ಚಿಕ್ಕಮಗಳೂರು: ಕಾಂಗ್ರೆಸ್ ನ ಮತ್ತೊಂದು ಪಟ್ಟಿ ಬಿಡುಗಡೆಯಾಗಿದ್ದು ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ಇನ್ನೂ ಕಗ್ಗಂಟಾಗಿಯೇ ಉಳಿದಿದೆ.
ಕಳೆದ ಬಾರಿ ಟಿಕೆಟ್ ವಂಚಿತರಾಗಿ ಪಕ್ಷೇತರಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್ ಈ ಬಾರಿ ತರೀಕೆರೆಯಲ್ಲಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಡಿಗೆರೆ ಕ್ಷೇತ್ರಕ್ಕೆ ಅನೇಕ ವಿರೋಧಗಳ ಮಧ್ಯೆಯು ನಯನ ಮೋಟಮ್ಮ ಟಿಕೆಟ್ ಪಡೆದಿದ್ದಾರೆ.
ತರೀಕೆರೆಯಲ್ಲಿ ಗೋಪಿ ಕೃಷ್ಣ ಗೆ ತೀವ್ರ ನಿರಾಶೆಯಾಗಿದ್ದು ಬಹುತೇಕ ಜೆಡಿಎಸ್ ಗೆ ಜಿಗಿಯುವ ಸಾಧ್ಯತೆ ಇದೆ. ಬಿಜೆಪಿಯಿಂದ ವಲಸೆ ಬಂದ ಎಂ.ಪಿ. ಕುಮಾರಸ್ವಾಮಿ ಮೂಡಿಗೆರೆಯಲ್ಲಿ ಜೆಡಿಎಸ್ ಟಿಕೆಟ್ ಪಡೆದಿದ್ದಾರೆ. ಇದಕ್ಕೆ ಈ ಮೊದಲೇ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದ ಮಾಜಿ ಸಚಿವ ಬಿ.ಬಿ ನಿಂಗಯ್ಯ ತೀವ್ರ ಆಕ್ಷೇಪ ಹೊರ ಹಾಕಿದ್ದಾರೆ.
Candidate selection for remaining Chikkamagaluru constituency