ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಿರಗನಹಳ್ಳಿಯಲ್ಲಿರುವ ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರ ಮನೆಯಲ್ಲಿ ದರೋಡೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
ನಿತೀನ್ ಎಸ್. ಮೂರ್ತಿ, ವೆಂಕಟೇಶ್, ಎಂ.ಎಸ್. ಕಾರ್ತಿಕ್, ಎಂ. ಮಹೇಶ್ ಬಂಧಿತ ಆರೋಪಿಗಳು. ಇವರೆಲ್ಲರೂ ನೆರೆಯ ಭದ್ರಾವತಿ ಪಟ್ಟಣದ ನಿವಾಸಿಗರು. ಇದೇ ಮೇ ೬ ರಂದು ಸುಮಾರು ೧೫ ಜನ ತಂಡ ಮಾಜಿ ಶಾಸಕ ಎಸ್.ಎಂ. ನಾಗರಾಜ್ ಅವರ ಮೇಲೆ ಮಧ್ಯ ರಾತ್ರಿ ಹಲ್ಲೆ ನಡೆಸಿ, ದರೋಡೆ ನಡೆಸಿ ಮನೆಯಲ್ಲಿದ್ದ ೯೬೩ ಗ್ರಾಂ ಚಿನ್ನ ಹಾಗೂ ೬೧ ಸಾವಿರ ರುಪಾಯಿ ನಗದು ದೋಚಿ ಪರಾರಿಯಾಗಿದ್ದರು.
ಈ ಸಂದರ್ಭದಲ್ಲಿ ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿ, ಇನ್ನುಳಿದವರ ಪತ್ತೆಯಾಗಿ ಕಾರ್ಯಾಚರಣೆ ಮುಂದುವರೆಸಿದ್ದರು, ಇದೀಗ ಮತ್ತೆ ನಾಲ್ವರನ್ನು ಬಂಽಸಿ ಅವರ ಬಳಿ ಇದ್ದ ೨೭ ಗ್ರಾಂ ತೂಕದ ೨ ಚಿನ್ನದ ಬಳೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಹೇಂದ್ರ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಈ ಪ್ರಕರಣದಲ್ಲಿ ಈವರೆಗೆ ೧೧ ಜನರನ್ನು ಬಂಧಿಸಲಾಗಿದ್ದು, ೨ ಕಾರು, ೨ ಬೈಕ್, ೮ ಮೊಬೈಲ್ ಹಾಗೂ ೩೩೦ ಗ್ರಾಂ ಚಿನ್ನಾಭರಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರು ತಿಳಿಸಿದ್ದಾರೆ.
Robbery at former MLA’s house-four more arrested