ಬೀರೂರು: ಸಾರ್ವಜನಿಕರ ಅರ್ಜಿ ವಿಲೇವಾರಿ, ಖಾತಾ ಇಡುವುದು, ದಾಖಲೆ ನೀಡುವುದು ಮೊದಲಾದ ಕೆಲಸಗಳಲ್ಲಿ ವಿಳಂಬವಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾ ಗುವುದು’ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಎಚ್ಚರಿಸಿದರು.
ಬೀರೂರು ಪುರಸಭೆಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿ ಅವರು ಮಾತನಾಡಿ ಪುರಸಭೆಯಲ್ಲಿ ಪೌತಿ, ಕ್ರಯಪತ್ರ, ವಿಭಾಗಪತ್ರಗಳ ಆಧಾರದಲ್ಲಿ ಖಾತೆ ಮಾಡಿಕೊಡುವಲ್ಲಿ ತಡ ಮಾಡಲಾ ಗುತ್ತಿದೆ, ಪುರಸಭೆ ಕೆಲಸಗಳಲ್ಲಿ ಕೆಲವರ ಹಸ್ತಕ್ಷೇಪ ನಡೆದಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ದೂರುಗಳಿಗೆ ಆಸ್ಪದ ನೀಡುವುದು ಸರಿಯಲ್ಲ.
ನಿಗದಿತ ಸಮಯದಲ್ಲಿ ಜನರ ಕೆಲಸ ಮಾಡಿಕೊಡುವುದು ಅಧಿಕಾರಿಗಳ ಕರ್ತವ್ಯ. ಕ್ರಮಬದ್ಧ ದಾಖಲೆ ಹೊಂದಿದ್ದರೂ ಕೆಲಸ ವಿಳಂಬ ಮಾಡಿದರೆ ಶಿಸ್ತುಕ್ರಮ ಎದುರಿಸಬೇ ಕಾಗುತ್ತದೆ ಎಂದು ಹೇಳಿದ ಅವರು ದಾಖಲೆಗಳು ಸರಿಯಾಗಿದ್ದರೆ ನಿಮಗೆ ಯಾಕೆ ಆತಂಕ ಎಂದು ಪ್ರಶ್ನಿಸಿದರು.
‘ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಅಪೂರ್ಣವಾಗಿದೆ. ನಗರೋತ್ಥಾನ ಯೋಜನೆಯ ರಸ್ತೆ ನಿರ್ಮಾಣ ಕಾಮಗಾರಿ ಕುಂಠಿತಗೊಂಡಿದೆ. ಇದರಿಂದಾಗಿ ನಾಗರಿಕರು ಸಮಸ್ಯೆ ಎದುರಿಸುವಂತಾಗಿದೆ. ಕಸ ವಿಲೇವಾರಿ ಘಟಕ ಕಾರ್ಯಾರಂಭ ಮಾಡುವಲ್ಲಿ ಪುರಸಭೆ ನಿರ್ಲಕ್ಷ್ಯ ತೋರಿದೆ’ ಎಂದು ನಾಗರಿಕರು ಆಪಾದಿಸಿದರು.
ಅಜ್ಜಂಪುರ ರಸ್ತೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಕೆಶಿಪ್ನವರಿಂದ ಪರಿಹಾರ ಪಡೆದು ಜಾಗ ಬಿಟ್ಟುಕೊಡದ ಮತ್ತು ಪಾದಚಾರಿ ಮಾರ್ಗದಲ್ಲಿ ಅಕ್ರಮವಾಗಿ ಕಟ್ಟಡ, ಅಂಗಡಿ ನಿರ್ಮಿಸಿಕೊಂಡಿರುವವರಿಂದ ಜಾಗ ತೆರವು ಮಾಡಲು ಪುರಸಭೆ ಆಡಳಿತಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಕ್ರಮ ವಹಿಸುವಂತೆ ಮುಖ್ಯಾಧಿಕಾರಿ ಶಾಂತಲಾ ಅವರಿಗೆ ಸೂಚಿಸಿದರು.
ನಗರೋತ್ಥಾನ ಯೋಜನೆಯ ಕಾಮಗಾರಿಗಳು ಸರ್ಕಾರದ ನಿರ್ದೇಶನದಂತೆ ಪರಿಶೀಲನೆ ಯಲ್ಲಿದ್ದು ಸದ್ಯದಲ್ಲಿಯೇ ಕೆಲಸ ಮುಗಿಸಿ ಕೊಡಲಾಗುವುದು ಎಂದು ಅಧಿಕಾರಿ ಗಳು ಸಮಜಾಯಿಷಿ ನೀಡಿದರು.
ಕಸ ವಿಲೇವಾರಿ ಘಟಕಕ್ಕೆ ಬೀರೂರು ಹೋಬಳಿ ಹಿರಿಯಂಗಳ ಗ್ರಾಮದಲ್ಲಿ ಪುರಸಭೆಗೆ ಭೂಮಿ ಮಂಜೂರು ಮಾಡಿ ಪುರಸಭೆ ವತಿಯಿಂದ ಅಲ್ಲಿ ಕಾಂಪೌಂಡ್ ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದೆ. ರಾಜ್ಯ ತಾಂತ್ರಿಕ ಸಮಿತಿಯ ನಿರ್ದೇಶ ನದಂತೆ ಮೂರು ಬಾರಿ ಮಾರ್ಪಾಟು ಮಾಡಿ ವರದಿ ಸಲ್ಲಿಸಲಾಗಿದೆ. ಮತ್ತೆ ಸ್ಪಷ್ಟೀಕರಣ ಕೋರಿರುವ ಹಿನ್ನೆಲೆಯಲ್ಲಿ ನಾಲ್ಕನೇ ಬಾರಿ ವರದಿ ನೀಡಲಾಗಿದೆ. ಈ ಬಾರಿ ತಾಂತ್ರಿಕ ಸಮಿತಿಯಿಂದ ಡಿಪಿಆರ್ಗೆ ಅನುಮೋದನೆ ಸಿಗುವ ಭರವಸೆ ಇದೆ ಎಂದು ಪರಿಸರ ಎಂಜಿನಿಯರ್ ಮಹಮದ್ ನೂರುದ್ದೀನ್ ಮಾಹಿತಿ ನೀಡಿದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ಕು
Visit to Ajjampur Road Collector visit