ಚಿಕ್ಕಮಗಳೂರು: ವೈದ್ಯಲೋಕಕ್ಕೆ ಸವಾಲಾಗಿದ್ದ ಅಪರೂಪದ ಹೃದಯಾಘಾತಕ್ಕೆ ತುತ್ತಾದ ೫೨ ವರ್ಷದ ವ್ಯಕ್ತಿಗೆ ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ ಎಂದು ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ರೂಪ ಕೆ.ಜಿ ತಿಳಿಸಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಖರಾಯಪಟ್ಟಣದ ೫೨ ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಕೋಮ ಸ್ಟೇಜ್ನಲ್ಲಿದ್ದು ನಗರದ ಆಶ್ರಯ ಆಸ್ಪತ್ರೆಯಲ್ಲಿ ರೋಗಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಈ ನಮ್ಮ ಆಸ್ಪತ್ರೆಗೆ ಕರೆ ತಂದು ತುರ್ತು ನಿಗಾ ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಿ ಕೇವಲ ೫ ದಿನದಲ್ಲಿ ಆ ವ್ಯಕ್ತಿ ಪವಾಡದ ರೀತಿ ಓಡಾಡುವಂತಾಯಿತು ಎಂದು ಮಾಹಿತಿ ನೀಡಿದರು.
ಡಾ.ರವಿ ಕೆ.ಆರ್, ತೀವ್ರ ನಿಗಾ ಘಟಕ ತಜ್ಞರಾದ ಡಾ.ದೀಪಕ್ ಶೆಟ್ಟಿ ಹಾಗೂ ಶುಶ್ರೂಶಕಿಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿಯವರು ತಮ್ಮ ಸತತ ಪ್ರಯತ್ನದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವ ವಿಚಾರವು ನಮಗೆ ಅತ್ಯಂತ ಸಂತಸ ತಂದುಕೊಟ್ಟಿದೆ ಎಂದು ಶ್ಲಾಘಿಸಿದರು. ಹೃದಯ ಸಂಬಂಧಿ ಹಾಗೂ ರಕ್ತನಾಳಗಳ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿರುವುದು ನಮಗೆ ತಿಳಿದಿದೆ ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ೨೦೧೬ ರಲ್ಲಿ ೧೭.೯ ಒiಟಟioಟಿ ಜನರು ಇದೇ ಕಾರಣದಿಂದ ಸಾವನ್ನಪ್ಪಿದ್ದಾರೆ. ಅಂದರೆ ಇದು ವಿಶ್ವದಾದ್ಯಂತ ಸಂಭವಿಸುತ್ತಿರುವ ಸಾವಿರ ಪ್ರಮಾಣದಲ್ಲಿ ಶೇಕಡ ೩೧ ಆಗಿದೆ. ಅದರಲ್ಲೂ ಶೇಕಡ ೮೫ ರಷ್ಟು ಸಾವಿನ ಪ್ರಮಾಣ ಹೃದಯಾಘಾತ ಹಾಗೂ ಪಾರ್ಶ್ವವಾಯುವಿನ ಕಾರಣದಿಂದ ಎಂದು ತಿಳಿದುಬಂದಿದೆ ಎಂದರು.
ಚಿಕ್ಕಮಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಆಂಬ್ಯೂಲೆನ್ಸ್ ಸೇವೆ ಇರುತ್ತದೆ. ಇದರ ಉಪಯೋಗಕ್ಕಾಗಿ ದೂರವಾಣಿ ಸಂಖ್ಯೆ ೭೪೦೬೭೯೮೬೯೮ಗೆ ಕರೆ ಮಾಡಲು ಕೋರಲಾಗಿದೆ. ನರರೋಗ ತಜ್ಞರಾದ ಡಾ. ರೂಪ ಕೆ.ಜಿಯವರು ಪ್ರತೀ ತಿಂಗಳ ೩ನೇ ಶನಿವಾರ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ಓಪಿಡಿ ಸೇವೆಗಳಲ್ಲಿ ಲಭ್ಯರಿರುತ್ತಾರೆ. ಇವರ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಸ್ಪತ್ರೆಯ ಆಡಳಿತ ಮಂಡಳಿ ಮನವಿ ಮಾತುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶೈಲೇಶ್, ದಿನೇಶ್, ಗಿರೀಶ್, ರೋಗಿಯ ಪತ್ನಿ ಸೌಮ್ಯ ಉಪಸ್ಥಿತರಿದ್ದರು.
Successful treatment in a rare case that was a challenge to the medical world