ನವದೆಹಲಿ: ವಿಧಾನಸಭಾ ಚುನಾವಣಾಗೆ ಭರ್ಜರಿ ತಯಾರಿ ನಡೆಸುತ್ತಿರುವ ರಾಜಕೀಯ ಪಕ್ಷಗಳ ನಡುವೆ ಕೊನೆಯದಾಗಿ ಬಿಜೆಪಿ ಮೊದಲ ಹಂತದಲ್ಲಿ 189 ಜನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 189 ಜನರ ಪೈಕಿ 52 ಹೊಸ ಮುಖಗಳಿಗೆ ಈ ಬಾರಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ, 32 ಜನ ಒಬಿಸಿ ಅಭ್ಯರ್ಥಿಗಳು, 1 ಮಾಜಿ ಐಪಿಎಸ್, 1 ಮಾಜಿ ಐಎಎಸ್, 30 ಜನ ಎಸಿ ಅಭ್ಯರ್ಥಿಗಳಿಗೆ, 16 ಜನ ಎಸ್ ಟಿ 8 ಜನ, ಮೂವರು ನಿವೃತ್ತ ಸರ್ಕಾರಿ ನೌಕರರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ
ಕಳೆದ ಬಾರಿಗಿಂತಲೂ ಈ ಬಾರಿ ಚಿಕ್ಕಮಗಳೂರಿನ ಚುನಾವಣಾ ರಣಕಣ ರಂಗೇರಿದ್ದು ಜೆಡಿಎಸ್ ನಿಂದ ಬಿ. ಎಂ ತಿಮ್ಮಶೆಟ್ಟಿಯನ್ನು ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ವಿಚಾರ ಇನ್ನೂ ಗೊಂದಲದಲ್ಲೇ ಇದ್ದು, 2018ರಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ 38 ಸಾವಿರ ಮತ ಪಡೆದಿದ್ದ ಬಿ. ಹೆಚ್ ಹರೀಶ್ ಚುನಾವಣೆಯಲ್ಲಿ ಸೋತ ಬಳಿಕ ಕಾಂಗ್ರೆಸ್ ಸೇರಿದ್ದರು. ಈ ಬಾರಿ ಚಿಕ್ಕಮಗಳೂರಿನ ಕೈ ಟಿಕೆಟ್ ನ ಪ್ರಭಲ ಆಕಾಂಕ್ಷಿಯಾಗಿದ್ದಾರೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ಕಾಂಗ್ರೆಸ್ ಸೇರಿದ್ದ ಸಿ. ಟಿ ರವಿ ಆಪ್ತ ಹೆಚ್ ಡಿ ತಮ್ಮಯ್ಯ ಕೂಡ ಟಿಕೆಟ್ ರೇಸ್ ನಲ್ಲಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಟಿಕೆಟ್ ಘೋಷಿಸುತ್ತದೆ ಎನ್ನೋದನ್ನು ಕಾದುನೋಡಬೇಕಿದೆ.
ಕಡೂರು ಚಿಕ್ಕಮಗಳೂರು ಜಿಲ್ಲೆಯಲ್ಲಿಯೇ ಅತ್ಯಂತ ವಿಭಿನ್ನ ಕ್ಷೇತ್ರ. ಈ ಬಾರಿ ಬಿಜೆಪಿ ಹೈಕಮಾಂಡ್ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಶಾಸಕ ಬೆಳ್ಳಿ ಪ್ರಕಾಶ್ ಬಗ್ಗೆ ಕ್ಷೇತ್ರದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಲಿಂಗಾಯಿತರಾಗಿರುವ ಬೆಳ್ಳಿಗೆ ಎಲ್ಲಾ ಜಾತಿಗಳ ಬೆಂಬಲವೂ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಹೆಚ್ಚು ಮುಸ್ಲಿಂ ಮತಗಳನ್ನು ಪಡೆಯುವ ಯಾರಾದರೂ ಶಾಸಕರಿದ್ದರೆ ಅದು ಬೆಳ್ಳಿ ಪ್ರಕಾಶ್. ಕಳೆದ ಕೆಲ ತಿಂಗಳುಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ ವಿ ದತ್ತಾಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಸಿಗಲಿವೆ ಎಂಬ ಮಾತುಗಳು ಕೇಳಿಬಂದಿದ್ದವು.
