ಚಿಕ್ಕಮಗಳೂರು: ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು 102 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಟ್ಟು 74 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕೆಲವರು ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ್ದಾರೆ. 68 ಪುರುಷರು 95 ಹಾಗೂ ಆರು ಮಹಿಳೆಯರು ಏಳು ನಾಮಪತ್ರ ಸಲ್ಲಿಸಿದ್ದಾರೆ.
ಪುರುಷರು ಚಿಕ್ಕಮಗಳೂರು: 21, ತರೀಕೆರೆ: 16, ಶೃಂಗೇರಿ ಮತ್ತು ಮೂಡಿಗೆರೆ ತಲಾ 10, ಕಡೂರು: 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಮಹಿಳೆಯರು ಶೃಂಗೇರಿ ಹಾಗೂ ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ತಲಾ ಇಬ್ಬರು, ಮೂಡಿಗೆರೆ ಮತ್ತು ಕಡೂರು ಕ್ಷೇತ್ರಗಳಲ್ಲಿ ತಲಾ ಒಬ್ಬರು ಸಲ್ಲಿಸಿದ್ದಾರೆ. ತರೀಕೆರೆ ಕ್ಷೇತ್ರದಲ್ಲಿ ಒಬ್ಬರೂ ಸಲ್ಲಿಸಿಲ್ಲ.
ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು 30 ನಾಮಪತ್ರ ಸಲ್ಲಿಕೆ ತರೀಕೆರೆ 22, ಮೂಡಿಗೆರೆ 18, ಶೃಂಗೇರಿ ಮತ್ತು ಕಡೂರು ತಲಾ16 ನಾಮಪತ್ರ ಸಲ್ಲಿಕೆಯಾಗಿವೆ.
ಬಿಜೆಪಿ:14, ಕಾಂಗ್ರೆಸ್: 12, ಜೆಡಿಎಸ್: 11, ಎಎಪಿ: 6, ಬಿಎಸ್ಪಿ: 4, ನೋಂದಾಯಿತ ಮಾನ್ಯತೆರಹಿತ ಪಕ್ಷ: 15 ಹಾಗೂ ಪಕ್ಷೇತರವಾಗಿ 40 ನಾಮಪತ್ರ ಸಲ್ಲಿಕೆಯಾಗಿವೆ.
ವೆಚ್ಚ ವೀಕ್ಷಕರ ನೇಮಕ: ಚುನಾವಣಾ ಚಟುವಟಿಕೆಗಳ ಮೇಲೆ ನಿಗಾವಹಿಸಲು ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರನ್ನು ನೇಮಿಸಲಾಗಿದೆ. ಶೃಂಗೇರಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳಿಗೆ ಅಭಯ್ ಮೊ:198470627, ಇ-ಮೇಲ್: abhaysinghias07@gmail.com, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಎಂ. ಬಾಲಾಜಿ ಮೊ: 9488064000 ಇ-ಮೇಲ್: m.balaji05@nic.in, ತರೀಕೆರೆ, ಕಡೂರು ಇ. ಶ್ರೀಧರ್ ಮೊ: 9100901425, ಇ-ಮೇಲ್: e.sridhar@ias.nic.in ಹಾಗೂ ಪೊಲೀಸ್ ವೀಕ್ಷಕರಾಗಿ ವಿಜಯ್ಸಿಂಗ್ ಮೀನಾ ಅವರನ್ನು ನೇಮಿಸಿದೆ. ಮೊ: 8005277589ಇ-ಮೇಲ್: spenq@up.nic.in
ಕೊನೆ ದಿನ 33 ನಾಮಪತ್ರ ಸಲ್ಲಿಕೆ: ನಾಮಪತ್ರ ಸಲ್ಲಿಕೆ ಕೊನೆ ದಿನ ಗುರುವಾರ ಜಿಲ್ಲೆಯಲ್ಲಿ 33 ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರಗಳ ಪರಿಶೀಲನೆ ಇದೇ 21ರಂದು ನಡೆಯಲಿದೆ.
ಶೃಂಗೇರಿ: ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷದಿಂದ ಎಂ.ಕೆ. ದಯಾನಂದ, ಜೆಡಿಎಸ್ನಿಂದ ಸುಧಾಕರ ಎಸ್.ಶೆಟ್ಟಿ, ಪಕ್ಷೇತರವಾಗಿ ಮಂಜುನಾಥ(ಅಬ್ರಹಾಂ), ಕೆ.ಆರ್.ಕುಸುಮಾ, ಸಿಪಿಐನಿಂದ ಬಿ.ಎ.ಉಮೇಶ್ ನಾಮಪತ್ರ ಸಲ್ಲಿಸಿದ್ದಾರೆ.
ಮೂಡಿಗೆರೆ: ಬಿಜೆಪಿಯಿಂದ ದೀಪಕ್ ದೊಡ್ಡಯ್ಯ, ಕರುನಾಡು ಪಕ್ಷದಿಂದ ಎಚ್.ಎಸ್. ಕುಮಾರಸ್ವಾಮಿ, ಎಎಪಿಯಿಂದ ಸಿ.ಪ್ರಭು, ಪಕ್ಷೇತರವಾಗಿ ಬಿ.ಬಿ.ನಿಂಗಯ್ಯ ನಾಮಪತ್ರ ಸಲಿಸಿದ್ದಾರೆ.
A total of 102 nomination papers were submitted in five constituencies of the district