ್ತು ಕಾರ್ಮಿಕರ ಹಿತಾಸಕ್ತಿ ರಕ್ಷಿಸಲು ಬದ್ಧತೆ ಹೊಂದಲಾಗಿದೆ ಎಂದರು.

    ಉದ್ಯಮದ ಬೆಳವಣಿಗೆಗೆ ಅನುಕೂಲಕರವಾದ ಪರಿಸರ ನಿರ್ಮಾಣ, ಸರ್ಕಾರಿ ನೀತಿಗಳು ಹಾಗೂ ಶಾಸಕಾಂಗ ಕ್ರಮಗಳ ಮೇಲೆ ಕೆಪಿಎ ಸಕ್ರಿಯವಾದ ಪ್ರಭಾವ ಬೀರುತ್ತಿದೆ. ತೋಟದ ಕಾರ್ಮಿಕರಿಗಾಗಿ ವೇತನ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತು ಕಾರ್ಮಿಕ ಸಂಘಗಳೊಂದಿಗೆ ಅಗತ್ಯ ಮಾತುಕತೆಗಳನ್ನು ನಡೆಸುತ್ತದೆ. ಸ್ಥಿರತೆಯನ್ನು ಉತ್ತೇಜಿಸುತ್ತದೆ. ಸದಸ್ಯರ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯ ಮಾಡಲು ಪ್ರಮುಖ ಅಂಕಿ ಅಂಶಗಳನ್ನು ನೀಡುವುದರ ಜೊತೆಗೆ ಉತ್ತಮ ಅಭ್ಯಾಸಗಳನ್ನು ಸಂಗ್ರಹಿಸಿ ಪ್ರಸಾರ ಮಾಡುತ್ತಿದೆ ಎಂದು ರಮೇಶರಾವ್ ವಿವರಿಸಿದರು.

    ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸಲು ಆಧುನಿಕ ಮತ್ತು ವೈಜ್ಞಾನಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವತ್ತ ಗಮನಹರಿಸುವ ತರಬೇತಿ ಕಾರ್‍ಯಕ್ರಮಗಳನ್ನು ಉತ್ತೇಜಿಸಲಾಗುತ್ತಿದೆ. ಕೆಪಿಎ ಸಚಿವಾಲಯ ಮತ್ತು ಆಡಳಿತ ಕಛೇರಿಯು ಚಿಕ್ಕಮಗಳೂರಿನಲ್ಲಿ ನೆಲೆಗೊಂಡಿದೆ ಎಂದರು.

    ರಾಜ್ಯದ ತೋಟಗಾರಿಕಾ ಉದ್ಯಮದ ಮೇಲೆ ಹವಾಮಾನದ ಬದಲಾವಣೆಯು ಗಣನೀಯ ಮತ್ತು ಗಂಭೀರ ಪರಿಣಾಮ ಬೀರಿದೆ. ಅನಿರೀಕ್ಷಿತ ಮಳೆಯೊಂದಿಗೆ ಜಾಗತಿಕ ತಾಪಮಾನ ಏರಿಕೆಯು ಸಂಕಷ್ಟಕ್ಕೀಡು ಮಾಡಿದೆ. ತೀವ್ರ ಬರ, ಭೂಕುಸಿತ ಮತ್ತು ಮಣ್ಣಿನ ಸವೆತ ಕಾಣುತ್ತಿದ್ದೇವೆ. ಇವೆಲ್ಲ ಮಣ್ಣು ಮತ್ತು ಸಸ್ಯಗಳ ಆರೋಗ್ಯ ಕುಂದಿಸುತ್ತಾ ಬೆಳೆಗಳಿಗೆ ಹಾನಿ ಮಾಡುತ್ತಿದೆ. ಸಸ್ಯಗಳ ಬದುಕುಳಿಯುವಿಕೆಗೆ ಧಕ್ಕೆ ತರುತ್ತಿದ್ದು, ಬೆಳೆ ಇಳುವರಿ ಕುಂದಿಸಿರುವುದು ಸುಸ್ಥಿರತೆಗೆ ಬೆದರಿಕೆಯಾಗಿದೆ ಎಂದರು.

    ನುರಿತ ಕಾರ್ಮಿಕರ ಕೊರತೆ ನಿರಂತರವಾಗಿ ಹೆಚ್ಚುತ್ತಿದ್ದು, ಕಾರ್ಮಿಕರು ಕೃಷಿಯೇತರ ವಲಯಗಳಿಗೆ ವಲಸೆ ಹೋಗುತ್ತಿರುವುದು ಕಾಣುತ್ತಿದ್ದೇವೆ. ತೋಟಗಾರಿಕೆ ನಿರ್ಧಿಷ್ಠ ಕಾರ್‍ಯಾಚರಣೆಗಳಿಗೆ ಅಗತ್ಯ ತರಬೇತಿಗೆ ಒತ್ತು ನೀಡಬೇಕಾಗಿದೆ. ಕಾರ್ಮಿಕರ ಅವಲಂಬನೆ ಮತ್ತು ವೆಚ್ಚಗಳನ್ನು ತಗ್ಗಿಸಲು ಯಾಂತ್ರಿಕರಣಕ್ಕಾಗಿ ಉಪಕರಣಗಳನ್ನು ಅಭಿವೃದ್ಧಿಪಡಿಸಲು ಆಕ್ರಮಣಕಾರಿ ಸಂಶೋಧನೆ ಮತ್ತು ಬೆಂಬಲದೊಂದಿಗೆ ಮಾನವ ಶಕ್ತಿಗೆ ತರಬೇತಿ ನೀಡುವುದರ ಜೊತೆಗೆ ಸಂಬಂಧಪಟ್ಟ ಯಂತ್ರೋಪಕರಣಗಳಿಗೆ ಸರ್ಕಾರ ಅಧಿಕ ಸಹಾಯಧನ ನೀಡಿ ಬೆಂಬಲಿಸಬೇಕೆಂದು ಕೆಪಿಎ ಆಗ್ರಹಿಸಿದೆ.

