ಅಜ್ಜಂಪುರ: ದಾಸರ ಪರಂಪರೆ ನಮ್ಮ ಕನ್ನಡ ಸಾಹಿತ್ಯವನ್ನು ಹದಿನಾರನೇ ಶತಮಾನದಲ್ಲಿ ಶ್ರೀಮಂತಗೊಳಿಸಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಆಣೇಗೆರೆಯಲ್ಲಿ ಮೇ ೧೯ ರಂದು ನಡೆಯಲಿರುವ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸತ್ಯನಾರಾಯಣ ದಾಸ್ ಅವರನ್ನು ಸ್ವಾಗತ ಸಮಿತಿಯ ವತಿಯಿಂದ ಆಹ್ವಾನಿಸಿ ಮಾತನಾಡಿದರು
ಅವರು ಜಿಲ್ಲೆಯ ಐತಿಹಾಸಿಕ ಸಮ್ಮೇಳನ ಇದಾಗಿದ್ದು ಜಿಲ್ಲೆಯಲ್ಲಿ ದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಸಮ್ಮೇಳನ ನಡೆದಿರುವುದಿಲ್ಲದ ಕಾರಣ ಈ ಬಾರಿ ವಿಶೇ?ವಾಗಿ ದಾಸ ಪರಂಪರೆಯನ್ನು ಉಳಿಸುವ ಸಲುವಾಗಿ ಹಾಗೂ ಬೆಳೆಸುವ ನಿಟ್ಟಿನಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ ಮಾತನಾಡಿ ದಾಸ ಪರಂಪರೆ ನಶಿಸಿ ಹೋಗುತ್ತಿದೆ ಅದನ್ನು ಉಳಿಸುವ ಬೆಳೆಸುವ ಅವಶ್ಯಕತೆ ಈ ಸಮ್ಮೇಳನಗಳಿಂದ ಸಾಧ್ಯತೆ ಇದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ರವಿ ದಳವಾಯಿ ಮಾತನಾಡಿ ಸಾಹಿತ್ಯ ಪರಿ?ತ್ತು ವಿನೂತನವಾದಂತ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿ ತಲುಪಿದೆ ಎಂದು ತಿಳಿಸಿ ಮಹಿಳಾ ಸಾಹಿತ್ಯ ಸಮ್ಮೇಳನ ವಚನ ಸಾಹಿತ್ಯ ಸಮ್ಮೇಳನ ಮಹಿಳಾ ಜಾನಪದ ಸಮ್ಮೇಳನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹೀಗೆ ಹತ್ತು ಹಲವಾರು ವಿನೂತನವಾದಂತ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಅಮೃತಾಪರದಲ್ಲಿ ನಡೆದ ಕಥಾಕಮ್ಮಟ ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪರಿಷತ್ತಿನ ಗೌರವ ಸಲಹೆಗಾರ ಶಿವಣ್ಣ ಮಾತನಾಡಿ ಸಮ್ಮೇಳನಕ್ಕೆ ಎಲ್ಲಾ ರೀತಿಯ ಸಹಕಾರದೊಂದಿಗೆ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಸಹಕರಿಸಲಾಗುವುದು ಎಂದು ತಿಳಿಸಿದರು.
enriched Kannada literature in the sixteenth century