ಚಿಕ್ಕಮಗಳೂರು: ರಾಜ್ಯ ಸರ್ಕಾರದ ಸೌಲಭ್ಯ ಮತ್ತು ಸವಲತ್ತುಗಳು ಜನರನ್ನು ತಲುಪಿರುವುದೆ ಎಂದು ತಿಳಿದುಕೊಳ್ಳುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಫಲಾನುಭವಿಗಳ ಸಮಾವೇಶವನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು
ತೇಗೂರಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಇಂದು ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ವಿವಿಧ ಯೋಜನೆ, ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಯೋಜನೆಗಳು ಸೌಲಭ್ಯಗಳು ಮತ್ತು ಸವಲತ್ತುಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅವರ ಮನೆ ಬಾಗಿಲಿಗೆ ತಲುಪಬೇಕು ಎಂಬುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕಲ್ಪವಾಗಿದೆ. ಸವಲತ್ತುಗಳು ಎಲ್ಲಾ ಫಲಾನುಭವಿಗಳಿಗೂ ತಲುಪಿರದಿದ್ದಲ್ಲಿ ಅವುಗಳನ್ನು ಕಡ್ಡಾಯವಾಗಿ ಅವರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
ಇಂದು ೫ ಸಾವಿರ ಜನರಿಗೆ ಸಾಂಕೇತಿಕವಾಗಿ ೨೫.೭೫.ಕೋಟಿ ರೂ ವಿತರಣೆ ಮಾಡಲಾಗುತ್ತಿದೆ ಗ್ರಾಮೀಣ ವಸತಿ ಯೋಜನೆ ಅಡಿ ೩೫೯೬ ಜನರಿಗೆ ೫೩.೯೪ ಕೋಟಿಯಷ್ಟು ವಿತರಣೆ ಮಾಡಲಾಗುತ್ತಿದೆ ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದ ನಾಲ್ಕು ಸಾವಿರ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತಿದೆ. ಜಗಜೀವನ್ ರಾಮ್ ಯೋಜನೆ ಅಡಿ ಜನತೆಗೆ ಶುದ್ಧ ಕುಡಿಯುವ ನೀರನ್ನು ಕೊಡುವುದು ನಮ್ಮ ಸಂಕಲ್ಪವಾಗಿದೆ ಹಾಗಾಗಿಜಿಲ್ಲೆಯಲ್ಲಿ ಎರಡುವರೆ ಸಾವಿರ ಕೋಟಿ ರು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ.ಇಲ್ಲಿ ಸಾಂಕೇತಿಕವಾಗಿ ೫ ಸಾವಿರ ಜನರಿಗೆ ಆ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೬೪ ಆಂಬುಲೆನ್ಸ್ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು
ಕಾರ್ಮಿಕ ಇಲಾಖೆಯಿಂದ ಸವಲತ್ತುಗಳನ್ನು ನೀಡಲಾಗುತ್ತಿದೆ ಕೃಷಿ ಇಲಾಖೆಯಿಂದ ೬೦೦ ಜನರಿಗೆ೨.೮೬ಕೋಟಿ ತೋಟಗಾರಿಕೆ ಇಲಾಖೆಯಿಂದ ೭೦೦ ಜನರಿಗೆ ೧.೩ ಕೋಟಿ ಪಶುಪಾಲನ ಇಲಾಖೆಯಿಂದ ೨೪ ಲಕ್ಷ ರೂ ಪ ಜಾತಿ ಪ ಪಂಗಡದ ಇಲಾಖೆ ಹಿಂದುಳಿದ ವರ್ಗಗಳ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಂದ ಒಟ್ಟು ೩.೭೫೩ ಕೋಟಿ ವೆಚ್ಚದ ಸವಲತ್ತುಗಳನ್ನು ಇಲ್ಲಿ ನೀಡಲಾಗುತ್ತಿದೆ ಇದು ರಾಜ್ಯ ಸರ್ಕಾರದ ಸಾಧನೆ ಎಂದರು
ರೈತರ ಖಾತೆಗೆ ಕೇಂದ್ರ ಸರ್ಕಾರ ೬೦೦೦ ನೀಡಿದರೆ ಅದಕ್ಕೆ ರಾಜ್ಯ ಸರ್ಕಾರ ನಾಲ್ಕು ಸಾವಿರ ಸೇರಿಸಿ ೧೦ ಸಾವಿರ ರೂಗಳನ್ನು ಜಮಾ ಮಾಡುತ್ತಿದೆ ಮಳೆ ಪ್ರವಾಹದಿಂದ ಮನೆ ಹಾನಿಗೊಳಗಾದವರಿಗೆ ಬೆಳೆ ಹಾನಿಗೊಳಗಾದವರಿಗೆ ಲಕ್ಷಾಂತರ ರೂ ಪರಿಹಾರವನ್ನು ನೀಡಿದ್ದೇವೆ ಎಂದು ಹೇಳಿದರು.