    ತೋಟಗಳಲ್ಲಿ ಮೂಲಭೂತ ಸುಧಾರಣೆ ಸಂಬಂಧಿಸಿದ ಹೂಡಿಕೆಗಳಿಗೆ ತೆರಿಗೆ ವಿನಾಯ್ತಿ, ಪ್ರಧಾನಮಂತ್ರಿ ಫಸಲ್ ಭೀಮಾಯೋಜನೆ ಅಡಿಯಲ್ಲಿ ಕಾಫಿ ಮತ್ತು ಟೀಯನ್ನು ತರಲು ಹವಾಮಾನ ಆಧರಿತ ಬೆಳೆ ವಿಮಾಯೋಜನೆ ಒದಗಿಸಬೇಕು. ಸಿಐಬಿಐಎಲ್ ನಿಂದ ಕೃಷಿ ಸ್ವರೂಪದ ತೋಟಗಾರಿಕೆಯನ್ನು ಹೊರಗಿಡಬೇಕು. ಭಾರತೀಯ ಕಾಫಿ ಮತ್ತು ಟೀ ಬ್ರ್ಯಾಂಡ್‌ಗಳನ್ನು ಉತ್ತೇಜಿಸಬೇಕು. ಉದ್ಯಮದಲ್ಲಿ ನಾವಿನ್ಯತೆ ಪ್ರೋತ್ಸಾಹಿಸಲು ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವ ವಿದ್ಯಾನಿಲಯಗಳೊಂದಿಗೆ ಸಹಕರಿಸಬೇಕೆಂದು ಅವರು ಆಗ್ರಹಿಸಿದರು.

    ಪ್ಲಾಂಟೇಶನ್ ಜಿಲ್ಲೆಗಳಲ್ಲಿ ಸಾಗಾಣೆ ಮತ್ತು ಪ್ರಯಾಣಕ್ಕೆ ರಸ್ತೆಗಳ ದುರಸ್ತಿ ಮತ್ತು ನಿರ್ವಹಣೆ ಮಾಡಬೇಕು, ಬಿಳಿಕಾಂಡಕೊರಕ, ರೋಗನಿರೋಧಕ ತಳಿಗಳ ಮೇಲೆ ಗಮನಕೇಂದ್ರೀಕರಿಸಿ ಹೆಚ್ಚು ಇಳುವರಿ ನೀಡುವ ರೋಗ ಮತ್ತು ಬರನಿರೋಧಕ ಕಾಫಿ ತಳಿಗಳ ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದ ರಮೇಶರಾವ್, ಪ್ರಾಣಿ ಮತ್ತು ಮಾನವ ಸಂಘರ್ಷ ತಪ್ಪಿಸಲು ರಾಜ್ಯಸರ್ಕಾರ ವಿಶೇಷ ಗಮನಹರಿಸಬೇಕು. ಕಾಫಿ ಸಂಸ್ಕರಣಾ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆ, ನೀರು ಸಂಗ್ರಹಣಾ ಟ್ಯಾಂಕ್‌ಗಳ ನಿರ್ಮಾಣಕ್ಕೆ ನೆರವು ನೀಡಬೇಕೆಂದವರು ಆಗ್ರಹಿಸಿದರು.

    ಕೆಪಿಎ ಸಹಕಾರ್‍ಯದರ್ಶಿ ಭವೀಶ್‌ನಾಚಪ್ಪ, ಉಪಾಧ್ಯಕ್ಷ ಸಲ್ಮಾನ್‌ಬಷೀರ್, ಉಪಾಸಿ ಅಧ್ಯಕ್ಷ ಅಜಯ್‌ತಿಪ್ಪಯ್ಯ, ಕಾರ್‍ಯದರ್ಶಿ ಆರ್.ಸಂಜಿತ್, ಕಾಫಿ ಸಮಿತಿ ಅಧ್ಯಕ್ಷ ಸಹದೇವಬಾಲಕೃಷ್ಣ ವೇದಿಕೆಯಲ್ಲಿದ್ದು ತೋಟಗಾರಿಕಾ ಬೆಳೆಗಳ ಸಮಸ್ಯೆ ಚರ್ಚಿಸಿದರು.

    Establish a Plantation Directorate for timely support

  • ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಬೀದಿನಾಯಿಗಳನ್ನು ಸೂಕ್ತ ಸ್ಥಳಕ್ಕೆ ಬಿಡಲು ಕ್ರಮ

    ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಬೀದಿನಾಯಿಗಳನ್ನು ಸೂಕ್ತ ಸ್ಥಳಕ್ಕೆ ಬಿಡಲು ಕ್ರಮ

    ಚಿಕ್ಕಮಗಳೂರು: ಯಾವುದೇ ಸಂಸ್ಥೆಗಳ ಆವರಣದಲ್ಲಿ ಕಂಡು ಬರುವ ಪ್ರತಿಯೊಂದು ಬೀದಿ ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ ಅವುಗಳನ್ನು ಗೊತ್ತುಪಡಿಸಿದ ಪ್ರದೇಶಗಳಿಗೆ ಸ್ಥಳಾಂತರಿಸಬೇಕು; ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

    ಇಂದು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ಆದೇಶಗಳ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಚತೆ ವಹಿಸಿ ಅವರು ಮಾತನಾಡಿ ಸ್ವಚ್ಛತೆ ಮತ್ತು ನಾಯಿ ಪ್ರವೇಶ ತಡೆಗಟ್ಟುವಿಕೆಗೆ ನೋಡಲ್ ಅಧಿಕಾರಿಯನ್ನು ನೇಮಿಸಿ ಪ್ರವೇಶ ದ್ವಾರದಲ್ಲಿ ಸಂಪರ್ಕ ವಿವರ  ಪ್ರದರ್ಶಿಸಿ ಮತ್ತು ಸ್ಥಳೀಯ ಸಂಸ್ಥೆಗೆ ತಿಳಿಸಬೇಕು.

    ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯ ಸಹಯೋಗದೊಂದಿಗೆ ಶಾಲಾ ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ರೇಬಿಸ್ ರೋಗದ ಕುರಿತು ಅರಿವು ಮೂಡಿಸಬೇಕು ಎಂದ ಅವರು, ನಾಯಿ ಕಡಿತಕ್ಕೆ ಪ್ರಥಮ ಚಿಕಿತ್ಸೆ ಒದಗಿಸುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು.

    ಶಾಲಾ ಆವರಣ, ಅಂಗನವಾಡಿ ಆವರಣ, ಕ್ರೀಡಾ ಸಂಕೀರ್ಣ ಮತ್ತು ಕ್ರೀಡಾಂಗಣಗಳಲ್ಲಿ ಬೀದಿ ನಾಯಿಗಳ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಿದ ಅವರು, ಬೇಲಿ, ಗಡಿ ಗೋಡೆಗಳು, ದ್ವಾರಗಳು ಮತ್ತು ಬೀದಿ ನಾಯಿಗಳ ಪ್ರವೇಶವನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಖಚಿತಪಡಿಸಿಕೊಂಡು ವರದಿ ನೀಡಬೇಕು. ಎಲ್ಲಾ ಕಡೆಗಳಲ್ಲಿ ರೇಬಿಸ್ ವಿರೋಧಿ ಲಸಿಕೆ ಮತ್ತು ಇಮ್ಯುನೊಗ್ಲೋಬಿನ್‌ನ ಕಡ್ಡಾಯ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಮತ್ತು ನಗರ ಪ್ರದೇಶಗಳಲ್ಲಿ ಬಿಡಾಡಿ ದನಗಳು ಮತ್ತು ಬೀದಿ ಪ್ರಾಣಿಗಳನ್ನು ಗಮನಿಸಿ ಅವುಗಳನ್ನು ರಕ್ಷಿಸಿ ಗೊತ್ತುಪಡಿಸಿದ ಸ್ಥಳಗಳಿಗೆ ಸ್ಥಳಾಂತರಿಸುವಂತೆ ತಿಳಿಸಿದರು.

    ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮಾಲೀಕರು ಮತ್ತು ಸಾರ್ವಜನಿಕರು ತಿಂಡಿ ಪ್ಯಾಕೇಟ್ ಮುಂತಾದವುಗಳನ್ನು ಕಸದ ಬುಟ್ಟಿಗೆ ಹಾಕಬೇಕು. ಜೊತೆಗೆ ಶಾಲೆಯಲ್ಲಿ ನೀಡುವ ಬಿಸಿ ಊಟವನ್ನು ವಿದ್ಯಾರ್ಥಿಗಳು ಎಸೆಯುವುದರಿಂದ ಶಾಲೆ ಆವರಣಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿರಲು ಕಾರಣ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೇಳಿದರು.

    ಬೀದಿ ನಾಯಿಗಳಿಗೆ ಎಲ್ಲಿ ಬೇಕೆಂದರಲ್ಲಿ ಆಹಾರವನ್ನು ನೀಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕಸ ಸಂಗ್ರಹಣೆ ಇರುವ ಸ್ಥಳದಲ್ಲಿ ಬೀದಿ ನಾಯಿಗಳು ಇರುವುದು ಹೆಚ್ಚು, ರಸ್ತೆಯಲ್ಲಿರುವ ಕಸವನ್ನು ಆದಷ್ಟು ಬೇಗ ವಿಲೇವಾರಿ ಮಾಡುವಂತೆ ತಿಳಿಸಿದ ಅವರು. ಜನರಿಗೆ ಬೀದಿ ನಾಯಿಗಳ ಹಾವಳಿ ತಡೆಗಟ್ಟುವ ಸಂಬಂಧ ಅರಿವು ಮೂಡಿಸಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನಕ್ಕೆ ಹಾಕಲು ಸಾರ್ವಜನಿಕರಿಗೆ ತಿಳಿ ಹೇಳಬೇಕು ಎಂದರು.

    ಸಭೆಯಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿ.ಟಿ.ಜಯಕುಮಾರ್, ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಸಡಾ.ಮಹೇಶ್, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

    Steps to sterilize stray dogs and release them to appropriate places

  • ಅಮಾಯಕ ಬಾಲಕನ ಸಾವಿನ ತನಿಖೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

    ಅಮಾಯಕ ಬಾಲಕನ ಸಾವಿನ ತನಿಖೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ

    ಚಿಕ್ಕಮಗಳೂರು: ಬಾನಳ್ಳಿ ಬಗ್ಗಸಗೋಡು ಗ್ರಾಮದ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗಕ್ಕೆ ಒಳಪಡಿಸಿ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ದಸಂಸ ಮುಖಂಡ ರುಗಳು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

    ಈ ವೇಳೆ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ ಮೂಡಿಗೆರೆ ತಾಲ್ಲೂಕಿನ ಬಾ ನಳ್ಳಿ ಬಗ್ಗಸಗೋಡು ಗ್ರಾಮದ ಪ.ಜಾತಿ ಜನಾಂಗದ ಶಿವಣ್ಣ ಎಂಬುವವರ ಪುತ್ರ ಪ್ರೀತಂ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಆದರೆ ಕಳೆದ ೧೫ ದಿನಗಳಿಂದ ಶಾಲೆಗೆ ಗೈರಾಗಿದ್ದು ಮನಗಂಡ ಪಾಲಕರು ತೀವ್ರ ಗಾಬರಿಗೊಂಡಿದ್ದಾರೆ ಎಂದರು.

