ಶೃಂಗೇರಿ; ತಾಲ್ಲೂಕಿನ ಒಂಬತ್ತು ಗ್ರಾ.ಪಂಚಾಯ್ತಿ ಮೀಸಲಾತಿ ಪ್ರಕ್ರಿಯೆ ಸಭೆ ಜೆಸಿಬಿಎಂ ಕಾಲೇಜಿನಲ್ಲಿ ಸೋಮವಾರ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಮಾತನಾಡಿ”ಗ್ರಾಮಪಂಚಾಯಿತಿಯ ಮೀಸಲಾತಿಯನ್ನು ಜನಸಂಖ್ಯೆ ಹಾಗೂ ಗ್ರಾ.ಪಂಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ನಿಗದಿ ಪಡಿಸಲಾಗುತ್ತದೆ.ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮೂವತ್ತು ತಿಂಗಳ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಮೀಸಲಾತಿಯನ್ನು ನಿಗದಿ ಪಡೆಸಲಾಗಿದೆ ಎಂದ ಅವರು ಭಾರತ ಸರಕಾರದ ಎನ್.ಐ.ಸಿ ತಂತ್ರಾಂಶವನ್ನು ಬಳಸಿ ಇಂಡೀಕರಣಗೊಳಿಸಿ ಮೀಸಲಾತಿ ನಿಗದಿಯಾಗಿದೆ ಎಂದರು.
ತಹಶೀಲ್ದಾರ್ ಗೌರಮ್ಮ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳಾದ ಕಾಂತರಾಜ್,ಕೃಷ್ಣಕುಮಾರ್,ತಾಲ್ಲೂಕಿ ಕಚೇರಿಯ ಅಧಿಕಾರಿಗಳಾದ ಪ್ರವೀಣ್ ಕುಮಾರ್,ಸಾಯಿಪ್ರಭಾ,ತಾಲ್ಲೂಕಿನ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ತಾಲ್ಲೂಕಿನಲ್ಲಿ ಒಟ್ಟು ಒಂಭತ್ತು ಗ್ರಾ.ಪಂಗಳಿದ್ದು ಮೀಸಲಾತಿ ನಿಗದಿ ವಿವರ ಕೆಳಗಿನಂತಿದೆ.
ಗ್ರಾ.ಪಂ—-ಅಧ್ಯಕ್ಷ ಹುದ್ದೆಯ ಮೀಸಲಾತಿ—-ಉಪಾಧ್ಯಕ್ಷ ಹುದ್ದೆಯ ಮೀಸಲಾತಿ.
೧]ಬೇಗಾರು- ಪರಿಶಿಷ್ಟ ಪಂಗಡ ಮಹಿಳೆ- ಸಾಮಾನ್ಯ
೨]ಧರೇಕೊಪ್ಪ -ಬಿ.ಸಿ.ಎಂ.ಎ ಮಹಿಳೆ – ಸಾಮಾನ್ಯ
೩]ಅಡ್ಡಗದ್ದೆ -ಸಾಮಾನ್ಯ – ಬಿ.ಸಿ.ಎಂ.ಎ ಮಹಿಳೆ
೪]ಮರ್ಕಲ್- ಸಾಮಾನ್ಯ – ಸಾಮಾನ್ಯ ಮಹಿಳೆ.
೫]ಮೆಣಸೆ- ಸಾಮಾನ್ಯ ಮಹಿಳೆ – ಬಿ.ಸಿ.ಎಂ.ಎ
೬]ವಿದ್ಯಾರಣ್ಯಪುರ- ಬಿ.ಸಿ.ಎಂ.ಎ – ಸಾಮಾನ್ಯ ಮಹಿಳೆ.
೭] ನೆಮ್ಮಾರ್-ಸಾಮಾನ್ಯ ಮಹಿಳೆ – ಪರಿಶಿಷ್ಟ ಜಾತಿ ಮಹಿಳೆ.
೮]ಕೆರೆ- ಪರಿಶಿಷ್ಟ ಜಾತಿ ಮಹಿಳೆ – ಸಾಮಾನ್ಯ
೯]ಕುತಗೋಡು-ಸಾಮಾನ್ಯ – ಪರಿಶಿಷ್ಟ ಪಂಗಡ ಮಹಿಳೆ.
Panchayat reservation of Sringeri taluk published