ಚಿಕ್ಕಮಗಳೂರು: ರೈತರಿಗೆ ೧೦ ಎಚ್ಪಿ ವರೆಗೂ ಉಚಿತ ವಿದ್ಯುತ್ ನೀಡುತ್ತೇನೆಂದು ಇಂಧನ ಸಚಿವ ವಿ.ಸುನೀಲ್ಕುಮಾರ್ ಈ ಜಿಲ್ಲೆಯಲ್ಲೆ ಘೋಷಣೆ ಮಾಡಿದ್ದರೂ ಯಾವುದಾದರೂ ಒಂದು ಹಳ್ಳಿಯಲ್ಲಿ ಒಂದು ತಿಂಗಳಲ್ಲಿ ೭ ಗಂಟೆ ತ್ರಿಫೇಸ್ ವಿದ್ಯುತ್ ಇರುವುದನ್ನು ತೋರಿಸಿದರೆ ನಾನು ರಾಜಕಾರಣವನ್ನೆ ಮಾಡುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಸವಾಲು ಹಾಕಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಸಚಿವ ವಿ.ಸುನೀಲ್ಕುಮಾರ್ಗೂ ಈ ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಈ ಜಿಲ್ಲೆಯಲ್ಲೆ ಘೋಷಣೆ ಮಾಡಿದ್ದರಿಂದ ರೈತರಿಗೆ ಅನುಕೂಲವಾಯಿತಲ್ಲ ಎಂದು ನಾವುಗಳು ಸಂತೋಷವಾದೆವು. ಇವರು ಯಾವ ಆಧಾರದಲ್ಲಿ ಹೇಳಿದ್ದಾರೊ ಗೊತ್ತಿಲ್ಲ. ದಿನದಲ್ಲಿ ಒಂದೂ ಘಂಟೆಯೂ ಐಪಿ ಸೆಟ್ಗಳಿಗೆ ತ್ರಿ ಫೇಸ್ ಕೊಡಲು ಇವರ ಕೈಲಿ ಸಾಧ್ಯವಾಗುತ್ತಿಲ್ಲ ಹಾಗಾಗಿ ಸುಳ್ಳು ಹೇಳಿರುವ ಬೇಜವಾಬ್ದಾರಿ ಮಂತ್ರಿ ಎಂದರು.
ಈಗ ರೈತರು ಜಮೀನುಗಳಿಗೆ, ಕಾಫಿ ಬೆಳೆಗಾರರು ತೋಟಗಳಿಗೆ ನೀರು ಹರಿಸಬೇಕು, ಎಲ್ಲಾ ರೈತರಿಗೂ ತ್ರಿ ಫೇಸ್ ವಿದ್ಯುತ್ನ ಅವಶ್ಯಕತೆ ಇದೆ. ಹಾಗಾಗಿ ಗ್ರಾಮೀಣ ಪ್ರದೇಶಕ್ಕೆ ೧೦ ಎಚ್ಪಿ ಉಚಿತ ವಿದ್ಯುತ್ ಕೊಡುವುದಿರಲಿ ಕೆಲವು ಹಳ್ಳಿಗಳಲ್ಲಿ ಒಂದೊಂದು ತಿಂಗಳಾದರೂ ಕರೆಂಟ್ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ನೀವೆ ಘೋಷಣೆ ಮಾಡಿರುವ ತ್ರಿಫೇಸ್ ವಿದ್ಯುತ್ನ್ನು ರಾಜ್ಯ ಸರ್ಕಾರ ಕೂಡಲೆ ನೀಡಬೇಕು ಎಂದು ಒತ್ತಾಯಿಸಿದರು. ಸುಳ್ಳು ಹೇಳಿ ಜನರನ್ನು ಮರಳು ಮಾಡುವುದರಲ್ಲಿ ಇವರು ನಿಸ್ಸೀಮರು. ೧೦ ಎಚ್ಪಿ ಉಚಿತ್ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದಾಕ್ಷಣ ನಂಬಿ ಇವರನ್ನು ಕಾಫಿ, ಬೆಳೆಗಾರರು , ರೈತರು ಈಗಾಗಲೆ ಅಭಿನಂದಿಸಿದ್ದಾರೆ. ಆದರೆ ಚುನಾವಣೆ ಹಿತದೃಷ್ಟಿಯಿಂದ ಮಾಡಿರುವ ಘೋಷಣೆಯಾಗಿದ್ದು ರೈತರು ಬೆಳೆಗಾರರ ಸಮೂಹಕ್ಕೆ ಸುಳ್ಳು ಹೇಳಿದ್ದಾರೆ ಹಾಗಾಗಿ ತ್ರಿ ಫೇಸ್ ವಿದ್ಯುತ್ ನೀಡಿ ಇಲ್ಲವಾದಲ್ಲಿ ರೈತರಿಗೆ ಕ್ಷಮೆಕೇಳಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.