    ಪ್ರೀತಂ ಎಂಬ ಬಾಲಕನನ್ನು ಭಾರತಿ ಬೈಲ್ ಗ್ರಾಮದ ವ್ಯಕ್ತಿಯೊರ್ವರು, ಪಾಲಕರು ಇಲ್ಲದ ಸಮಯ ದಲ್ಲಿ ಬಲವಂತವಾಗಿ ಟಿಂಬರ್ ಕೆಲಸಕ್ಕೆ ಕರೆದೊಯ್ದುದಿದ್ದಾರೆ. ಕೆಲಗಂಟೆ ನಂತರ ಮನೆಗೆ ಹಿಂತಿರುಗಿದಾಗ ಶಿವಣ್ಣ, ಕೆಲಸದಾಳಿನ ಮೂಲಕ ಪ್ರೀತಂ ತಲೆಸುತ್ತಿ ಬಿದ್ದಿರುವುದಾಗಿ ತಿಳಿಸಿದ್ದು ಕೂಡಲೇ ತೆರಳಿದಾಗ ಬಿದ್ದಿ ರುವ ಜಾಗ ಬದಲಿಸಿ, ಬೇರೆ ಸಮತಟ್ಟಾದ ಜಾಗದಲ್ಲಿ ಪ್ರೀತಂನನ್ನು ಇರಿಸಿದ್ದಾರೆ ಎಂದು ಹೇಳಿದರು.

    ಗಾಬರಿಗೊಂಡ ಪಾಲಕರು ಶೀಘ್ರವೇ ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು, ವೈದ್ಯರು ಪರೀಕ್ಷಿಸಿದಾಗ ಮೃತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ವಿಚಾರ ತಿಳಿದ ಭಾರತಿ ಬೈಲ್ ಗ್ರಾಮದ ವ್ಯಕ್ತಿ ಶಿವಣ್ಣ ಎಂಬುವವರನ್ನು ಬಲವಂತದಿಂದ ಬಣಕಲ್ ಪೊಲೀಸ್ ಠಾಣೆಗೆ ಕರೆದುಕೊಂಡು ಅವರೇ ಹೇಳಿಕೆ ಯಂತೆ ಪ್ರಕರಣ ದಾಖಲಿಸಿದ್ದಾರೆ ಎಂದರು.

    ಪ್ರೀತಂ ಸಾವು ಹೆಚ್ಚು ಭಾರ ಹೊರೆಸಿದ ಕಾರಣ ಕುಸಿದು ಬಿದ್ದಿರುವ ಸಾಧ್ಯತೆಯಿದೆ. ಹಾಗೂ ಬಾಲ ಅಪರಾಧ ಕಾಯ್ದೆಯ ನಿಯಮದಂತೆ ಮಕ್ಕಳನ್ನು ಯಾವುದೇ ಕೆಲಸಕ್ಕೆ ಕರೆದುಕೊಂಡು ಹೋಗುವಂತಿಲ್ಲ. ಇದು ಪೊಲೀಸ್ ಇಲಾಖೆಗೆ ತಿಳಿದಿದ್ದರೂ ಸಹ ಪ್ರೀತಂ ಬಾಲಕ ಸಾವನ್ನು ಮುಚ್ಚಿ ಹಾಕಲಾಗಿದೆ ಎಂದು ದೂರಿದರು.

    ಈ ಪ್ರಕರಣದ ಸಂಬಂಧ ಶಿವಣ್ಣ ಎಂಬುವವರು ಅನೇಕ ತಿಂಗಳು ಕಾಲ ಪೊಲೀಸ್ ಇಲಾಖೆಗೆ ತೆರ ಳಿದರೂ ನ್ಯಾಯ ದೊರಕಿಲ್ಲ. ಅಲ್ಲದೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ನೇರ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮ ಕೈಗೊಂಡಿರುವುದಿಲ್ಲ ಎಂದರು.

    ಕೂಡಲೇ ಪ್ರೀತಂ ಸಾವಿನ ತನಿಖೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಕುಟುಂಬಸ್ಥರ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂ ಜಯ್ಯ, ಮುಖಂಡರುಗಳಾದ ಸಂತೋಷ್ ಲಕ್ಯಾ, ಮಂಜುನಾಥ್ ನಂಬಿಯಾರ್, ವಿರೂಪಾಕ್ಷ, ರಾಕೇಶ್, ಪುಟ್ಟರಾಜು, ಪೂರ್ಣೇಶ್, ಮೃತನ ಕುಟುಂಬಸ್ಥರಾದ ಶಿವಣ್ಣ, ಪ್ರೀತಿ ಹಾಜರಿದ್ದರು.

    Dasamsa protests against investigation into death of innocent boy

  • ರಾಜ್ಯದ ಕಾಂಗ್ರೆಸ್ ವರಿಷ್ಟ ನಾಯಕರ ಅವಹೇಳನ ಖಂಡಿಸಿ ಪ್ರತಿಭಟನೆ

    ರಾಜ್ಯದ ಕಾಂಗ್ರೆಸ್ ವರಿಷ್ಟ ನಾಯಕರ ಅವಹೇಳನ ಖಂಡಿಸಿ ಪ್ರತಿಭಟನೆ

    ಚಿಕ್ಕಮಗಳೂರು:  ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಗೃಹಸಚಿವ ರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂ ದು ಆಗ್ರಹಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭ ಟನೆ ನಡೆಸಿದರು.

    ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ ರಾಷ್ಟ್ರದ ಪ್ರಜಾತಂತ್ರವು ಮೋದಿ ಆಡಳಿತದಲ್ಲಿ ಅಪಾಯದ ಸ್ಥಿತಿಯಲ್ಲಿದೆ. ಅಧಿಕಾರಕ್ಕಾಗಿ ಬಿಜೆಪಿ, ಸಂಘ-ಪರಿವಾರದ ಕಾರ್ಯಕರ್ತ ರು ಎಲ್ಲಾ ಮಟ್ಟಕ್ಕೂ ಇಳಿಯುತ್ತಿದೆ. ಅಲ್ಲದೇ ವಿಶ್ವ ಬ್ಯಾಂಕ್‌ನಲ್ಲಿ ಕೇಂದ್ರ ಸರ್ಕಾರ ಸಾಲ ಪಡೆದು, ಬಿಹಾರ ದಲ್ಲಿ ಹಂಚಿಕೆಗೊಳಿಸಿ ಚುನಾವಣೆ ಎದುರಿಸಿದೆ ಎಂದು ಆರೋಪಿಸಿದರು.

