ಕೆಲವರು ವ್ಯಾಯಾಮ (Exercise) ದ ಮೂಲಕ ಉತ್ತಮ ಆರೋಗ್ಯ (Health ) ಹೊಂದಿದರೆ ಇನ್ಕೆಲವರು ಸೀಮಿತ ಆಹಾರ ಸೇವಿಸುವುದರ ಮೂಲಕ ಫಿಟ್ ಆಗಿರುತ್ತಾರೆ. ಬಹಳ ಮಂದಿ ರಾತ್ರಿ (night) ಯ ಹೊತ್ತು ಊಟ ಮಾಡದೇ ಹಣ್ಣು ತರಕಾರಿ ಅಥವಾ ಮೊಳಕೆ ಕಾಳನ್ನು ತಿನ್ನುತ್ತಾರೆ ಅಥವಾ ಹಾಲನ್ನು ಕುಡಿಯುತ್ತಾರೆ ಇಲ್ಲವೇ ಅನ್ನದ ಹೊರತಾಗಿ ರೊಟ್ಟಿ, ಚಪಾತಿ ಮುಂತಾದವುಗಳನ್ನು ತಿನ್ನುತ್ತಾರೆ. ಇಂತಹ ಡಯಟ್ ಗಳು ಶರೀರದ ಸಮತೋಲನವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಇದರಿಂದ ಅನೇಕ ಖಾಯಿಲೆಗಳು ಆವರಿಸುತ್ತವೆ. ಇಂದು ಅನೇಕ ಮಂದಿ ರಾತ್ರಿಯ ಸಮಯದಲ್ಲಿ ರೊಟ್ಟಿಯನ್ನು ಮಾತ್ರ ತಿನ್ನುತ್ತಾರೆ. ಅಂತವರು ಜಾಗರೂಕರಾಗಿರಬೇಕು. ಏಕೆಂದರೆ ಪ್ರತಿನಿತ್ಯ ರಾತ್ರಿ ರೊಟ್ಟಿಯ ಸೇವನೆ ಶರೀರಕ್ಕೆ ಬಹಳ ಅಪಾಯಕಾರಿ. ಪ್ರತಿದಿನ ರಾತ್ರಿ ರೊಟ್ಟಿ ತಿನ್ನುವುದರಿಂದ ಉಂಟಾಗುವ ನಷ್ಟಗಳು ಹೀಗಿವೆ..
ರಾತ್ರಿಯ ಸಮಯದಲ್ಲಿ ರೊಟ್ಟಿಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ. ಈ ರೀತಿಯ ಅಭ್ಯಾಸ ಡಯಾಬಿಟೀಸ್ ಮತ್ತು ಪಿಸಿಓಡಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮಾರಕವಾಗಬಹುದು. ರೊಟ್ಟಿ ರಕ್ತದಲ್ಲಿ ಸಕ್ಕರೆಯ ಅಂಶವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಇದು ಇನ್ಸುಲಿನ್ ಉತ್ಪಾದನೆಯ ಕ್ರಿಯೆಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಶರೀರದ ಉಳಿದ ಅಂಗಗಳು ಕೂಡ ಇದರಿಂದ ತೊಂದರೆಗೆ ಒಳಗಾಗುತ್ತವೆ.
ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾದಾಗ ಮಾತ್ರ ದೇಹಕ್ಕೆ ಶಕ್ತಿ ಸಿಗುತ್ತದೆ. ಆಹಾರ ಜೀರ್ಣವಾಗಲು ಚಯಾಪಚಯ ಕ್ರಿಯೆ ಸರಿಯಾಗಿರಬೇಕು. ಚಯಾಪಚಯ ಕ್ರಿಯೆಯು ಎಷ್ಟು ವೇಗವಾಗಿ ನಡೆಯುತ್ತದೆಯೋ ಅಷ್ಟು ಬೇಗ ತೂಕದಲ್ಲಿ ಇಳಿಕೆಯಾಗುತ್ತದೆ. ಈ ಕ್ರಿಯೆಗೆ ಕೂಡ ಶಕ್ತಿಯ ಅವಶ್ಯಕತೆ ಇರುತ್ತದೆ. ಅಂತಹ ಶಕ್ತಿ ನಾರಿನ ಪದಾರ್ಥ ಮತ್ತು ಆರೋಗ್ಯಕರ ಪಾನೀಯಗಳಲ್ಲಿ ಇರುತ್ತದೆ.
ರೊಟ್ಟಿಯು ಒಂದು ಕಾರ್ಬೊಹೈಡ್ರೇಟ್ ಆಹಾರವಾಗಿದೆ. ಇದು ಚಯಾಪಚಯ ಕ್ರಿಯೆಯನ್ನು ಹಾಳುಮಾಡಿ ಸ್ಥಗಿತಗೊಳ್ಳುವಂತೆ ಮಾಡುತ್ತದೆ. ರೊಟ್ಟಿ ಕರುಳಿನ ಚಲನೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆ ಕಾರಣಕ್ಕಾಗಿಯೇ ರೊಟ್ಟಿಯ ಬದಲು ನಾರಿನಂಶವಿರುವ ಆಹಾರವನ್ನು ಸೇವಿಸುವುದು ಉತ್ತಮವಾಗಿದೆ. ನಾರಿನಂಶವಿರುವ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಸುಲಭವಾಗಿ ಜೀರ್ಣವಾಗುವ ಆಹಾರ ಕೂಡ ಆಗಿದೆ. ಕೆಲವರ ದೇಹ ಪ್ರಕೃತಿಗೆ ರೊಟ್ಟಿ ಹೊಂದುವುದಿಲ್ಲ. ಪ್ರತಿನಿತ್ಯ ರೊಟ್ಟಿ ಸೇವಿಸುವುದರಿಂದ ಕೆಲವರಿಗೆ ಮಲಬದ್ಧತೆಯ ಸಮಸ್ಯೆ, ಎದೆಯುರಿ, ಎಸಿಡಿಟಿ ಮುಂತಾದ ಸಮಸ್ಯೆಗಳು ಕೂಡ ಎದುರಾಗುತ್ತವೆ.
If you eat bread every night, it is not made for health