ಯಾವುದೇ ಸರ್ಕಾರಗಳು ಮಾಡದಷ್ಟು ಸಾಧನೆಯನ್ನು ನಮ್ಮ ಸರ್ಕಾರ ಮಾಡಿದ್ದು ಅದಕ್ಕಾಗಿಯೇ ಅಭಿವೃದ್ಧಿಯಲ್ಲಿ ದೇಶದಲ್ಲಿ ರಾಜ್ಯ ಮೊದಲನೇ ಸ್ಥಾನದಲ್ಲಿದೆ ಎಂದು ತಿಳಿಸಿದರು
ಶಾಸಕ ಸಿಟಿ ರವಿ ಮಾತನಾಡಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ೩೭೫೩ ಸಾವಿರ ಕೋಟಿ ೯೦ ಲಕ್ಷ ರೂಗಳ ಅನುದಾನ ವಿವಿಧ ಯೋಜನೆಗಳ ಸವಲತ್ತು ರೂಪದಲ್ಲಿ ಜಿಲ್ಲೆಯ ಜನರಿಗೆ ತಲುಪಿದೆ ೩.೫೬ ಸಾವಿರ ಕೋಟಿ ಕೋಟಿ ವೆಚ್ಚದ ಸವಲತ್ತುಗಳನ್ನು ಜನರಿಗೆ ನೀಡಲಾಗಿದೆ ೧೨ ಲಕ್ಷ ಹನ್ನೆರಡು ಸಾವಿರ ಜನರಿಗೆ ವಿವಿಧ ಯೋಜನೆಗಳ ಸವಲತ್ತುಗಳು ವಿವಿಧ ರೀತಿಯಲ್ಲಿ ದೊರಕಿವೆ ಎಂದು ತಿಳಿಸಿದರು.
ನಾವು ಮಾತು ಕೊಟ್ಟಂತೆ ಈಗಾಗಲೇ ೬೩೦ ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಲಾಗಿದೆ. ನೀರಾವರಿ ಯೋಜನೆಗಳಿಗೆ ಚಾಲನೆ ಕೊಟ್ಟು ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ. ಜಲ ಜೀವನ್ ಮಿಷನ್ ಮೂಲಕ ಮನೆಮನೆಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಕೆಲಸ ಮಾಡಲಾಗಿದೆ. ರಾಷ್ಟೀಯ ಹೆದ್ದಾರಿ ಕೆಲವು ಪೂರ್ಣವಾಗಿದೆ. ಕೆಲವು ನಿರ್ಮಾಣ ಹಂತದಲ್ಲಿ, ಕೆಲವು ಟೆಂಡರ್ ಹಂತದಲ್ಲಿದ್ದು, ಅವೂ ಸಹ ಪೂರ್ಣಗೊಳ್ಳಲಿದೆ. ರೈಲ್ವೆ ಯೋಜನೆ ಈಗಾಗಲೇ ಮೊದಲನೇ ಹಂತದ ಟೆಂಡರ್ ಆಗಿದೆ, ೨-೩ ಹಂತದ ಕಾಮಗಾರಿಗೆ ಭೂಮಿಯನ್ನು ಸ್ವಾಧೀನ ಪಡೆದುಕೊಳ್ಳಲಾಗಿದೆ ಎಂದರು.