    ಕ್ಷೇತ್ರದ ಮಾಜಿ ಶಾಸಕ ಸಿ.ಟಿ.ರವಿ, ಸಿದ್ದರಾಮಯ್ಯ ಬಗ್ಗೆ ಪದೇ ಪದೇ ಅವಮಾನಿಸಿದ ಕಾರಣ ಚಿಕ್ಕಮ ಗಳೂರು ಸೇರಿದಂತೆ ಪ್ರತಿ ತಾಲ್ಲೂಕಿನಲ್ಲಿ ಬಿಜೆಪಿ ದೂಳಿಪಟವಾಗಿದೆ. ಅವರದೇ ಪಕ್ಷದ ಮಾಜಿ ಮುಖ್ಯಮಂ ತ್ರಿ ಲೈಂಗಿಕ ಕಿರುಕುಳ, ಚಿತ್ರತಾರೆ ಕರೆದೊಯ್ದ ಪ್ರಕರಣ ಹಾಗೂ ೧೫ಕ್ಕೂ ಮಂದಿ ಮುಂಬೈನಲ್ಲಿ ಅಶ್ಲೀಲ ವೀಡಿ ಯೋ ನಡೆಸಿದವರ ವಿರುದ್ಧ ಮಾತನಾಡುತ್ತಿಲ್ಲವೆಕೇ ಎಂದು ಪ್ರಶ್ನಿಸಿದರು.

    ದೆಹಲಿ ಕೆಂಪುಕೋಟೆಯಲ್ಲಿ ಬಾಂಬ್ ಸ್ಪೋಟಿಸಿ ಕೆಲವು ಇಸ್ಲಾಂಕರಣಕ್ಕೆ ಭಯೋತ್ಪಾದಕರು ಮುಂದಾ ದರೆ, ರಾಷ್ಟ್ರದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಸಂಘಟನೆಗಳು ಮನಬಂದಂತೆ ಹೇಳಿಕೆ ನೀಡುವ ಮೂಲಕ ಹಿಂ ದೂ ಭಯೋತ್ಪಾದಕರಾಗಿ ಸನಾತನ ಧರ್ಮದ ಅಪಮಾನಿಸುವ ಜೊತೆಗೆ ಧರ್ಮದ ಅದೋಗತಿಗೆ ಕಾರಣೀ ಭೂತರಾಗಿದ್ದಾರೆ ಎಂದು ಹೇಳಿದರು.

    ಇತ್ತೀಚೆಗೆ ಕ್ಷೇತ್ರದ ಮಾಜಿ ಶಾಸಕರು ಗೋಮಾಂಸ ಜಿಲ್ಲೆಯಲ್ಲಿ ವಿಪರೀತವಾಗಿದೆ ಎಂದು ಪ್ರತಿಭಟಿಸು ತ್ತಾರೆ. ಕಳೆದ ಎರಡು ದಶಕಗಳೀಂದ ಶಾಸಕರಾಗಿದ್ದ ಸಿ.ಟಿ.ರವಿ ತಮ್ಮ ಅವಧಿಯಲ್ಲಿ ಗೋಮಾಂಸ ನಿಯಂ ತ್ರಣಕ್ಕೆ ತರದೇ ಕಮೀಷನ್ ಪಡೆಯುತ್ತಿರೇ ಎಂದು ಪ್ರಶ್ನಿಸಿದ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಇನ್ನೊಬ್ಬರ ಮೇಲ ಗೂಬೆ ಕೂರಿಸುವುದು ಸರಿಯಲ್ಲ ಎಂದು ದೂರಿದರು.

    ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಮಾತನಾಡಿ ಆರ್‌ಎಸ್‌ಎಸ್ ದೇಶಭಕ್ತರು, ಸಂವಿಧಾನ ಸಂ ರಕ್ಷಕರು ಎಂಬುದನ್ನು ಮರೆತು. ಬಾಯಿಗೆ ಬಂದಂತೆ ಹೇಳಿಕೆ ನೀಡುವ ಹೀನಾಯ ಸಂಸ್ಕೃತಿ ಸಂಘ-ಪರಿ ವಾರದಲ್ಲಿದೆ. ಗೃಹ ಸಚಿವರ ವೈಯಕ್ತಿಕ ಕುಟುಂಬದ ಬಗ್ಗೆ ಪರಿವಾರದ ಕಾರ್ಯಕರ್ತನ ಹೇಳಿಕೆಗೆ ಪೊಲೀ ಸರು ಬಂಧಿಸಿ ಕಾರಾಗೃಹ ಅತಿಥಿ ಮಾಡಿರುವುದು ಒಳ್ಳೆಯ ಕೆಲಸ ಎಂದರು.