ಚಿಕ್ಕಮಗಳೂರು ಜಿಲ್ಲೆಯಲ್ಲೇ ಕಳೆದ ಬಾರಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಸೋಲು ಕಂಡಿತ್ತು. ಈ ಬಾರಿ ಮಾಜಿ ಶಾಸಕ ಡಿ. ಎನ್ ಜೀವರಾಜ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಜೀವರಾಜ್ ಸಹ ಯಡಿಯೂರಪ್ಪನವರ ಆಪ್ತರು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಸ್ಪರ್ಧೆ ಜೀವರಾಜ್ ಅವರ ಸೋಲಿಗೆ ಕಾರಣವಾಗಿತ್ತು. ಸೋತ ನಂತರವೂ ಕ್ಷೇತ್ರದಲ್ಲೇ ಸಕ್ರಿಯವಾಗಿದ್ದ ಜೀವರಾಜ್ ಹಳೆಯ ಡ್ಯಾಮೇಜ್ ಗಳನ್ನು ಸರಿಪಡಿಸಿಕೊಂಡಿದ್ದಾರೆ.
ಇನ್ನು ಶೃಂಗೇರಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಉದ್ಯಮಿ ಸುಧಾಕರ್ ಶೆಟ್ಟಿ ಕಾಂಗ್ರೆಸ್ ನಿಂದ ಹಾಲಿ ಶಾಸಕ ಟಿ ಡಿ ರಾಜೇಗೌಡ ಅವರಿಗೆ ಈಗಾಗಲೇ ಟಿಕೆಟ್ ಫೈನಲ್ ಆಗಿವೆ. ಪ್ರಾರಂಭದಲ್ಲಿ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂಬ ಅಭಿಪ್ರಾಯ ಕೇಳಿಬಂದಿತ್ತಾದರೂ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಫೈಟ್ ಬೀಳುವ ಸಾಧ್ಯತೆಗಳಿವೆ. ಆದರೂ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಸಾಕಷ್ಟು ಸಕ್ರಿಯವಾಗಿ ಓಡಾಡುತ್ತಿದ್ದಾರೆ.
ಹಾಲಿ ಶಾಸಕ ಸುರೇಶ್ ಗೆ ಈ ಬಾರಿಯು ಟಿಕೆಟ್ ಸಿಕ್ಕಿದೆ. ಆದರೆ ಕಳೆದ ಬಾರಿಕಿಂತ ಈ ಬಾರಿ ಕಾಂಗ್ರೆಸ್ ಸ್ವಲ್ಪ ಸ್ಟ್ರಾಂಗ್ ಆಗಿವೆ ಎಂಬ ಮಾತುಗಳು ಕೇಳಿ ಬರ್ತಿವೆ. ಕಾಂಗ್ರೆಸ್ ನಿಂದ ಗೋಪಿಕೃಷ್ಣ ಹಾಗೂ ಶ್ರೀನಿವಾಸ್ ನಡುವೆ ಟಿಕೆಟ್ ಗಾಗಿ ಫೈಟ್ ನಡಿಯುತ್ತಲೇ ಇದೆ. ಇನ್ನು ತರೀಕೆರೆಯಲ್ಲಿ ಜೆಡಿಎಸ್ ನ ಅಲೆ ಇಲ್ಲ ಹೀಗಾಗಿ ಇನ್ನು ಅಭ್ಯರ್ಥಿಯ ಘೋಷಣೆಯೂ ಆಗಿಲ್ಲ.
BJP candidate announcement for 4 assembly constituencies of Chikmagalur district