ಅಜ್ಜಂಪುರ: ಕೃತಿ ಪರಿಸರ ಹದಗೆಟ್ಟಿರುವುದು ಸರ್ವ ವೇದ್ಯವಾಗಿದ್ದರು ಎಲ್ಲರೂ ಅದಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಕಾಲ ಹರಣ ಮಾಡುತ್ತಿದ್ದೇವೆ ಹೊರತು ಪರಿಸರವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ತೊಡಗಿಲ್ಲ, ನಮ್ಮೆಲ್ಲ ಸ್ವಾರ್ಥ,ಅಜ್ಞಾನ, ಅಲಕ್ಷಗಳ ಪರಿಣಾಮವಾಗಿ ಕಾಣಿಸಿಕೊಳ್ಳುತ್ತಿರುವಂತಹ ಪರಿಸರ ಸಂಬಂಧಿ, ಸಮಸ್ಯೆಗಳನ್ನು ನಾವೇ ಸೃಷ್ಟಿ ಮಾಡಿಕೊಂಡಿರುವಂತೆ ಪ್ರಕೃತಿ ಸಂರಕ್ಷಣೆಯಲ್ಲಿ ನಾವೆಲ್ಲ ಸೇರಿ ಬಾಗಿ ಯಾಗಬೇಕು. ಎಂದು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿಎಂ ರಾಜಶೇಖರ್ ತಿಳಿಸಿದರು
ಅಜ್ಜಂಪುರ ತಾಲೂಕು ಪತ್ರಕರ್ತ ಸಂಘ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಪಟ್ಟಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು ಇದನ್ನು ಉದ್ದೇಶಿಸಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಜಿಎಂ ರಾಜಶೇಖರ್ ಮಾತನಾಡುತ್ತಾ ಪತ್ರಕರ್ತ ಸಂಘದ ಚಟುವಟಿಕೆಯಲ್ಲಿ ಜಿಲ್ಲಾ ಸಂಘವು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿವರ್ಷ 1000 ಗಿಡ ನೆಡುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದು, ಈ ಬಾರಿ ನೂತನ ತಾಲೂಕು ಕೇಂದ್ರವಾಗಿರುವ ಅಜ್ಜಂಪುರದಲ್ಲಿ ಸಸಿ ನೆಡುವ ಮೂಲಕ ಪಟ್ಟಣವನ್ನು ಹಸಿರು ಕರಣ ಮಾಡಬೇಕೆಂಬ ಉದ್ದೇಶ ಹೊಂದಿದೆ ಎಂದು ಸಸಿ ನೆಡುವ ಮೂಲಕ ಉದ್ಘಾಟಿಸಿ ತಿಳಿಸಿದರು..
ನಾವು ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡೋಣ ನಾವು ನಮ್ಮ ಸುತ್ತಲಿನ ಈ ಬೌತ ಮತ್ತು ಜೀವ ಸಮುದಾಯಗಳ ನೊಳಗೊಂಡ ಪರಿಣಾಮದ ಚಿಂತನೆಯನ್ನು ಮಾಡಬೇಕಾಗಿದೆ ಈಗಾಗಲೇ ಹವಮಾನ ವೈಪರಿತ್ಯದಿಂದ ಬರ ಕೆಲವು ಕಡೆ ಅತಿವೃಷ್ಟಿ ನಾವು ನೋಡುತ್ತಿದ್ದೇವೆ. ಇದರಿಂದ ರೈತಾಪಿ ವರ್ಗ ಮಳೆ ನಂಬಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುವಂತಿದೆ ಇದಕ್ಕೆಲ್ಲ ನಮ್ಮ ಪರಿಸರದ ಪರಿಣಾಮವಾಗಿ ಇಂಥ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಮುಂದಾದರು ನಾವುಗಳು ಪರಿಸರ ಸಂರಕ್ಷಣೆಯಲ್ಲಿ ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಜ್ಜಂಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಜಿಲ್ಲಾ ಪತ್ರಕರ್ತ ಸಂಘದ ಪ್ರಧಾನ ಕಾರ್ಯದರ್ಶಿ ಬಿ ಆರ್ ಕುಮಾರ್. ಜಿಲ್ಲಾ ಸಂಘದ ಪ್ರತಿನಿಧಿ ಎಜೆ ಪ್ರಕಾಶ್ ಮೂರ್ತಿ ತರೀಕೆರೆ ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಕೃಷ್ಣ ನಾಯಕ್, ಹಿರಿಯ ಪತ್ರಕರ್ತರಾದ ಮಂಜುನಾಥ್. ವೆಂಕಟೇಶ್.ಉಮೇಶ್ ರಮೇಶ್. ಭಾಗವಹಿಸಿದ್ದರು.
We should all be involved in nature conservation