ಕಳಸ: ಪಿಎಫ್ಐ ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ೧೭೦೦ ಜನರನ್ನು ಯಡಿಯೂರಪ್ಪ ಸರ್ಕಾರ ಜೈಲಿಗೆ ಅಟ್ಟಿತು ಆದರೆ ಆನಂತರ ಬಂದ ಸಿದ್ಧರಾಮಯ್ಯ ಅವರನ್ನು ಬಿಡುಗಡೆ ಮಾಡಿ ಮುಸ್ಲಿಮರನ್ನು ಓಲೈಸಿದರು ಎಂದು ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು
ಅವರು ಕಳಸದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ನಾವು ಈಗ ಪಿಎಫ್ಐ ನಿಷೇಧ ಮಾಡಿದ್ದೇವೆ ಎಂದೂ ಹೇಳಿ, ಈ ಚುನಾವಣೆ ಶೋಭಾ, ದೀಪಕ್ ದೊಡ್ಡಯ್ಯ ಚುನಾವಣೆ ಅಲ್ಲ ಈ ಚುಣಾವಣೆ ಕರ್ನಾಟಕದ ಅಭಿವೃದ್ಧಿಯ ಭವಿಷ್ಯದ ಚುನಾವಣೆ ನೀವು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಒಳ್ಳೆ ಫಲಿತಾಂಶ ಬರಲಿದೆ ಎಂದು ಹೇಳಿದರು
ಅವರು ಕಾಂಗ್ರೆಸ್ ಪಕ್ಷವು ಈ ಚುನಾವಣೆಯಲ್ಲಿ ಲಿಂಗಾಯಿತರ ಓಲೈಸುವಿಕೆಯ ನಾಟಕ ಆಡುತ್ತಿದೆ.ಆದರೆ ಹಿಂದೆ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರನ್ನು ಪದಚ್ಯುತಿ ಮಾಡುವ ಮೂಲಕ ಕಾಂಗ್ರೆಸ್ ಲಿಂಗಾಯಿತರಿಗೆ ದ್ರೋಹ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವು ರಾಜ್ಯ ೨೯,೦೦೦ ಕಿ.ಮೀ. ರಸ್ತೆಗೆ ೧ ಲಕ್ಷ ಕೋಟಿ ರೂಪಾಯಿ ಕೊಟ್ಟಿದೆ.ಕರ್ನಾಟಕದಲ್ಲಿ ೪೬ ಲಕ್ಷ ಶೌಚಾಲಯಗಳ ನಿರ್ಮಾಣ, ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್, ಎಫ್ಎಲ್ ಸಂಸ್ಥೆ, ಭದ್ರಾ ಮೇಲ್ದಂಡೆ ನಿರ್ಮಾಣಕ್ಕೆ ಕೇಂದ್ರ ಅನುದಾನ ನೀಡಿದೆ.೫೪ ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಪ್ರೋತ್ಸಾಹ ಧನ ಸಿಕ್ಕಿದೆ ಎಂದರು.
ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ ೧೯೯೮ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಎಂ.ಪಿ.ಕುಮಾರಸ್ವಾಮಿ ಅವರನ್ನು ನಮ್ಮ ಪಕ್ಷಕ್ಕೆ ಕರೆತಂದು ಅವಕಾಶ ಕೊಟ್ಟು, ನಾವೇ ಹಣ ಖರ್ಚು ಮಾಡಿ ಶಾಸಕರಾಗಿ ಮಾಡಿದೆವು. ಆದರೆ ಕಾಲ ಕಳೆದಂತೆ ಪಕ್ಷದ ಬಗ್ಗೆ ನಿಷ್ಟೆ ಇಲ್ಲದೆ ಕಾರ್ಯಕರ್ತರ ವಿಶ್ವಾಸ ಕಳೆದುಕೊಂಡು ಕೆಲ ಹಿಂಬಾಲಕರನ್ನು ಇಟ್ಟುಕೊಂಡು ರಾಜಕೀಯ ಮಾಡಿದ ಕುಮಾರಸ್ವಾಮಿಗೆ ಟಿಕೆಟ್ ಕೊಡಬಾರದು ಎಂಬುದು ಪಕ್ಷದ ಕೇಂದ್ರ ಸಮಿತಿ ತೀರ್ಮಾನ ಎಂದು ಹೇಳಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಈ ಚುನಾವಣೆ ಸತ್ಯ-ಅಸತ್ಯದ ಮಧ್ಯೆ ನಡೆಯುತ್ತಿರುವ ಚುನಾವಣೆ ಈ ಚುನಾವಣೆ ಧರ್ಮ-ಅಧರ್ಮದ ಮಧ್ಯೆ ನಡೆಯುತ್ತಿರುವ ಚುನಾವಣೆ ಮೋದಿ ನೀವು ಬೂತ್ ಗೆಲ್ಲಸಿ, ನಾನು ದೇಶ ಗೆಲ್ಲಿಸುತ್ತೇನೆ ಎಂದಿದ್ದಾರೆ ಮೋದಿ ರಾಜ್ಯದಲ್ಲಿ ಬಹುಮತದ ಸರ್ಕಾರ ತರುವ ಸಂಕಲ್ಪ ಮಾಡಿದ್ದಾರೆ ನಿಮ್ಮ ಭೂಗಳ್ಳರು ಎನ್ನುತ್ತಿದ್ದರು, ಅಧಿಕಾರಿಗಳು ಎದುರಿಸುತ್ತಿದ್ದರು ಅದೇ ಭೂಮಿಯನ್ನ ನಿಮಗೆ ಗುತ್ತಿಗೆ ಕೊಡುವುದಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ.
ಅಭ್ಯರ್ಥಿ ದೀಪಕ್ ದೊಡ್ಡಯ್ಯ ಮಾತನಾಡಿ, ಕಳಸ ತಾಲ್ಲೂಕು ಕೇಂದ್ರದ ಅಭಿವೃದ್ಧಿ, ಇನಾಂ ಭೂಮಿ ಸಮಸ್ಯೆ ನಿವಾರಣೆ, ಕುದುರೆಮುಖ ಪಟ್ಟಣದ ಪುನರುಜ್ಜೀವನ ನನ್ನ ಗುರಿ.ನಾನು ಗೆದ್ದರೆ ನೀವೆಲ್ಲರೂ ಶಾಸಕರಾದಂತೆ.ನಿಮ್ಮೆಲ್ಲರ ಆಶೋತ್ತರ ಈಡೇರಿಸುತ್ತೇನೆ ಎಂದರು.
ಮುಖಂಡರಾದ ಶೇಷಗಿರಿ, ಪ್ರೇಮ್ ಕುಮಾರ್, ಸತೀಶ್, ಸುಷ್ಮಾ, ನಾಗರತ್ನ, ನಾಗಭೂಷಣ್, ಸುಜಿತ್, ವಿಜಯ ಕುಮಾರ್, ರತನ್, ಸುಜಯಾ ಸದಾನಂದ , ದಿನೇಶ್ ಇದ್ದರು.
Siddaramaiah released PFI applicants