ಚಿಕ್ಕಮಗಳೂರು: ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿ ೬ನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ಜಿಲ್ಲೆಗೆ ಶೇ. ೬೯.೪೨ ರಷ್ಟು ಫಲಿತಾಂಶ ಬಂದಿದ್ದು, ಈ ಬಾರಿ ಶೇ. ೮೩.೨೮ ರಷ್ಟು ಫಲಿತಾಂಶ ಬಂದಿದ್ದು, ಚೇತರಿಕೆ ಕಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಥಮ ಬಾರಿ ಪಿಯು ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳ ಸಂಖ್ಯೆ ೮೪೨೭ ಈ ಪೈಕಿ ೭೦೧೮ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹಾಗಾಗಿ ಶೇ. ೮೩.೨೮ ರಷ್ಟು ಫಲಿತಾಂಶ ಬಂದಿದೆ. ಪ್ರಥಮ ಬಾರಿಗೆ ೮೪೨೭, ಖಾಸಗಿಯಾಗಿ ೩೪೮, ಪುನಾವರ್ತಿತ ೬೮೭ ಸೇರಿದಂತೆ ಒಟ್ಟು ೯೪೬೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೭೫೩೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅಂದರೆ, ಶೇ. ೭೯.೫೯ ರಷ್ಟು ಫಲಿತಾಂಶ ಬಂದಿದೆ.
ಪ್ರಥಮ ಬಾರಿಗೆ ಪರೀಕ್ಷೆ ತೆಗೆದುಕೊಂಡ ೯೪೬೨ ವಿದ್ಯಾರ್ಥಿಗಳಲ್ಲಿ ೪೪೭೭ ಬಾಲಕರು, ೪೯೮೫ ಬಾಲಕಿಯರು ಇದ್ದು, ಇವರಲ್ಲಿ ೩೨೯೧ ಬಾಲಕರು ಹಾಗೂ ೪೨೪೦ ಬಾಲಕಿಯರು ತೇರ್ಗಡೆಯಾಗಿದ್ದಾರೆ. ಅಂದರೆ, ಬಾಲಕರು ಶೇ. ೭೩.೫೧ ಫಲಿತಾಂಶ ಪಡೆದುಕೊಂಡಿದ್ದರೆ, ಬಾಲಕಿಯರಿಗೆ ಶೇ. ೮೫.೦೬ ಫಲಿತಾಂಶ ಬಂದಿದೆ.
ಈ ಬಾರಿ ನಗರ ಪ್ರದೇಶದ ೬೧೦೩ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ ೫೧೧೫ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. ೮೩.೮೧ ಫಲಿತಾಂಶ ಬಂದಿದೆ. ಅಂದರೆ ೩೨೫೧ ಬಾಲಕರಲ್ಲಿ ೨೩೭೮ ಮಂದಿ ತೇರ್ಗಡೆ, ೩೬೮೪ ಬಾಲಕಿಯರಲ್ಲಿ ೩೧೩೪ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ೨೩೨೪ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಇವರಲ್ಲಿ ೧೯೦೩ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. ೮೧.೮೮ ರಷ್ಟು ಫಲಿತಾಂಶ ಬಂದಿದೆ. ಅಂದರೆ, ೧೨೨೬ ಬಾಲಕರಲ್ಲಿ ೯೧೩, ೧೩೦೧ ಬಾಲಕಿಯರಲ್ಲಿ ೧೧೦೬ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಮೂರು ವಿಭಾಗಗಳ ಪೈಕಿ ಕಲಾ ಹಾಗೂ ವಾಣಿಜ್ಯ ವಿಭಾಗಗಳಿಗೆ ಹೋಲಿಕೆ ಮಾಡಿದರೆ ವಿeನ ವಿಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅಂದರೆ, ಶೇ. ೯೧.೯೨ ರಷ್ಟು ಫಲಿತಾಂಶ ಬಂದಿದೆ. ವಿeನ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿರುವ ೨೬೨೫ ವಿದ್ಯಾರ್ಥಿಗಳಲ್ಲಿ ೨೪೧೩ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ೨೮೯೨ ವಿದ್ಯಾರ್ಥಿಗಳಲ್ಲಿ ೨೪೮೪ ಉತ್ತೀರ್ಣರಾಗಿದ್ದು, ಶೇ.೮೫.೮೯ ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ೨೯೧೦ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಈ ಪೈಕಿ ೨೧೨೧ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ.೭೨.೮೯ ಫಲಿತಾಂಶ ಬಂದಿದೆ.
2nd PU Result Chikmagalur 6th position in the state