ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ೨೦೨೩ಕ್ಕೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆಗೆ ೫ನೇ ದಿನವಾದ ಇಂದು (ಏಪ್ರಿಲ್ ೧೯ ರಂದು) ಚಿಕ್ಕಮಗಳೂರು ಜಿಲ್ಲೆಯಲ್ಲಿ ೨೫ ನಾಮಪತ್ರ ಸಲ್ಲಿಕೆಯಾಗಿದೆ.
೧೨೩ – ಶೃಂಗೇರಿ, ವಿಧಾನಸಭಾ ಕ್ಷೇತ್ರದಿಂದ ಎ.ಎ.ಪಿ. ಪಕ್ಷದಿಂದ ರಾಜನ್ ಹೆಚ್.ಎಸ್., ಬಹುಜನ ಸಮಾಜ ಪಕ್ಷದಿಂದ ಕೆ.ಎಂ. ಗೋಪಾಲ, ಪಕ್ಷೇತರ ಅಭ್ಯರ್ಥಿಗಳಾಗಿ ನಾರಾಯಣ, ಜಿ. ಭಾರತಿ ನಾಮಪತ್ರ ಸಲ್ಲಿಸಿದ್ದಾರೆ.
೧೨೪ – ಮೂಡಿಗೆರೆ, ವಿಧಾನ ಸಭಾ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದಿಂದ ರಮೇಶ್ ಎಲ್.ಬಿ., ಭಾರತೀಯ ಜನತಾ ಪಕ್ಷದಿಂದ ದೀಪಕ್ ದೊಡ್ಡಯ್ಯ, ಜನತಾ ದಳ (ಜಾತ್ಯಾತೀತ) ದಿಂದ ಬಿ.ಬಿ. ನಿಂಗಯ್ಯ, ಪಕ್ಷೇತರರಾಗಿ ರುದ್ರೇಶ್, ಚೇತನ್ ಪ್ರಸಾದ್ ಎಲ್., ಜನತಾ ದಳ (ಜಾತ್ಯಾತೀತ) ದಿಂದ ಎಂ.ಪಿ. ಕುಮಾರಸ್ವಾಮಿ ನಾಮಪತ್ರ ಸಲಿಸಿದ್ದಾರೆ.
೧೨೫ – ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಹೆಚ್.ಡಿ. ತಮ್ಮಯ್ಯ, ಪಕ್ಷೇತರರಾಗಿ ವಿಜಯಕುಮಾರ್, ಹೊನ್ನಪ್ಪ ಯು. ಆರ್. ಯಾನೆ ಹೊನ್ನೇಶ್ ನಾಮಪತ್ರ ಸಲ್ಲಿಸಿದ್ದಾರೆ.
೧೨೬ – ತರೀಕೆರೆ ವಿಧಾನ ಸಭಾ ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆ.ಆರ್.ಎಸ್.) ಕೆ. ಗೋವಿಂದಪ್ಪ, ಪಕ್ಷೇತರರಾಗಿ ಹೆಚ್.ಓ. ವೀರಭದ್ರಪ್ಪ, ಎ.ಬಿ. ರಾಜಕುಮಾರ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಜಿ.ಹೆಚ್. ಶ್ರೀನಿವಾಸ, ಪರಮೇಶ್ವರಪ್ಪ ಡಿ.ಎಂ. ಪಕ್ಷೇತರರಾಗಿ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ೨ ನಾಮಪತ್ರ ಸಲ್ಲಿಸಿದ್ದಾರೆ.
೧೨೭ – ಕಡೂರು ವಿಧಾನ ಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ಕೆ.ಆರ್. ಗಂಗಾಧರಪ್ಪ, ಭದ್ರರಾಜು ಹೆಚ್.ಎಲ್., ಎ.ಎ.ಪಿ. ಯಿಂದ ರಾಜೇಶ್ವರಿ ಬಿ.ಹೆಚ್., ಜನತಾ ದಳ (ಜಾತ್ಯಾತೀತ)ದಿಂದ ವೈ.ಎಸ್.ವಿ. ದತ್ತ ನಾಮಪತ್ರ ಸಲ್ಲಿಸಿದ್ದು, ಕಡೂರು ಸಿ. ನಂಜಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಹಾಗೂ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.
25 nominations submitted