ಕಳಸ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಕ್ಷರದಾಸೋಹ ಕಾರ್ಯಕ್ರಮವನ್ನು ಮಾಡುವ ಮೊದಲೇ ಹೊರನಾಡು ಕ್ಷೇತ್ರದಿಂದ ೧೯೫೪ರಲ್ಲೇ ಶಾಲೆಗೆ ಬಿಸಿಯೂಟ ಕೋಡುವ ಕಾರ್ಯಕ್ರಮ ಮಾಡಲಾಗಿದೆ ಎಂದು ಹುಕ್ಕೇರಿ ಮಹಾ ಸಂಸ್ಥಾನ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮತ್ತು ರಥೋತ್ಸವ ಕಾರ್ಯಕ್ರಮದ ಮೊದಲನೆ ದಿನವಾದ ಶನಿವಾರ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಧರ್ಮ ಅಂದರೆ ಹೇಳಿ ಕಲಿಯುವುದಲ್ಲ ಅದನ್ನು ನೋಡಿ ಕಲಿಯಬೇಕು.ನೋಡಿ ಕಲಿಯುವಂತ ಅಪರೂಪದ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ ಎಂದು ಹೇಳಿದರು.
ಕ್ಷೇತ್ರದ ಪ್ರೇರಣೆಯಿಂದಲೇ ಸರ್ಕಾರ ಈ ಯೋಜನೆಯನ್ನು ಹೊರ ತಂದಿದೆ.ದೇವಸ್ಥಾನದಿಂದ ಕೇವಲ ಅನ್ನದಾನವನ್ನು ಮಾತ್ರ ಮಡುತ್ತಿಲ್ಲ ಜೊತೆಗೆ ಸಂಸ್ಕಾರವನ್ನು ಕೂಡ ಕೊಡುತ್ತದೆ ಎಂದು ಹೇಳಿದರು.
ಹೋರನಾಡು ದೇವಸ್ಥಾನದ ಧರ್ಮಕರ್ತ ಜಿ.ಭೀಮೆಶ್ವರ ಜೋಷಿ ಮಾತನಾಡಿ ನಮಗೆ ಯಾವುದೂ ಆಗಬಾರದು ಎಂದು ಭಯಸುತ್ತೇವೆಯೋ ಅದು ಇನ್ನೊಬ್ಬರಿಗೂ ಆಗಬಾರದು ಎಂದು ಭಯಸುತ್ತೇವೆಯೋ ಅದು ಧರ್ಮ.ಜೀವನದ ಸಂಪಾಧನೆಯಲ್ಲಿ ಕುಟುಂಬಕ್ಕಾಗಿ, ಧರ್ಮಕ್ಕಾಗಿ, ಸಮಾಜಕ್ಕಾಗಿ ಮುಡಿಪಾಗಿಟ್ಟರೆ ಅದು ಧರ್ಮವಾಗುತ್ತದೆ.ಜೀವನದಲ್ಲಿ ನಾವು ಸಂತೋಷವಾಗಿರಬೇಕು ಎಂದು ಭಯಸುತ್ತೇವೆ.ಆದರೆ ನಾವು ಸಂತೋಷವಾಗಬೇಕಾದರೆ ನಿತ್ಯ ಸಂತೋಷಿಯಾಗಬೇಕು.ಯಾವ ವ್ಯಕ್ತಿ ಸಿಕ್ಕ ಅವಕಾಶವನ್ನು ಜೀವನವನ್ನು ತ್ಯಾಗಕ್ಕೆ ಮುಡಿಪಾಗಿಡುತ್ತಾನೋ ಆತ ನಿತ್ಯ ಸಂತೋಷಿಯಾಗಿರುತ್ತಾನೆ.
ಜೀವನ ಉಜ್ಜೀವನ ಆಗಬೇಕಾದರೆ ನಮ್ಮ ಬದುಕು ನಿದರ್ಶನದ ಬದುಕಾಗಬೇಕು.ನಿದರ್ಶನದ ಬದುಕಾಗಬೇಕಾದರೆ ನಮ್ಮ ಜೀವನ ಸರಳವಾಗಿರಬೇಕು.ಯಾರನ್ನೂ ತೃಪ್ತಿ ಪಡಿಸಲು ಹೋಗುವುದಕ್ಕಿಂತ ನಮ್ಮ ಆತ್ಮವನ್ನು ತೃಪ್ತಿಪಡಿಸಬೇಕು. ಹಿರಿಯರ ಶ್ರಮದ ಫಲದಿಂದ ಕ್ಷೇತ್ರ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ.ಪ್ರತಿಯೊಬ್ಬ ಭಕ್ತನಲ್ಲೂ ಅನ್ನಪೂರ್ಣೇಶ್ವರಿಯ ರೂಪವನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ರಾಜ್ಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ ಅನ್ನದಾನ ಶ್ರೇಷ್ಠದಾನ.ಅನ್ನದಾನ ಮಾಡುವವನು ಬಾಗಿ ಕೊಡುತ್ತಾನೆ ಆದ್ದರಿಂದ ಅದು ಶ್ರೇಷ್ಟವಾಗಿದೆ.ಪುಣ್ಯ ಕ್ಷೇತ್ರದ ದೊಡ್ಡ ಶಕ್ತಿ ಎಂದರೆ ಪುಣ್ಯ ಕ್ಷೇತ್ರದಲ್ಲಿ ಇರುವಷ್ಟು ಹೊತ್ತಾದರೂ ನಾವು ಒಳ್ಳೆಯರಾಗಿರುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಸೇವಾ ಸಾಧಕರಾದ ಮುದ್ದಿನಗದ್ದೆ ಚಿನ್ನಾಚಾರಿ, ಉಮನಾಥ, ಅಚ್ಚುತಭಟ್, ಕೃಷ್ಣಾಚಾರಿ, ಪುಟ್ಟಾಚಾರಿ, ಬೆಳ್ಳ ಬಸ್ರಿಮಕ್ಕಿ, ಸೋಮ, ಹಾಲಗ, ಲಕ್ಷ್ಮಾ ಇವರನ್ನು ಗೌರವಿಸಲಾಯಿತು. ಇದಕ್ಕಿಂತ ಮುಂಚಿತವಾಗಿ ಬೆಳಿಗ್ಗೆ ಉದ್ಬವಗಣಪತಿ, ಅನ್ನಪೂರ್ಣೆ, ನವಗ್ರಹ ದೇವರು ಮತ್ತು ಆಂಜನೇಯ ಸ್ವಾಮಿಗೆ ಮಹಾಭಿ?ಕ ನಡೆಯಿತು. ಆನಂತರ ಚತುರ್ವೇದ ಪಾರಾಯಣ, ಸುಂದರಕಾಂಡ ಪಾರಾಯಣ, ಶ್ರೀದೇವಿ ಭಾಗವತ ಪಾರಾಯಣ, ಭಗವದ್ಗೀತೆ ಪಾರಾಯಣ, ಕೋಟಿ ಕುಂಕುಮಾರ್ಚನೆ ನಡೆಯಿತು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಸಂಘಟನಾ ಕಾರ್ಯದರ್ಶಿ ಡಾ. ರಾಘವೇಂದ್ರ ಭಟ್, ಹೊರನಾಡು ಗ್ರಾಮ ಪಂಚಾಯಿ ಅಧ್ಯಕ್ಷ ವೃಷಭರಾಜ್ ಜೈನ್, ಸಿಪಿಐ ಮಾಜಿ ಕಾರ್ಯದರ್ಶಿ ಲಕ್ಷ್ಮಣಾಚಾರ್, ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮೀ ಬಿ ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾಶಂಕರ ಜೋಷಿ ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ರೇಖಾ ದಿನೇಶ್ ಕುಮಾರ್ ಮತ್ತು ತಂಡ ಬೆಂಗಳೂರು ಇವರಿಂದ ಭರತ ನಾಟ್ಯ ನಡೆಯಿತು.
ಹೊರನಾಡಿನಲ್ಲಿ ಸೋಮವಾರ ಪುನಃ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಹಾಗಣಪತಿ ಹೋಮ, ಚಂಡಿಕಾ ಹೋಮ, ಲಲಿತಾ ಹೋಮ, ಲಕ್ಷ್ಮೀನಾರಾಯಣ ಹೃದಯ ಹೋಮ, ರಾಮತಾರಕ ಹೋಮ,ಅನ್ನಪೂರ್ಣ ಮೂಲಮಂತ್ರ ಹೋಮ, ಬಾಲತ್ರಿಪುರ ಸುಂದರಿ ಹೋಮ,ಗಾಯತ್ರಿಹೋಮ, ನವಗ್ರಹ ಹೋಮ, ರುದ್ರ ಹೋಮಗಳ ಪೂರ್ಣಾಹುತಿ, ನೂತನ ಸೇವಾರಥ ಮತ್ತು ಜಗನ್ಮಾತೆಯ ನೂತನ ಉತ್ಸವಮೂರ್ತಿ ಲೋಕಾರ್ಪಣೆ ಮಾಡಲಾಯಿತು.
Annapurneswari Temple