    ಸಿದ್ದರಾಮಯ್ಯ ಬಗ್ಗೆ ಸಿದ್ದರಾಮುಲ್ಲಾ ಖಾನ್ ಎಂದ ವ್ಯಕ್ತಿಯನ್ನು ಮನೆಗೆ ಕಳಿಸುವ ಕೆಲಸ ಕಾಂಗ್ರೆಸ್ ಮಾಡಿದೆ. ಬಿಜೆಪಿ ವಿ.ಪಕ್ಷದ ನಾಯಕ ಈಚೆಗೆ ಹೇಳಿಕೆ ನೀಡಿ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇಲ್ಲದಿದ್ದರೆ ಪಕ್ಷವು ನಶಿಸಲಿದೆ ಎಂಬ ಆಧಾರವಿಲ್ಲದೇ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿ ದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ರಾಜ್ಯ ಕಾಂಗ್ರೆಸ್ ವರಿಷ್ಟರ ನಾಯಕರ ಬಗ್ಗೆ ಆವಾಚ್ಯ ಶಬ್ದಗಳ ಬಳಸಿ ನಿಂದಿಸಿರುವ ಗೂಂಡಾಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಸಂ ಸ್ಕೃತಿ, ಸಂಸ್ಕಾರ ಇಲ್ಲದ ಬಿಜೆಪಿ ಮುಖಂಡರು ರಾಜ್ಯ ಗೃಹಸಚಿವ ಪರಮೇಶ್ವರ್ ಹಾಗೂ ಮಕ್ಕಳ ಬಗ್ಗೆ ಮಾತ ನಾಡುವ ನೈತಿಕ ಯೋಗ್ಯತೆಯಿಲ್ಲ ಎಂದು ದೂರಿದರು.

    ಉಪಮುಖ್ಯಮಂತ್ರಿ ಡಿ.ಕೆ.ಶಿ. ವಿರುದ್ಧ ಹಿಂಬದಿಯಲ್ಲಿ ನಿಂದಿಸುವ ಮುಖಂಡರುಗಳು, ನೇರವಾಗಿ ಡಿ.ಕೆ.ಶಿ. ಎದುರು ಹೇಳುವ ಸಾಮರ್ಥ್ಯವಿಲ್ಲ. ಮೂರ್ಖತನವನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ವಹಿಸಬೇಕು. ಮುಂದೆ ಈ ರೀತಿ ಅವಾಚ್ಯ ಶಬ್ದಗಳ ಬಳಸಿದರೆ ಜಿಲ್ಲಾ ಬಿಜೆಪಿ ನಾಯಕರು ಮತ್ತು ಕಾರ್ಯ ಕರ್ತರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಸಿದರು.

    ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ದು ವಾರ್ತನೆ ನಡೆಯಿಂದ ಜನತೆ ಸೋಲುಣಿಸಿ, ಕಾಂಗ್ರೆಸ್ ಜೈಕಾರ ಹಾಕಿದರೂ, ಇನ್ನೂ ಬುದ್ದಿ ಹೀನರಾಗಿ ವರ್ತಿಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ವರಿಷ್ಟರ ನಾಯಕರನ್ನು ಅಪಮಾನಿಸುವ ಹೇಳಿಕೆ ಎಂದಿಗೂ ರಾಜ್ಯದ ಜನತೆ ಸಹಿಸುವುದಿಲ್ಲ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಸದಸ್ಯ ಎಂ.ಸಿ.ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಕೆಪಿಸಿಸಿ ವಕ್ತಾರ ಅನಂತು, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಹನೀಫ್, ತಾಲ್ಲೂಕು ಅಧ್ಯಕ್ಷ ಪ್ರವೀಣ್ ಬೆಟ್ಟಗೆರೆ, ನಗರಸಭಾ ಸದಸ್ಯರಾದ ಖಲಂಧರ್, ಜಾವೀದ್, ಶಾದಂ ಆಲಂ ಖಾನ್, ಮುಖಂಡರುಗಳಾದ ಕೆ.ವಿ.ಮಂಜುನಾಥ್, ಹಿರೇಗೌಜ ಶಿವು, ಪ್ರಸಾದ್ ಅಮೀನ್, ಬಸವರಾಜ್, ಪ್ರಕಾಶ್ ರೈ, ಜಗದೀಶ್ ಮತ್ತಿತರರು ಹಾಜರಿದ್ದರು.

    Protest against contempt of senior Congress leaders in the state

  • ಪ್ರೇಕ್ಷಕರ ಮನಗೆದ್ದ ದಕ್ಷ ಯಜ್ಞ ಕಾಲಮಿತಿ ಯಕ್ಷಗಾನ

    ಪ್ರೇಕ್ಷಕರ ಮನಗೆದ್ದ ದಕ್ಷ ಯಜ್ಞ ಕಾಲಮಿತಿ ಯಕ್ಷಗಾನ

    ಚಿಕ್ಕಮಗಳೂರು: ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಬಂಗಾರ ಮಕ್ಕಿಯ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಚಿಟ್ಟಾಣಿ ಬಳಗದಿಂದ ಭಾನುವಾರ ನಡೆದ ದಕ್ಷ ಯಜ್ಞ ಕಾಲಮಿತಿ ಯಕ್ಷಗಾನ ಪೌರಾಣಿಕ ಯುಗದ ವೈಭವವನ್ನು ಅನಾವರಣಗೊಳಿಸಿತು.

    ಭಾಗವತರ ಕಂಚಿನ ಕಂಠದ ಗಾಯನ, ಅಬ್ಬರಿಸಿದ ಹಿಮ್ಮೇಳ, ಕಲಾವಿದರ ಪ್ರಾಸಬದ್ಧ ಚುರುಕು ಸಂಭಾಷಣೆ, ನವಿರು ಹಾಸ್ಯ, ಮಿಂಚಿನ ನೃತ್ಯ, ಅದ್ಭುತ ಅಭಿನಯ ನೋಡುಗರನ್ನು ೫ ಗಂಟೆಗಳ ಕಾಲ ಹಿಡಿದಿಡುವಲ್ಲಿ ಯಶಸ್ವಿಯಾಯಿತು.

    ತನ್ನ ಸತಿಯನ್ನು ಅವಮಾನಗೊಳಿಸಿ ಆಕೆಯ ಸಾವಿಗೆ ಕಾರಣನಾದ ದಕ್ಷನನ್ನು, ಶಿವನು ವೀರಭದ್ರನನ್ನು ಸೃಷ್ಟಿಸಿ ಸಂಹರಿಸಿ ಆತನು ಮಾಡುತ್ತಿದ್ದ ದಕ್ಷ ಯಜ್ಞವನ್ನು ನಾಶಗೊಳಿಸಿದ ಕಥಾ ಹಂದರವನ್ನು ಹೊಂದಿರುವ ಪ್ರಸಂಗವನ್ನು ಪಾತ್ರಧಾರಿಗಳು ಪರಕಾಯ ಪ್ರವೇಶ ಮಾಡಿದವರಂತೆ ಅಭಿನಯಿಸುವ ಮೂಲಕ ಸಬಿಕರ ಮನ ಗೆದ್ದರು.

