ಮೂಡಿಗೆರೆ: ಕಾಂಗ್ರೆಸ್ ಮತ್ತು ಬಿಜೆಪಿ ಒಂದೆ ನಾಣ್ಯದ ಎರಡು ಮುಖಗಳು ಆ ಪಕ್ಷಗಳಿಗೆ ಬದ್ಧತೆ ಇಲ್ಲ. ಜನರಿಗೆ ಸುಳ್ಳು ಹೇಳಿ ಮತಯಾಚಿಸಿ ಅಧಿಕಾರಕ್ಕೆ ಬಂದ ಬಳಿಕ ಪಂಗನಾಮ ಹಾಕುವುದೆ ಎರಡು ಪಕ್ಷಗಳಿಗೆ ಅಭ್ಯಾಸವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದರು.
ಅವರು ಬುಧವಾರ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ನಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ೪ವರ್ಷದಿಂದ ಜನ ಗಮನಿಸುತ್ತಿದ್ದಾರೆ. ಇಂತಹ ಕೆಟ್ಟ ಸರ್ಕಾರ ಇನ್ನು ಮುಂದೆ ಅಧಿಕಾರಕ್ಕೆ ಬರದಂತೆ ತಡೆಗಟ್ಟಬೇಕು ಎಂದರು.
ಉಪಯೋಗಿಕಿಲ್ಲದ ಈ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೈತಿಕ ಪೊಲೀಸ್ ಗಿರಿ ಮುಂದುವರೆದಿದೆ. ಅಭಿವೃದ್ಧಿ ಶೂನ್ಯವಾಗಿದೆ. ಅತಿವೃಷ್ಟಿ ನಿರಾಶ್ರಿತರು ಬೀದಿಯಲ್ಲಿದ್ದಾರೆ. ಜನ ನೆಮ್ಮದಿ ಕಳೆದುಕೊಂಡಿದ್ದಾರೆ ಅಂತಹ ಪಕ್ಷವನ್ನು ದೂರವಿಡಬೇಕು ಇಲ್ಲವಾದರೆ ರಾಜ್ಯದ ಜನ ನಿರ್ಗತಿಕರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಂ.ಪಿ.ಕುಮಾರಸ್ವಾಮಿ ಅವರು ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಇನ್ನು ಅವರ ಬದಲಾವಣೆ ಇಲ್ಲ. ಯಾರದೋ ಮಾತಿಗೆ ಕಿವಿಗೊಡದೆ ಜೆಡಿಎಸ್ ಪಕ್ಷವನ್ನು ಚುನಾಯಿಸಿ ನನ್ನ ಕೈ ಬಲಪಡಿ ಮನವಿ ಮಾಡಿ ಜೆಡಿಎಸ್ ಮೊದಲ ಪಟ್ಟಿಯಲ್ಲಿ ಘೋಷಿಸಿರುವ ಅಭ್ಯರ್ಥಿಯ ಬದಲಾವಣೆ ಮಾಡುವಂತೆ ಪಕ್ಷದ ಇಲ್ಲಿನ ಎರಡು ಬಣದವರು ಬಂದು ಕೇಳಿಕೊಂಡಿದ್ದರು ಎಂದರು.
ಹಾಗಾಗಿ ಬಿಜೆಪಿಯಲ್ಲಿ ಶಾಸಕರಾಗಿದ್ದ ಕುಮಾರಸ್ವಾಮಿ ಅವರಿಗೆ ಅಲ್ಲಿ ಟಿಕೇಟ್ ನೀಡದೆ ಮೋಸ ಮಾಡಿದಾಗ ಅವರನ್ನು ಕರೆದು ಟಿಕೆಟ್ ಕೊಡಲಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಭಾರಿ ಅಂತರದ ಗೆಲುವು ಪಡೆಯುವಂತಾಗಬೇಕು. ರಾಜ್ಯದಲ್ಲಿ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸಮಾವೇಶ ಆರಂಭವಾಗುವುದಕ್ಕಿಂತ ಮುಂಚೆ ಎಂ.ಪಿ.ಕುಮಾರಸ್ವಾಮಿ ಜೆಡಿಎಸ್ ನಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಪಟ್ಟಣದಲ್ಲಿ ರೋಡ್ ಶೋ ನಡೆಯಿತು. ೨೪೪ ಮಂದಿ ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.
ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಎಂ.ಎಸ್.ಬಾಲಕೃಷ್ಣ, ಜಿ.ಕೆ.ಮಂಜಪ್ಪಯ್ಯ, ಜ್ವಾಲನಯ್ಯ, ಅರೆಕೂಡಿಗೆ ಶಿವಣ್ಣ, ಬಿ.ಎಂ.ಬೈರೇಗೌಡ, ಪಿ.ಕೆ.ಹಂಝ, ರಘುಪತಿ, ವಾಜಿದ್ ಹುಸೇನ್, ಬಿ..ಎಂ.ಲೋಹಿತ್ ಇತರರಿದ್ದರು.
Congress-BJP are two sides of the same coin