ಕೊಪ್ಪ: ಕರ್ನಾಟಕವು ಭಾರತದ ಪುಣ್ಯಭೂಮಿ, ಭಜರಂಗದಳವನ್ನು ನಿಷೇಧಿಸುವ ಮೂಲಕ ಹಿಂದೂ ಅಸ್ಮಿತೆಯ ಮೇಲೆ ಕಾಂಗ್ರೆಸ್ ಪ್ರಹಾರ ಮಾಡಲು ಹೊರಟಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆರೋಪಿಸಿದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಕೊಪ್ಪ ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೇಷ್ಟ ಭಾರತದಲ್ಲಿ ನಂಬಿಕೆ ಇಲ್ಲದವರು ಪಿಎಫ್ಐಯಂತಹ ಸಮಾಜ ವಿರೋಧಿ, ರಾಷ್ಟ್ರ ವಿರೋಧಿ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಷ್ಟ್ರವಾದಿ, ರಾಷ್ಟ್ರ ಸೇವೆಯ ಸಂಘಟನೆಯಾದ ಭಜರಂಗದಳವನ್ನು ನಿಷೇಧಿಸುವ ಹುನ್ನಾರ ಮಾಧಿಡುತ್ತಿದ್ದಾರೆ. ಭಜರಂಗದಳವನ್ನು ನಿಷೇಧಿಸುವ ಮೂಲಕ ಹಿಂದೂ ಅಸ್ಮಿತೆಯ ಮೇಲೆ ಕಾಂಗ್ರೆಸ್ ಪ್ರಹಾರ ಮಾಡುತಿದೆ ಎಂದರು.
ಯಾವ ಹಿಂದೂ ಸಮಾಜ ಬಾಂಧವರು ಇದನ್ನು ಸ್ವೀಕರಿಸುವುದಿಲ್ಲ ಎಂದ ಅವರು, ಭಜರಂಗಬಲಿಯ ಸ್ಮರಣೆಯಿಂದ ಅಯೋಧ್ಯೆ ರಾಮಜನ್ಮಭೂಮಿಯ ೫೦೦ ವರ್ಷಗಳ ಸಮಸ್ಯೆಗಳು ಬಗೆಹರಿದಿದೆ. ಈ ಘೋಷಣೆಯೊಂದಿಗೆ ಸಮಾಜದ ಎಲ್ಲಾ ವರ್ಗಗಳು ಮುಂದೆ ಹೋಗೋಣ ಎಂದರು.
ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿ ಉತ್ತರಪ್ರದೇಶದಿಂದ ಹನುಮಂತನ ಜನ್ಮಭೂಮಿಯಾದ ಕರ್ನಾಟಕಕ್ಕೆ ಬಂದಿದ್ದೇನೆ. ಕರ್ನಾಟಕ ಮತ್ತು ಉತ್ತರ ಪ್ರದೇಶಕ್ಕೆ ಸಾವಿರಾರು ವರ್ಷಗಳಿಂದ ಅನ್ಯೋನ್ಯ ಸಂಬಂಧಗಳಿವೆ. ಪರಸ್ಪರ ಸಹಕಾರದಿಂದ ಒಂದಕ್ಕೊಂದು ಬೆಸೆದುಕೊಂಡು ಒಂದೇ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಿವೆ ಎಂದು ಹೇಳಿದರು.
ಕಳೆದ ೯ ವರ್ಷಗಳಿಂದ ಭಾರತ ಜಗತ್ತಿನ ನಂಬರ್ ಒನ್ ದೇಶವಾಗಿದೆ. ಮೂಲ ಸೌಕರ್ಯಗಳು, ಹೈವೆ, ರೈಲ್ವೆ, ಏರ್ಪೋರ್ಟ್, ಐಐಟಿ, ಸೈನ್ಸ್ ಸಿಟಿ, ಸ್ಮಾರ್ಟ್ ಸಿಟಿ ಮುಂತಾದವುಗಳಲ್ಲಿ ಅಭಿವೃದ್ಧಿಯಾಗಿದೆ. ಬಿಜೆಪಿ ಡಬಲ್ ಇಂಜಿನ್ ಸರ್ಕಾರದಲ್ಲಿ ಪಿಎಂ ಆವಾಸ್ ಯೋಜನೆಯಡಿ ಹೆಚ್ಚು ಮನೆ ಸೌಲಭ್ಯ ಮತ್ತು ಪ್ರತಿ ಮನೆಗೂ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೊರೊನಾ ಕಾಲಘಟ್ಟದಲ್ಲಿ ೩ ವರ್ಷದಿಂದ ದೇಶದ ೮೦ ಕೋಟಿ ಜನರಿಗೆ ಆಹಾರಧಾನ್ಯಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ಅವಽಯಲ್ಲಿ ಪಿಎಫ್ಐ ಸಂಘಟನೆಗಳನ್ನು ಪ್ರೋತ್ಸಾಹಿಸಿದಿರಿ. ಜನರಿಗೆ ನೀವೇನು ಸೌಲಭ್ಯ ನೀಡಿದಿರಿ ಎಂದು ಪ್ರಶ್ನಿಸಿದ ಅವರು, ಕರ್ನಾಟಕ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಅಽಕಾರಕ್ಕೆ ಬಂದ ಮೇಲೆ ಪಿಎಫ್ಐ ನಿಷೇಧ ಮಾಡುವ ಮೂಲಕ ಅವರ ಬೆನ್ನು ಮೂಳೆಯನ್ನು ಮುರಿಯುವ ಕೆಲಸ ಮಾಡಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಟೀಮ್ ಇಂಡಿಯಾದ ಕ್ಯಾಪ್ಟನ್. ಅವರ ನಾಯಕತ್ವದ ಟೀಮ್ ಇಂಡಿಯಾ ಜಗತಿಕ ಮಟ್ಟದಲ್ಲಿ ಹೆಸರು ಗಳಿಸಿದೆ. ಶಾಂತಿ ಸೌಹಾರ್ದತೆ ಹಾಗೂ ಸದೃಢ ಭಾರತಕ್ಕೆ ಮೋದಿಯವರ ನಾಯಕತ್ವಕ್ಕಾಗಿ ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ರವರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮತ ಯಾಚಿಸಿದ ಅವರು, ಪ್ರಧಾನಿ ಮೋದಿಯವರಿಂದ ೨೦೨೪ರ ಜನವರಿಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಕರ್ನಾಟಕದವರಿಗಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅತಿಥಿ ಗೃಹಕ್ಕೆ ಉತ್ತರ ಪ್ರದೇಶ ಸರ್ಕಾರ ಭೂಮಿ ನೀಡಿದೆ ಎಂದರು.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್, ಬಿಜೆಪಿ ರಾಜಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಿಜೆಪಿಯ ಕರ್ನಾಟಕ ಚುನಾವಣಾ ಉಸ್ತುವಾರಿಗಳಾದ ಪುಷ್ಕರ್ ಕಾಲಾ, ಸತೀಶ್ ಅಗರ್ವಾಲ್, ವಿಕ್ರಂ ಬಿಜೆಪಿಯ ಮೂರು ತಾಲ್ಲೂಕಿನ ಅಧ್ಯಕ್ಷರುಗಳು, ಪದಾಧಿಕಾರಿಗಳು, ಮುಖಂಡರುಗಳು ಉಪಸ್ಥಿತರಿದ್ದರು.
Congress attack on Hindu identity