ಚಿಕ್ಕಮಗಳೂರಿಗೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಿ ಟೆಂಡರ್ ಹಂತದಲ್ಲಿವೆ. ಭೂ ಸ್ವಾಧೀನದ ಕೆಲಸ ಬಾಕಿ ಇದೆ. ಏರ್ ಸ್ಟ್ರೀಟ್ ನಿರ್ಮಾಣಕ್ಕೆ ಡಿಪಿಆರ್ ಟೆಂಡರ್ ಹಂತದಲ್ಲಿವೆ. ಭೂ ಸ್ವಾಧೀನಕ್ಕೆ ಬೇಕಾದ ಹಣ ಈಗಾಗಲೇ ಬಿಡುಗಡೆಯಾಗಿದೆ. ವಿಶ್ವ ವಿದ್ಯಾಲಯದ ಮಂಜೂರಾತಿ ಮೆಗಾ ಟೆಕ್ಸ್ಟೈಲ್ ಮಂಜೂರಾತಿ ಬಜೆಟ್ನಲ್ಲಿ ಘೋಷಣೆ ಮಾಡಲಾಗಿದೆ ಇದು ಪೂರ್ಣಗೊಂಡರೆ ಜಿಲ್ಲೆಯ ೧೦,೦೦೦ ಜನರಿಗೆ ಉದ್ಯೋಗ ದೊರೆಯಲಿದೆ ಎಂದು ತಿಳಿಸಿದರು. ನಾವು ಅಭಿವೃದ್ಧಿ ರಾಜಕಾರಣಕ್ಕೆ ಒತ್ತು ಕೊಟ್ಟಿದ್ದೇವೆ. ಜಾತಿ ರಾಜಕಾರಣ ಮಾಡಿಲ್ಲ. ಎಲ್ಲಾ ಜಾತಿಯ ಜನರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಇಂದಿನ ಸಮಾವೇಶದಲ್ಲಿ ೧೪ ಇಲಾಖೆಗಳು ನಮ್ಮೊಂದಿಗೆ ಕೈ ಜೋಡಿಸಿವೆ. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ೨೨೬ ಗ್ರಾಮ ಪಂಚಾಯಿತಿಗಳಲ್ಲೂ ಒಕ್ಕೂಟಗಳನ್ನು ರಚನೆ ಮಾಡಿ ೨೬ ಕೋಟಿ ಅನುದಾನವನ್ನು ಸ್ವಸಹಾಯ ಸಂಘಗಳಿಗೆ ನೀಡಿದ್ದೇವೆ, ೮೦ ಸಾವಿರ ಮಹಿಳೆಯರು ಇದರ ಫಲಾನುಭವಿಗಳಾಗಿದ್ದಾರೆ ಎಂದರು.
ಗ್ರಾಮೀಣ ವಸತಿ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ೧೨,೭೫೩ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಸಾಂಕೇತಿಕವಾಗಿ ೩,೫೯೬ ಫಲಾನುಭವಿಗಳಿಗೆ ಇಂದು ಮಂಜೂರಾತಿ ಪತ್ರ ನೀಡುತ್ತಿದ್ದೇವೆ, ಹತ್ತು ಹಲವು ಯೋಜನೆಗಳ ಮೂಲಕ ೧೦ ಸಾವಿರದಿಂದ ೫೦ ಸಾವಿರದವರೆಗೆ ೮೦೮ ಫಲಾನುಭವಿಗಳಿಗೆ ಆದೇಶ ಪತ್ರ ನೀಡುತ್ತಿದ್ದೇವೆ ಎಂದು ತಿಳಿಸಿದರು.
ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮತ್ತು ಮೂಡಿಗೆರೆ ಶಾಸಕ ಎಂ.ಪಿ. ಕುಮಾರ್ ಸ್ವಾಮಿ ಮಾತನಾಡಿದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ತೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ನಾರಾಯಣ, ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್ ಉಪಸ್ಥಿತರಿದ್ದರು.
Conference of Beneficiaries of State Government Schemes