ಕಳಸ: ಇಲ್ಲಿನ ಗ್ರಾಮಸ್ಥರ ಆರಾಧ್ಯ ದೈವವಾದ ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವರುಗಳ ಜೀರ್ಣ ಅಷ್ಟಬಂಧ ಬ್ರಹ್ಮಕಲಶೋತ್ಸವ ಇದೇ ಬುಧವಾರದಿಂದ ಶುಕ್ರವಾರದವರೆಗೆ ನಡೆಯಲಿದೆ.
ಜೂ.೭ರಂದು ಗಿರಿಜಾಂಬಾದೇವರ ಸನ್ನಿಧಿಯಲ್ಲಿ ಜೀರ್ಣ ಅಷ್ಟಬಂಧ, ಬ್ರಹ್ಮ ಕುಂಭಾಭಿಷೇಕ ನೆರವೇರಲಿದೆ. ೮ರಂದು ಆನೆವಿಘ್ನೇಶ್ವರ ಸ್ವಾಮಿ ಮತ್ತು ಸರ್ವಾಂಗಸುಂದರಿ ಅಮ್ಮನ ಸನ್ನಿಧಿಯಲ್ಲಿ ಜೀರ್ಣ ಅಷ್ಟಬಂಧ, ಬ್ರಹ್ಮಕುಂಭಾಭಿಷೇಕ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
೯ರ ಶುಕ್ರವಾರ ಬೆಳಿಗ್ಗೆ ೧೧.೫೫ಕ್ಕೆ ಶೃಂಗೇರಿ ಶಾರದಾ ಪೀಠದ ವಿಧುಶೇಖರ ಸ್ವಾಮೀಜಿ ಕಳಸೇಶ್ವರ ಸ್ವಾಮಿ ಮತ್ತು ಪರಿವಾರ ದೇವರಿಗೆ ಜೀರ್ಣ ಅಷ್ಟಬಂಧ ತ್ತು ಬ್ರಹ್ಮಕುಂಭಾಭಿಷೇಕ ನೆರವೇರಿಸಲಿದ್ದಾರೆ.
ಆನಂತರ ೧೨.೩೦ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಧುಶೇಖರ ಸ್ವಾಮೀಜಿ ಉಪನ್ಯಾಸ ನೀಡಲಿದ್ದಾರೆ.ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕಿ ನಯನಾ ಮೋಟಮ್ಮ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸದಸ್ಯ ಎಸ್.ಎಲ್. ಭೋಜೇಗೌಡ, ಜಿ.ಭೀಮೇಶ್ವರ ಜೋಷಿ ಭಾಗವಹಿಸಲಿದ್ದಾರೆ.
ಅಂದು ಸಂಜೆ ೬ ಗಂಟೆಗೆ ಓಂ ನಮಃ ಶಿವಾಯ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ.೭ರಂದು ಸಂಜೆ ೬ರವರೆಗೆ ದೇವಸ್ಥಾನಕ್ಕೆ ಹಸಿರು ಕಾಣಿಕೆ ಅರ್ಪಿಸಲು ಅವಕಾಶ ಇದೆ ಎಂದು ದೇವಸ್ಥಾನದ ವ್ಯಸವ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ ತಿಳಿಸಿದ್ದಾರೆ
Ashtabandha Brahmakalashotsava of Kalaseswara Swami