ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಎಂ.ಪಿ ಕುಮಾರಸ್ವಾಮಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಮಾಜಿ ಸಚಿವ ಬಿಬಿ ನಿಂಗಯ್ಯ ಹಾಗೂ ಕಡೂರು ಕ್ಷೇತ್ರದ ಧನಂಜಯ್ ಗೆ ಕೊಕ್ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿ ಪಕ್ಷ ತೊರೆದು ಜೆಡಿಎಸ್ ಸೇರಿದ್ದ ಎಂಪಿ ಕುಮಾರಸ್ವಾಮಿ ಜೆಡಿಎಸ್ ವರಿಷ್ಠರಿಂದ ಬಿ ಫಾರಂ ತೆಗೆದುಕೊಳ್ಳುವ ಮೂಲಕ ಅಧಿಕೃತವಾಗಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಬಿಜೆಪಿಗೆ ಟಾಂಗ್ ಕೊಡಲಿದ್ದಾರೆ.
ಮಾಜಿ ಸಚಿವ ಬಿಬಿ ನಿಂಗಯ್ಯ ಬಿ ಫಾರಂ ನೀಡದೆ ಕಳಿಸಲಾಗಿದೆ ಎನ್ನಲಾಗಿದೆ. ವರಿಷ್ಠರನ್ನು ಕಾಡಿ ಬೇಡಿದರು ಬಿ.ಬಿ ನಿಂಗಯ್ಯ ಟಿಕೆಟ್ ಕೊಡಲು ನಿರಾಕರಿಸಲಾಗಿದೆ. ಕನಿಷ್ಠ ಮಾಜಿ ಸಚಿವ ಎಂಬ ಗೌರವನ್ನು ಕೂಡ ಜೆಡಿಎಸ್ ವರಿಷ್ಠ ನೀಡಲಿಲ್ಲ ಎಂದು ತಿಳಿದು ಬಂದಿದೆ.
ಜೆಡಿಎಸ್ ಪಕ್ಷ ಕಡೂರು ಹಾಗೂ ಮೂಡಿಗೆರೆ ಎರಡು ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿದ್ದ ಎರಡು ಅಭ್ಯರ್ಥಿಗಳನ್ನು ಚುನಾವಣಾ ಕಣದಿಂದ ಬದಲಿಸಲಾಗಿದೆ. ರಾಜಕೀಯ ಬೆಳವಣಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಜಿಲ್ಲಾ ರಾಜಕಾರಣದಲ್ಲಿ ತಲ್ಲಣ ಮಾಜಿ ಸಚಿವ ಬಿಬಿ ನಿಂಗಯ್ಯ- ವಕೀಲ ಧನಂಜಯ್ ಔಟ್ ಕಾಂಗ್ರೆಸ್ ದತ್ತ – ಬಿಜೆಪಿ ಎಮ್ .ಪಿ ಕುಮಾರಸ್ವಾಮಿ ಇನ್
Disturbance in district politics: