ಕಡೂರು: ‘ಕ್ಷೇತ್ರದ ಜನರು ಅವಕಾಶ ನೀಡಿದರೆ ಯಾವುದೇ ಖರ್ಚು ಇಲ್ಲದೆ ಬಗರ್ ಹುಕುಂ ಸಾಗುವಳಿ ಪತ್ರ ನೀಡುವ ಆಶಯ ನನ್ನದಾಗಿದೆ’ ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ತಿಳಿಸಿದರು. ತಾಲ್ಲೂಕಿನ ಎಸ್.ಜಿ. ಕೊಪ್ಪಲು ಗ್ರಾಮದಲ್ಲಿ ಶನಿವಾರ ಅವರು ಮಾತನಾಡಿದರು.
‘ಪ್ರಚಾರಕ್ಕೆ ಹೋದ ಗ್ರಾಮಗಳಲ್ಲಿ ಗ್ರಾಮಸ್ಥರು ಅಭೂತಪೂರ್ವವಾದ ಸ್ವಾಗತ ನೀಡುತ್ತಿದ್ದಾರೆ. ನನ್ನ ಅಧಿಕಾರಾವಧಿಯ ಆಡಳಿತ ಬಗ್ಗೆ ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಎಸ್.ಜಿ.ಕೊಪ್ಪಲು ಗ್ರಾಮದಲ್ಲಿನ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನವನ್ನು ನನ್ನ ಶಾಸಕತ್ವದ ಅವಧಿಯಲ್ಲಿ ನೀಡಲಾಗಿತ್ತು. ಆದರೆ ಕಳೆದ ಬಾರಿ ಸೋತ ಪರಿಣಾಮ ಸಮುದಾಯ ಭವನದ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಮುಂದಿನ ದಿನಗಳಲ್ಲಿ ಅವಕಾಶ ದೊರೆತರೆ ಇದನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನದು’ ಎಂದರು.
ಕ್ಷೇತ್ರದ 300 ಗ್ರಾಮಗಳಲ್ಲಿ ಪ್ರಚಾರದ ಕಾರ್ಯ ಮುಗಿದಿದೆ. ಬಾಕಿ ಉಳಿದಿರುವ 20 ಹಳ್ಳಿಗಳ ಪ್ರಚಾರ ಕಾರ್ಯವನ್ನು ಪೂರ್ಣಗೊಳಿ ಸಲಾಗುತ್ತದೆ. ಕಡೂರು ಜನತೆಗೆ ದತ್ತಣ್ಣನ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ ಎಂದರು.
ಗ್ರಾಮದ ಮುಖಂಡರಾದ ಗೋವಿಂದಪ್ಪ, ಮಲ್ಲಪ್ಪ, ಸಣ್ಣಪ್ಪ, ಎಸ್.ಜಿ.ಕೊಪ್ಪಲು ಅಜ್ಜಯ್ಯ, ಮಲ್ಲೇಗೌಡ, ಚನ್ನವೀರಪ್ಪ, ಪ್ರಭಾವತಿ, ಕೃಷ್ಣಮೂರ್ತಿ, ಸಿಮೆಂಟ್ ಬಾಬು, ಪಟ್ಟಣಗೆರೆ ಜಗದೀಶ್ ಇದ್ದರು.
Wish to issue Bagar Hukum Cultivation Letter