ಚಿಕ್ಕಮಗಳೂರು: ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಕಡೂರು ತಾಲೂಕಿನ ಆಣೆಗೆರೆಯಲ್ಲಿ ಮೇ.೨೦ ರಂದು ಪಂಚನಹಳ್ಳಿ ಹೋಬಳಿ ಮಟ್ಟದ ಜಾನಪದ ಸಮ್ಮೇಳನ ನಡೆಯಲಿದೆ.
ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಜಾನಪದ ಕಲಾವಿದ ಪಂಚನಹಳ್ಳಿ ಲೋಕೇಶ್ ಆಯ್ಕೆಯಾಗಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಆಣೆಗೆರೆಯಲ್ಲಿ ಇತ್ತೀಚೆಗೆ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ. ಸುರೇಶ್, ಆಧುನಿಕತೆಯ ಅಬ್ಬರದಲ್ಲಿ ಮೂಲೆಗುಂಪಾಗುತ್ತಿರುವ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಅದರ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮ್ಮೇಳನದಲ್ಲಿ ಪಂಚನಹಳ್ಳಿ ಹೋಬಳಿಯ ಜಾನಪದ ಕಲಾವಿದರನ್ನು ಗೌರವಿಸು ವುದರ ಜೊತೆಗೆ ಎಲ್ಲಾ ಕಲಾವಿದರಿಗೂ ಜಾನಪದ ಕಲೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತಿನ ಕಡೂರು ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, ಸಮ್ಮೇಳನಾಧ್ಯಕ್ಷರನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ಎತ್ತಿನಗಾಡಿಯಲ್ಲಿ ಮೆರವಣಿಗೆ ಮುಖಾಂತರ ಸಮ್ಮೇಳನದ ವೇದಿಕೆಗೆ ಕರೆತರಲಾ ಗುವುದು ಎಂದು ಹೇಳಿದರು.
ಪರಿಷತ್ತಿನ ಪಂಚನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಶ್ರೀನಿವಾಸ್, ಚಿಕ್ಕನಲ್ಲೂರು ಜಯಣ್ಣ, ಗ್ರಾಮದ ಮುಖಂಡರಾದ ಕೆ.ಚಂದ್ರಪ್ಪ, ಮಂಜಣ್ಣ, ಎಂ.ನಾಗರಾಜ್, ಎನ್.ರಂಗನಾಥ್, ಹಿರಿಯ ಜಾನಪದ ಕಲಾವಿದ ಪಂಚನಹಳ್ಳಿ ಲೋಕೇಶ್, ಎ.ಎಚ್.ರಂಗನಾಥ್, ಹೆಚ್.ಎಸ್.ಶ್ರೀನಿವಾಸ್ ರೇವಣ್ಣ, ಯಗಟಿ ಶಂಕರ್ ಸಭೆ ಯಲ್ಲಿ ಪಾಲ್ಗೊಂಡಿದ್ದರು.
Hobli level folk conference