ಶೃಂಗೇರಿ ಮಠಕ್ಕೆ ಭೇಟಿ ನೀಡಿದ ವೇಳೆ ಮಠದ ಆನೆ ಬಳಿಗೆ ಬಂದು ಅವರು, ಬಾಳೆಹಣ್ಣು ಹಾಗೂ ಸೇಬನ್ನು ಕೊಟ್ಟರು. ಆದರೆ, ಆನೆ ಸೇಬನ್ನು ಮಾವುತನಿಗೆ ಕೊಟ್ಟಿದೆ. ಈ ವೇಳೆ ಪ್ರಿಯಾಂಕಾ ಆನೆಯೊಂದಿಗೆ ಕೆಲಕಾಲ ಸಮಯ ಕಳೆದರು. ಆನೆ ಸೊಂಡಿಲನ್ನು ಸವರಿ ಮುದ್ದು ಮಾಡಿದರು. ಬಳಿಕ ಆನೆ ಸಹ ಪ್ರಿಯಾಂಕಾ ಅವರಿಗೆ ಆಶೀರ್ವಾದ ಮಾಡಿದೆ. ಲಕ್ಷ್ಮಿ, ಜಯಲಕ್ಷ್ಮಿ ಎಂಬ ಎರಡು ಆನೆಗಳೊಂದಿಗೆ ಸಮಯ ಕಳೆದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಗ್ಗೆ ಜನರಿಗೆ ಒಲವಿದೆ. ಬಿಜೆಪಿ ದುರಾಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ. ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದರುಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಂದಿನ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ಜನರಿಗೋಸ್ಕರ ಬಿಜೆಪಿ ಸರ್ಕಾರ ಯಾವ ಕೆಲಸವನ್ನೂ ಮಾಡಿಲ್ಲ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಕರ್ನಾಟಕದ ಜನ ಗುರುತಿಸಿದ್ದಾರೆ. ನನ್ನ ಪ್ರಕಾರ ಕರ್ನಾಟಕದ ಜನ ಬದಲಾವಣೆಯನ್ನು ಬಯಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.ಬಿಜೆಪಿಯವರು ಯಾವ ಕೆಲಸವನ್ನೂ ಮಾಡಿಲ್ಲ. ಜನರಿಗೂ ನೋಡಿ ನೋಡಿ ಸಾಕಾಗಿದೆ. ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದರು.
ಕ್ಕಮಗಳೂರು ಜಿಲ್ಲೆ ಗೆ ಪ್ರವಾಸ ಕೈಗೊಂಡಿದ್ದ ಪ್ರಿಯಾಂಕ ಗಾಂಧಿ ಬಾಳೆಹೊನ್ನೂರು ಮಠಕ್ಕೂ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಮಠಕ್ಕೆ ಭೇಟಿ ನೀಡಿದ ಅವರು ಮಠದ ಆವರಣದಲ್ಲಿ ರುವ ವೀರಭದ್ರೇಶ್ವರ ಸ್ವಾಮಿ ಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಗುರುಗಳು ಮಠದಲ್ಲಿ ಇರದ ಕಾರಣ ಶ್ರೀ ಆಶೀರ್ವಾದ ಪಡೆಯಲು ಸಾಧ್ಯ ವಾಗಲಿಲ್ಲ. ಇನ್ನು ನಂತರ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಿದರು.
ನನ್ನ ಅಜ್ಜಿಯ ಸಂಕಷ್ಟದ ಕಾಲದಲ್ಲಿ ಚಿಕ್ಕಮಗಳೂರು ಜನ ನನ್ನ ಅಜ್ಜಿಯ ಕೈ ಹಿಡಿದಿದ್ದರು, ಈಗ ರಾಜ್ಯದ ಜನ ಕಾಂಗ್ರೆಸ್ ಸಂಕಷ್ಟ ಸಮಯದಲ್ಲಿ ಕಾಂಗ್ರೆಸ್ ಕೈ ಹಿಡಿಯಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಿಳಿಸಿದರು.ಅಂದು ಸಂಕಷ್ಟದಲ್ಲಿದ್ದಾಗ ಚಿಕ್ಕಮಗಳೂರುಜನರು ನನ್ನ ಅಜ್ಜಿಯ ಕೈ ಹಿಡಿದಿದ್ರು. ಈಗಲೂ ನಮ್ಮ ಕುಟುಂಬ ಸಂಕಷ್ಟದ ಸಮಯವನ್ನು ಅನುಭವಿಸುತ್ತಿದೆ. ಚಿಕ್ಕಮಗಳೂರನ್ನು ನಾನು ಯಾವತ್ತಿಗೂ ಮರೆಯೋದಿಲ್ಲ ಎಂದರು.ಚಿಕ್ಕಮಗಳೂರಿನಲ್ಲಿ ಬಾಳೆಹೊನ್ನೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಟಿ.ಡಿ.ರಾಜೇಗೌಡ ಪರ ಮತಯಾಚನೆ ಮಾತನಾಡಿದ ಅವರು, ಮಳೆ ಬರ್ತಾ ಇದೆ ನೋಡಿ ಇದು ಭಗವಂತನ ಆಶೀರ್ವಾದ. ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದು ಹೇಳಿದರು.
#IndiraGandhi #Chikkamagaluru #Karnataka pic.twitter.com/5GtpI37TIF
— Indira Gandhi (@Indira___Gandhi) April 26, 2023
ರಾಹುಲ್ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿ ಲೋಕಸಭೆಯಿಂದ ಹೊರಹಾಕಿದ್ದಾರೆ ಎಂದ ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಮತ್ತೆ ಲೋಕಸಭಾ ಸದಸ್ಯರಾಗಿ ಬರ್ತಾರೆ ಅಂತಾ ನಮಗೆ ವಿಶ್ವಾಸ ಇದೆ. ಪರಶಿವನ ಆಶೀರ್ವಾದ ಇದೆ, ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ. ಕರ್ನಾಟಕದ ಚುನಾವಣೆ ಸತ್ಯ ಮತ್ತು ಜಯದ ಹೋರಾಟ. ಒಂದು ಮಾತು ಹೇಳ್ತೇನೆ, ನಮಗೆ ಎಲ್ಲ ಕಡೆ ಮೋಸ ಆಗ್ತಿದೆ. ನಿಮ್ಮ ಮತವನ್ನು ನೀಡಿ ವಿಶ್ವಾಸ ತುಂಬಿ. ಕರ್ನಾಟಕದಲ್ಲಿ ಹೇಳುವವರು ಕೇಳುವವರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರಲ್ಲಿ ಮನವಿ ಮಾಡಿದರು.
ಇದು ಕರ್ನಾಟಕ ಸ್ವಾಭಿಮಾನ ಪರಿಚಯ ಮಾಡುವಂತಹ ಸಮಯ ಎಂದ ಪ್ರಿಯಾಂಕ ಗಾಂಧಿ, ಕರ್ನಾಟಕ ಸ್ವಾಭಿಮಾನ ದ ರಾಜ್ಯ. ಈ ರಾಜ್ಯದ ಪರಿಸ್ಥಿತಿ ಏನು ಅಂತಾ ಪ್ರತಿಯೊಬ್ಬರಿಗೂ ಗೊತ್ತಿದೆ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸುತ್ತೇವೆ. ನಾವು ನಿಮ್ಮಿಂದ ಲೂಟಿ ಮಾಡುವುದಿಲ್ಲ, ನಾವು ನಿಮ್ಮ ಹಣವನ್ನ ನಿಮಗೆ ವಾಪಸ್ಸು ನೀಡುತ್ತೇವೆ. ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ. ಕರ್ನಾಟಕವನ್ನ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಮ್ಮ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಬೇಕು ಎಂದು ಹೇಳಿದರು.
Gandhi family visit to Sringeri Math