ಚಿಕ್ಕಮಗಳೂರು: ಈ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮಾತ್ರ ಗ್ಯಾರಂಟಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ರೂಬೆನ್ ಮೊಸಸ್ ತಿಳಿಸಿದರು.
ಇಂದು ನಗರದ ಗೌರಿಕಾಲುವೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿ ಮಾತನಾಡಿದ ಅವರು ಬಿಜೆಪಿಯ ಯಾವುದೇ ಯೋಜನೆಗಳಿಗೆ ಇಲ್ಲ ವ್ಯಾರಂಟಿ ಆದರೆ ಕಾಂಗ್ರೆಸ್ ಪಕ್ಷದ ಯೋಜನೆಗಳು ಮಾತ್ರ ಈ ದೇಶಕ್ಕೆ ಗ್ಯಾರಂಟಿ ಬಿಜೆಪಿಯ ತಾತ್ಕಾಲಿಕವಾದ ಆಮೀಷಗಳಿಗೆ ಬಲಿಯಾಗದೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಮತ ಚಲಾಯಿಸಬೇಕೆಂದರು.
ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆಯಿಂದ ನೊಂದಿರುವ ಮಹಿಳೆಯರ ಕೈ ಬಲಪಡಿಸಲು ಕಾಂಗ್ರೆಸ್ ಪಕ್ಷವು ಮಹಿಳೆಯರಿಗೆ ಪ್ರತಿ ತಿಂಗಳಿಗೆ ಜಿಎಸ್ಟಿ ಪರಿಹಾರಕ್ಕೆ 500 ರೂಪಾಯಿ, ಗ್ಯಾಸ್ ಸಿಲಿಂಡರ್ ಗೆ 500 ಹಾಗೂ ಬೆಲೆ ಏರಿಕೆಯ ಪರಿಹಾರಕ್ಕೆ ಒಂದು ಸಾವಿರ ರೂಪಾಯಿ ಸೇರಿದಂತೆ ಒಟ್ಟು 2 ಸಾವಿರ ರೂಪಾಯಿಗಳನ್ನು ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಮಹಿಳೆಯರಿಗೆ ಉಚಿತವಾಗಿ ನೀಡಲಿದೆ ಎಂದರು.
ಅಲ್ಲದೆ ಪ್ರತಿ ಮನೆಗೂ ಪ್ರತಿ ತಿಂಗಳು ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಿದೆ. ಹಾಗೂ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮೂರು ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಿ ಹೆಚ್ ಹರೀಶ್, ನಗರ ಅಧ್ಯಕ್ಷ ತನೋಜ್ ಕುಮಾರ್, ಸೇವಾದಳದ ಮಾಜಿ ಅಧ್ಯಕ್ಷ ಸಿಲ್ವೆಸ್ಟರ್, ನಗರಸಭೆ ಮಾಜಿ ನಾಮಿನಿ ಸದಸ್ಯ ಕೃಷ್ಣಯ್ಯ, ನಗರ ಕಾರ್ಯದರ್ಶಿ ಸಹನ ರೂಬೆನ್, ಕಾಂಗ್ರೆಸ್ ಮುಖಂಡರುಗಳಾದ ಫಯಾಜ್ ಕೃಷ್ಣಪ್ಪ ಪೂಜಾರಿ, ನೀತು ಇನ್ನಿತರರು ಮನೆ ಮನೆಗಳಿಗೆ ತೆರಳಿ ಗ್ಯಾರಂಟಿ ಕಾರ್ಡುಗಳನ್ನು ವಿತರಿಸಿದರು.
Congress is the only guarantee for this country: