ಚಿಕ್ಕಮಗಳೂರು: ಜಿಲ್ಲೆಯ ಸೊಬಗನ್ನು ಹೆಚ್ಚಿಸುವ ಬಸವನಹಳ್ಳಿ ಕೆರೆಯನ್ನು ರಿಯಲ್ ಎಸ್ಟೇಟ್ ಮಾಡುವ ಉದ್ದೇಶದಿಂದ ಖಾಸಗೀ ಸಂಸ್ಥೆಗೆ ನೀಡಿ ಮೂಲಸೌಂದರ್ಯವನ್ನು ಹಾಳುಗೆಡವಲಾಗುತ್ತಿದ್ದು ಈ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ಹೋರಾಟ ನಡೆಸಲು ಮುಂದಾಗಲಾಗಿದೆ ಎಂದು ವಕೀಲೆ ಟಿ.ಶ್ರೀದೇವಿ ಹೇಳಿದ್ದಾರೆ.
ಈ ಸಂಬಂಧ ಶನಿವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅವರು ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಕೆರೆಯನ್ನು ಬೆಂಗಳೂರು ಮಾದರಿಯ ಪ್ರಾಪರ್ಟಿ ಡೆವಲರ್ಸ್ಗಳಿಗೆ ಹಸ್ತಾಂತರ ಮಾಡಲಾಗಿದೆ. ಕೆರೆಯ ನ್ನು ಪುನರುಜ್ಜೀವನ ಮಾಡಹುದೇ ಹೊರತು ಡೆವಲಪ್ ಮಾಡಲು ಅವಕಾಶವಿಲ್ಲ. ಕೆರೆಕಟ್ಟೆಗಳನ್ನು ಅವುಗಳ ಬಾಡಿಗೆ ಬಿಡುವುದು ಸೂಕ್ತ ಎಂದು ಹೇಳಿದ್ದಾರೆ.
ಇಂದಿನ ಬಿರು ಬೇಸಿಗೆಯಲ್ಲಿ ನೀರಿನ ಮೂಲವನ್ನೇ ಮುಚ್ಚುತ್ತಿರುವುದನ್ನು ಎಲ್ಲರು ಪ್ರಶ್ನಿಸಬೇಕು. ಕೆರೆ, ಕಾಡು, ಹಾಗೂ ನದಿಗಳನ್ನು ಅಭಿವೃದ್ದಿಪಡಿಸುವುದು ಹೇಗೆ ಎಂದು ಜಿಲ್ಲಾಡಳಿತ ವಿವರಿಸಬೇಕು. ಕೆರೆಯ ಮೂಲ ಸ್ವರೂಪ ವನ್ನು ಉಳಿಸಿಕೊಂಡು ಹೋಗುವುದೇ ಅಭಿವೃದ್ದಿ. ಈಗಾಗಲೇ ಕೋಟೆಕೆರೆ ಅವನತಿಯತ್ತ ಸಾಗಿದ್ದು ಅದೇ ರೀತಿ ಯಲ್ಲಿ ಬಸವನಹಳ್ಳಿಕೆರೆಯನ್ನು ಅವನತಿಯತ್ತ ತೂಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹಿಂದೆ ರಾಜರು ಮತ್ತು ಬ್ರಿಟಿಷ್ ಆಡಳಿತದಲ್ಲಿಯೂ ಕೆರೆಕುಂಟೆಗಳ ನಿರ್ವಹಣೆ ಬಿಗಿಯಾಗಿರುತ್ತಿತ್ತು ಹಾಗೂ ಜಲಮೂಲಗಳಿಗೆ ಅತ್ಯಂತ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಆದರೆ ಇಂದು ಭಾರತೀಯ ಸಂಸ್ಕೃತಿಯ ಹರಿಕಾರರು ಎಂದು ಹೇಳಿಕೊಳ್ಳುವವರು ಕೋಟೆಕೆರೆ, ಅಯ್ಯನಕೆರೆ ಸೇರಿದಂತೆ ಇದೀಗ ಬಸವನಹಳ್ಳಿ ಕೆರೆಯನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಬಸವನಹಳ್ಳಿ ಕೆರೆಯ ಮೂಲ ಸ್ವರೂಪವನ್ನೇ ಈಗಾಗಲೇ ಅರ್ಧ ಬದಲಾಯಿಸಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿರುವುದನ್ನು ಗಮನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಮೂಲಕ ಕೆರೆಯ ಅನವತಿಯನ್ನು ತಡೆಯುವಂತೆ ಹಾಗೂ ಮುಚ್ಚದಂತೆ ದಾವಾ (ದಾವಾ ನಂ. ಓ.ಎಸ್.೨೭೧/೨೩) ದಾಖಲಿಸಲಾಗಿದೆ ಎಂದಿದ್ದಾರೆ.
ಕೆರೆಯ ವಿಚಾರದಲ್ಲಿ ಮುಂದಾದರೂ ಜಿಲ್ಲೆಯ ಜನತೆ ಸಹಕಾರ ನೀಡಿ ಕೆರೆ ಉಳಿಸುವ ಪ್ರಯತ್ನಕ್ಕೆ ಕೈಜೋಡಿ ಸುವುದು ಸೂಕ್ತ ಹಾಗೂ ಮುಂದಿನ ದಿನಗಳಲ್ಲಿ ನ್ಯಾಯಯುತ ಹೋರಾಟಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
The infrastructure of Basavanahalli lake is damaged