ಚಿಕ್ಕಮಗಳೂರು: ಶಿಲ್ಪಕಲೆಯ ಜತೆಗೆ ಹಲವು ಕಾರ್ಯಗಳ ಮೂಲಕ ಹೆಚ್ಚು ಸಾರ್ವಜನಿಕ ಸಂಪರ್ಕದಲ್ಲಿರುವ ಸಮುದಾಯ ಎಂದರೆ ಅದು ವಿಶ್ವ ಕರ್ಮ ಸಮಾಜ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲಹೇಳಿದರು.
ಜಿಲ್ಲಾ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಭಾನುವಾರ ಜಿಲ್ಲಾ ವಿಶ್ವ ಕರ್ಮ ಸಮುದಾಯಭವನದಲ್ಲಿ ಏರ್ಪಡಿಸಿದ ಶ್ರೀ ವೈಶ್ವಕರ್ಮಣ ಮಹಾಯಜ್ಞ ಮತ್ತು ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜ ಶಿಲ್ಪಕಲೆಯ ಜತೆಗೆ ಹಲವಾರು ಕಾರ್ಯಗಳನ್ನು ಮಾಡುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಮಾದರಿಯಾಗಿದ್ದಾರೆ. ಸಾರ್ವಜನಿಕರ ಸಂಪರ್ಕದಲ್ಲಿ ಹೆಚ್ಚು ಇರುವ ಸಮುದಾಯ ಇದು. ನಗರದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ನಗರಸಭೆಯಲ್ಲಿ ೧. ೬೭ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ೭ ಸಮುದಾಯಭವನದ ಕಾಮಗಾರಿ ನಡೆಯುತ್ತಿದೆ.ವಿಶ್ವಕರ್ಮ, ಮಡಿವಾಳ, ಕುಂಬಾರ ,ಸೋಮೇಶ್ವರ ಸಮುದಾಯಭವನಗಳು ತಲೆ ಎತ್ತಲಿವೆ.೨೨ ಲಕ್ಷ ರೂ.ವಿಶ್ವ ಕರ್ಮ ಸಮುದಾಯಭವನಕ್ಕೆ ನೀಡಿದ್ದೇವೆ ಎಂದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಸದಸ್ಯ ರಮೇಶ್ಮಾತನಾಡಿ,ಈವರೆಗೆ ಹೋರಾಟದ ಮೂಲಕ ವಿಶ್ವಕರ್ಮ ಸಮುದಾಯ ತಮ್ಮ ಹಕ್ಕನ್ನು ಪಡೆದುಕೊಂಡಿದೆ. ಜಿಲ್ಲಾ ಸಂಘ ಗಟ್ಟಿಯಾಗಿರುವ ಕಾರಣ ಸಮುದಾಯದ ಮೇಲೆ ದೌರ್ಜನ್ಯಗಳನ್ನು ತಡೆಯಲು ಸಾಧ್ಯವಾಗಿದೆ.ಸಂಘಟನಾತ್ಮಕವಾಗಿ ಸಮಾಜ ಇನ್ನೂ ಬೆಳೆಸಬೇಕಿದೆ.ಸರಕಾರಕ್ಕೆ ನಮ್ಮ ಸಮಸ್ಯೆ ಹೇಳಿಕೊಳ್ಳಲು ಸಂಘಟನೆ ಇನ್ನೂ ಹೆಚು ಬೆಳೆಯಬೇಕು. ಅರಿವು ಶಿಕ್ಷಣ ಯೋಜನೆ ಅಡಿ ಅರ್ಜಿ ಹಾಕಿದ ಎಲ್ಲರಿಗೂ ಸೌಲಭ್ಯ ಕೊಡಬೇಕು ಎಂದು ಸರಕಾರ ಹೇಳಿದೆ. ಸದುಪಯೋಗಪಡಿಸಿಕೊಳ್ಳಿ ಎಂದರು
ಮಾಜಿ ಅಧ್ಯಕ್ಷ ಮಹೇಶ್ ಆಚಾರ್ಯ ಮಾತನಾಡಿ, ಪ್ರತಿ ವರ್ಷ ಸಾಮೂಹಿಕ ಉಪನಯನ ನಡೆಸುತ್ತಿದ್ದೇವೆ. ಮುಂದೆ ಎಲ್ಲರ ಸಹಕಾರದಿಂದ ಇನ್ನೂ ಉತ್ತಮವಾಗಿ ಕಾರ್ಯಕ್ರಮ ನಡೆಸುತ್ತೇವೆ ಎಂದರು.
ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾದ ಅಧ್ಯಕ್ಷ ಹೆಚ್.ಆರ್. ಉಮಾಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ರಾಜಕೀಯ ಪಕ್ಷಗಳನ್ನು ಮುಂದಿಟ್ಟುಕೊಂಡು ನಾವು ಸಂಘಟನೆ ಮಾಡಬಾರದು. ಸಮಾಜ ಪೂರ್ಣ ಬೆಂಬಲಕ್ಕಿದೆ ಎಂದು ಯಾವ ಪಕ್ಷಕ್ಕೂ ಸಾಮಾಜಿಕ ಮಾಧ್ಯಮದಲ್ಲಿಹೇಳಬಾರದು. ಅವರೇ ನಮ್ಮ ಸಮಾಜವನ್ನು ಗುರುತಿಸುವಂತಾಗಬೇಕು.ಸಂಘಟನೆಗೆ ಒತ್ತು ಕೊಡಬೇಕು ಎಂದು ಹೇಳಿದರು.
ಗೌರವಾಧ್ಯಕ್ಷ ಎಂ.ಎನ್.ವಿಠಲಾಚಾರಿ, ಉಪಾಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ರತೀಶ್, ಪ್ರಸನ್ನಾಚಾರ್, ಖಜಾಂಚಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ನಾರಾಯಣಾಚಾರಿ, ಚಂದ್ರಚಾರಿ, ನಿರ್ದೇಶಕರುಗಳಾ ಜಯಶೀಲಚಿದಂಬರ್, ರುದ್ರಯ್ಯಚಾರಿ, ಸಂದ್ಯಾರಾಣಿ, ಜಗಧೀಶ್ ಆಚಾರಿ, ಸುಮಿತ್ರ, ಅರುಣ್, ಸುದೀಪ್, ಪೂರ್ಣೇಶ್, ನಗರಸಭೆ ಸದಸ್ಯರಾದ ಟಿ.ರಾಜಶೇಖರ್, ಸಮಾಜದ ಮುಖಂಡರುಗಳಾದ ರತ್ನಾಕರ್ ಪುರೋಹಿತ್, ಸುಂದರ ಆಚಾರ್ಯ, ರತೀಶ್, ರುದ್ರಯ್ಯಚಾರಿ,ಉಪಸ್ಥಿತರಿದ್ದರು.
1.67 crore grant in Municipal Council