ಶೃಂಗೇರಿ: ಎಲ್ಲಾ ಜಾತಿ, ಧರ್ಮದವರ ಹಿತ ಕಾಯುವುದೊಂದೆ ಕಾಂಗ್ರೆಸ್ ಪಕ್ಷದ ಧರ್ಮ. ರೈತರಿಗೆ ಯಾವುದೇ ಪಿಂಚಣಿ, ಪ್ರಮೋಷನ್, ಲಂಚಗಳು ಯಾವುದು ಇಲ್ಲಾ. ಶೃಂಗೇರಿ ಕ್ಷೇತ್ರ ರೈತ ಪ್ರಧಾನವಾದ ಕ್ಷೇತ್ರವಾಗಿದೆ. ಅಡಿಕೆಯನ್ನು ತಾಂಬೂಲದಲ್ಲಿಟ್ಟು ದೇವರೆಂದು ಪೂಜಿಸುವ ಅಡಿಕೆಯನ್ನು ಉಳಿಸಿಕೋಳ್ಳದ ಸರ್ಕಾರ, ಇನ್ನು ಯಾವುದನ್ನು ಉಳಿಸಿಕೋಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲ್ ಹಾಕಿದರು.
ಶೃಂಗೇರಿ ಜೆಸಿಬಿಎಂ ಕಾಲೇಜಿನ ಮೈದಾನದಲ್ಲಿ ಶನಿವಾರ ಆಯೋಜಿಸದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಬಿಜೆಪಿ ಪಕ್ಷದ ನಿಲುವು ಭಾವನೆ. ಆದರೆ ಕಾಂಗ್ರೆಸ್ ಪಕ್ಷದ ನಿಲುವು ಬದುಕು. ಜನರೊಂದಿಗೆ ಮೊದಲು ನಗುತ್ತ ಮಾತನಾಡುವುದು ಹಾಲಿ ಶಾಸಕರ ನಡೆ. ಮೊದಲು ಗಂಟು ಮುಖದೊಂದಿಗೆ ಮಾತನಾಡಿ ಆಮೇಲೆ ನಗುವುದೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯ ನಡೆ. ಧರ್ಮ ಯಾವುದಾದರು ದೈವಾ ಒಂದೆ. ನಾಮ ಹಲವು ಆದರೂ ದೇಹ ಒಂದೆ. ಸಂವಿಧಾನವನ್ನು ಉಳಿಸಿಕೋಳ್ಳಲು ಎಲ್ಲಾ ವರ್ಗದವರು ಒಂದಾಗಬೇಕು. ಈಗಿನ ಬಿಜೆಪಿ ಸರ್ಕಾರ ಜಿಎಸ್ಟಿ, ತೈಲಾ ಬೆಲೆ, ಅಡಿಗೆ ಅನಿಲ ಮತ್ತು ದಿನನಿತ್ಯ ಬಳಕೆಯ ವಸ್ತು ಬೆಲೆ ಏರಸಿ ಜನರಲ್ಲಿ ಪಿಕ್ಪಾಕೆಟ್ ಮಾಡಲಾಗುತ್ತೀದೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಬಿಜೆಪಿ ಸಹಾವಾಸ ಸಾಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸೈಕಲ್ ಮತ್ತು ಸೀರೆ ಮಾತ್ರ ನೀಡಿದ್ದಾರೆ ಎಂದು ಲೇವಡಿ ಮಾಡಿದರು. ಜನರಿಗೆ ಕಾಂಗ್ರೆಸ್ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅಂಶುಮಂತ್, ಎಐಸಿಸಿಯ ಸಂಧಿಪ್, ಎಂಎಲ್ಸಿ ಶ್ರೀನಿವಾಸ್, ಗಾಯಿತ್ರಿ ಶಾಂತೇಗೌಡ, ಬಿ.ಎಲ್ ಶಂಕರ್, ಕುಕ್ಕುಡಿಗೆ ರವೀಂದ್ರ, ಸಚಿನ್ ಮೀಗಾ, ರಮೇಶ್ ಭಟ್, ಸತೀಶ್ ಎಚ್.ಎಂ, ಬಾಳೆಮನೆ ನಟರಾಜ್, ಶ್ರೀಜಿತ್, ಸುಧೀರ್ ಕುಮಾರ್ ಮುರೋಳ್ಳಿ, ಎಂ.ಎಚ್ ನಟರಾಜ್, ಶಕಿಲಾ ಗುಂಡಪ್ಪ ಇದ್ದರು.
Congress is a party that looks after the welfare of all castes and religions