    ದಕ್ಷನಾಗಿ ಸಂಜಯ ಬೆಳೆಯೂರು, ದಾಕ್ಷಾಯಣಿಯಾಗಿ ಯಲಗುಪ್ಪದ ಸುಬ್ರಹ್ಮಣ್ಯ ಹೆಗಡೆ, ಈಶ್ವರನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ ಮನೋಜ್ಞ ಅಭಿನಯದ ಮೂಲಕ ನೋಡುಗರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರೆ, ಚಪ್ಪರಮನೆ ಶ್ರೀಧರ ಹೆಗಡೆ ನವಿರು ಹಾಸ್ಯದ ಮೂಲಕ ಸಭಿಕರನ್ನು ರಂಜಿಸಿದರು.

    ಭಾಗವತರಾಗಿ ಬ್ರಹ್ಮೂರು ಶಂಕರ ಭಟ್ಟ, ಮದ್ದಳೆಯಲ್ಲಿ ಹಂಡ್ರಮನೆ ನರಸಿಂಹ ಭಟ್ಟ, ಚಂಡೆಯಲ್ಲಿ ಹಳವಳ್ಳಿ ಗಣೇಶ ಗಾಂವ್ಕರ, ಅಗ್ನಿಯಾಗಿ ವಿನಾಯಕ ಗುಂಡ ಬಾಳ, ವೀರಭದ್ರನಾಗಿ ನಿರಂಜನ ಜಾಗನಳ್ಳಿ, ದೇವೇಂದ್ರನಾಗಿ ನಾಗೇಶ ಕುಳಿ ಮನೆ, ಬ್ರಾಹ್ಮಣತಿಯಾಗಿ ರಕ್ಷಿತಾ ಕುಳಿಮನೆ ಗಮನ ಸೆಳೆದರು.

    ೩೫ ವರ್ಷಗಳಿಂದ ನಿರಂತರವಾಗಿ ಕಲಾಸೇವೆ ಮಾಡುತ್ತಿರುವ ಕಲಾವಿದ ಯಲಗುಪ್ಪದ ಸುಬ್ರಹ್ಮಣ್ಯ ಹೆಗಡೆ ಅವರನ್ನು ಈ ವೇಳೆ ಯಕ್ಷಗಾನ ಅಭಿಮಾನಿ ಬಳಗ, ಸಾಂಸ್ಕೃತಿಕ ಸಂಘ ಮತ್ತು ಹವ್ಯಕ ಬಳಗದಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಹೆಗಡೆ, ಯಕ್ಷಗಾನದಲ್ಲಿ ಕನ್ನಡ ಭಾಷೆಯೇ ಪ್ರಧಾನವಾಗಿರುವುದರಿಂದ ಕನ್ನಡವನ್ನುಉಳಿಸಿ ಬೆಳೆಸಿದರೆ ಮಾತ್ರ ಯಕ್ಷಗಾನ ಉಳಿದು ಬೆಳೆಯುತ್ತದೆ ಎಂದರು

    ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕನ್ನಡವನ್ನು ಪ್ರೀತಿಸಬೇಕು, ಉಳಿಸಿ ಬೆಳೆಸಬೇಕು, ಆ ಮೂಲಕ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ಮಾಡಿದರು. ಚಿಟ್ಟಾಣಿ ಬಳಗದ ಮುಖ್ಯಸ್ಥ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿ ತಮ್ಮ ತಂದೆಯವರ ಹೆಸರಿನಲ್ಲಿ ಸಾರ್ವಜನಿಕ ಟ್ರಸ್ಟ್ ಒಂದನ್ನು ಸ್ಥಾಪಿಸುತ್ತಿದ್ದು ಅದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

    ಯಕ್ಷಗಾನ ಅಭಿಮಾನಿ ಬಳಗದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ, ಸಂಚಾಲಕ ಕೆ. ಎನ್. ಮಂಜುನಾಥ ಭಟ್, ಹವ್ಯಕ ಬಳಗದ ಅಧ್ಯಕ್ಷ ರಾಮಾ ಹಾಸ್ಯಗಾರ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಡಿ ಪಡುಬಿದ್ರಿ, ಗಜಾನನ ಹೆಗಡೆ, ವಿನೀತ್ ಕುಮಾರ್, ಗೋಪಾಲ ಕೃಷ್ಣ ಉಪಸ್ಥಿತರಿದ್ದರು.