ಜನಪ್ರತಿನಿಧಿಗಳು ಬರಿ ಗಿಮಿಕ್ ಮಾಡುತ್ತಾರೆ ಬಿಟ್ಟರೆ ಜನರ ನೈಜ ಸಮಸ್ಯೆ ಪರಿಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ದಂಟರಮಕ್ಕಿ ಕೆರೆ ಅಭಿವೃದ್ದಿಗೆ ೨೭ ಕೋಟಿ ಬೇಕಾ? ೫ ಕೋಟಿ ಕೊಡಿ ಸುಂದರವಾದ ಕೆರೆ ಮಾಡಿಕೊಡುತ್ತೇನೆ. ನಗರಕ್ಕೆ ಸೌಂದರ್ಯ ಕಲ್ಪಿಸುವ ಕೆರೆಗಳನ್ನು ಏನು ಮಾಡಿದ್ದೀರಿ? ಬಿಜೆಪಿಯ ಬಹಳಷ್ಟು ಮಂತ್ರಿಗಳು ಅನಾನುಭವಿಗಳ ರೀತಿ ಮಾತನಾಡುವುದನ್ನು ನಿಲ್ಲಿಸಿ. ಚುನಾವಣೆಗೆ ಪೂರಕವಾದ ಘೋಷಣೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದರು.
ಸರ್ಫೇಸಿ ಆಕ್ಟ್ ಪ್ರಕಾರ ರೈತರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಯೋಜನೆ ಸಣ್ಣ ಕಾಫಿ ಬೆಳೆಗಾರರಿಗೆ ಅನ್ವಿಯಿಸುವುದಿಲ್ಲ ಎಂದು ಹೇಳಿದ್ದಾರೆ ಆದರೆ ಸರ್ಫೇಸಿ ಆಕ್ಟ್ ಪ್ರಕಾರ ಎಲ್ಲಾ ಬೆಳೆಗಾರರಿಗೆ ನೋಟಿಸ್ ನೀಡುತ್ತಿದ್ದಾರೆ,ನೂರಾರು ಕಾಫಿ ತೋಟಗಳು ಹರಾಜಿಗೆ ಬಂದಿವೆ. ಇಂತಹ ಅವೈಜ್ಞಾನಿಕ ಕೆಲಸವನ್ನು ಬ್ಯಾಂಕ್ಗಳು ಕೈ ಬಿಡಬೇಕು, ಕಾಫಿ ಬೆಳೆಯುವ ಪ್ರದೇಶದ ೩ ಮಂದಿ ಸಂಸಂದರು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಬೇಕು ಹಾಗಾಗಿ ಸರ್ಫೆಸಿ ಆಕ್ಟ್ನ ರೈತರ ಜಮೀನಿನ ಮೇಲೆ ಇಂಪ್ಲಿಮೆಂಟ್ ಮಾಡಬಾರದು ಮರಣ ಶಾಸನವನ್ನು ಹಿಂಪಡೆದು ಕೂಡಲೆ ರದ್ದು ಮಾಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮುಖಂಡರಾದ ತನೂಜ್ಕುಮಾರ್, ಅಮರ್, ಇದ್ದರು.
There is no three-phase power for 7 hours