    Daksha Yajna Kalamiti Yakshagana won the hearts of the audience

  • ಆರೋಗ್ಯ ಸದೃಡಗೊಳಿಸಲು ದೇಹದಂಡನೆ ಅವಶ್ಯಕ

    ಆರೋಗ್ಯ ಸದೃಡಗೊಳಿಸಲು ದೇಹದಂಡನೆ ಅವಶ್ಯಕ

    ಚಿಕ್ಕಮಗಳೂರು: – ಆರೋಗ್ಯವನ್ನು ಸದೃಢವಾಗಿ ಕಾಪಾಡಿಕೊಳ್ಳಲು ದೇಹದಂಡನೆ ಮ ನುಷ್ಯನಿಗೆ ಅವಶ್ಯಕ. ಕಠಿಣ ಪರಿಶ್ರಮ, ಶಿಸ್ತಿನ ಜೀವನ ನಡೆಸಿದರೆ ದೇಹದಾರ್ಢ್ಯ ಸ್ಪರ್ಧೆಯಲ್ಲೂ ಸಾಧನೆ ಮಾ ಡಲು ಸಾಧ್ಯ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಮಾರುತಿ ಮಲ್ಟಿ ಜಿಮ್‌ನ ೨೫ನೇ ವರ್ಷದ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ಧ ರಾಜ್ಯ ಮತ್ತು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಕಾರ್‍ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ದೇಹವನ್ನು ಶಾರೀರಿಕವಾಗಿ ಗಟ್ಟಿಗೊಳಿಸಲು ದೇಹದಾರ್ಢ್ಯ ಒಂದು ಭಾಗವಾಗಿದೆ. ವ್ಯಾಯಾಮದ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ. ಇತ್ತೀಚೆಗೆ ಮಹಿಳೆಯರು ಸೇರಿದಂತೆ ೬೦ ವರ್ಷ ಮೇಲ್ಪಟ್ಟ ಹಿರಿಯರು ಉತ್ತಮ ಆರೋಗ್ಯಕ್ಕಾಗಿ ವ್ಯಾಯಮದಲ್ಲಿ ತೊಡಗಿಕೊಂಡಿರುವುದು ಇಂದಿನ ಯುವಜನತೆಗೆ ಮಾದರಿಯಾಗಬೇಕು ಎಂದರು.

    ದೇಹದಾರ್ಢ್ಯ ಸ್ಫರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಸೋಲು, ಗೆಲುವಿನ ಲೆಕ್ಕಚಾರಕ್ಕೆ ತಲೆಕೆಡಿ ಸಿಕೊಳ್ಳದೇ, ಭಾಗವಹಿಸಿದ ಕ್ಷಣಗಳನ್ನು ನೆನಪು ಮಾಡಿಕೊಳ್ಳಬೇಕು. ಗೆದ್ದವರು ಬೀಗದೇ, ಸೋತವರು ಕುಗ್ಗದೇ ಕ್ರೀಡಾಸ್ಪೂರ್ತಿಯಿಂದ ಇರಬೇಕು. ತೀರ್ಪುಗಾರರು ಸಹ ಸ್ಪರ್ಧಿಗಳಿಗೆ ಪಾರದರ್ಶಕ ತೀರ್ಪು ಸೂ ಚಿಸಬೇಕು ಎಂದು ತಿಳಿಸಿದರು.

    ಚಿತ್ರ ನಟ ಧರ್ಮ ಮಾತನಾಡಿ ಇಂದಿನ ಯುವಕರು ದೇಹದ ಮೈಗಟ್ಟು ಸುಂದರಗೊಳಿಸಲು ಬಹಳ ಷ್ಟು ಶ್ರಮಿಸಬೇಕು. ವಿಶೇಷವಾಗಿ ದೇಹದಾರ್ಢ್ಯದಲ್ಲಿರುವ ಯುವಕರು ಕಡಿಮೆ ವೆಚ್ಚದಲ್ಲಿ ಪೌಷ್ಠಿಕ ಆಹಾರ ಸೇವಿಸದೇ, ದುಬಾರಿಯಾದರೂ ಗುಣಮಟ್ಟದ ಪೌಷ್ಠಿಕ ಆಹಾರ ಸೇವಿಸಿದರೆ ಶರೀರವು ಆರೋಗ್ಯದಿಂದ ಕೂಡಿರಲು ಸಾಧ್ಯವಾಗಲಿದೆ ಎಂದರು.

    ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಮಾತನಾಡಿ ಯುವಕರು ದೇಹವನ್ನು ಸದೃಢಗೊಳಿಸಲು ಮಾತ್ರೆ, ಇಂಜೆಕ್ಷನ್‌ಗಳೆಂಬ ಅಡ್ಡದಾರಿಗಳಲ್ಲಿ ಸಾಗುವುದು ತಪ್ಪು. ಆರೋಗ್ಯ ಚೆನ್ನಾಗಿದ್ದರೆ ದೇಹದ ಮೈಗಟ್ಟು ಚೆನ್ನಾಗಿರಲಿದೆ. ಹೀಗಾಗಿ ಅವರಸಕ್ಕೆ ದೇಹಸುಂದರಗೊಳಿಸಲು ಬದಲು, ನಿಧಾನಗತಿಯ ಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

    ಮಾರುತಿ ಮಲ್ಟಿ ಜಿಮ್ ಕಾರ್ಯದರ್ಶಿ ಪ್ರಸಾದ್ ಅಮೀನ್ ಮಾತನಾಡಿ ಜಿಲ್ಲೆಯಲ್ಲಿ ಜಿಮ್ ವೇಣು ಅವರ ಮಾಲೀಕತ್ವದಲ್ಲಿ ಮೊದಲು ಸ್ಥಾಪನೆಗೊಂಡಿತು. ಕಾಲಕ್ರಮೇಣ ಇಂದು ಮಾನಸ ಸಂದೀಪ್ ಮಾ ಲೀಕತ್ವದಲ್ಲಿ ಸಾಗಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದು, ಈ ಜಿಮ್‌ನಲ್ಲಿ ತರಬೇತಿ ಪಡೆದುಕೊಂಡ ಅನೇಕ ಪಟು ಗಳು ಚಿತ್ರರಂಗ, ರಾಜ್ಯಮಟ್ಟದಲ್ಲಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಮಾರುತಿ ಮಲ್ಟಿ ಜಿಮ್ ಅಧ್ಯಕ್ಷ ಸಂದೇಶ್, ಉಪಾಧ್ಯಕ್ಷ ಜಂಶೀದ್‌ಖಾನ್, ಕಾ ರ್ಯದರ್ಶಿ ವಿವೇಕ್, ಸದಸ್ಯ ಸಂತೋಷ್ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ದೇಹದಾಢ್ಯ ಪಟುಗಳು ಉಪಸ್ಥಿತರಿದ್ದರು.

    Corporal punishment is necessary to improve health

Progressieve jackpots en live dealerspellen zijn standaard beschikbaar bij gokken zonder CRUKS op de beste internationale platforms.