ಶೃಂಗೇರಿ: ಶ್ರೀ ಶಾರದ ಪೀಠದ ನೂತನ ಸಿಇಒ ಆಗಿ ಪಿ.ಎ.ಮುರಳಿರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರ ನಿರ್ದೇಶನದಂತೆ ೧೯೮೯ರಲ್ಲಿ ಡಾ. ವಿ. ಆರ್. ಗೌರಿಶಂಕರ್ ಅವರನ್ನು ಶೃಂಗೇರಿ ಮಠದ ಆಡಳಿತಾಧಿಕಾರಿ ಮತ್ತು ಸಿಇಒ ಆಗಿ ನೇಮಕ ಮಾಡಲಾಗಿತ್ತು.
ಇದಾದ ಬಳಿಕ ಸುಮಾರು ೩೫ ವರ್ಷಗಳ ಕಾಲ ಡಾ. ವಿ ಆರ್ ಗೌರಿಶಂಕರ್ ಮಠದ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಶ್ರೀ ಶಾರದ ಪೀಠದ ನೂತನ ಸಿಇಒ ಮತ್ತು ಆಡಳಿತಾಧಿಕಾರಿ ಆಗಿ ಪಿ. ಎ. ಮುರಳಿ ಅವರನ್ನು ನೇಮಿಸಲಾಗಿದೆ. ವಿ.ಆರ್ ಗೌರಿಶಂಕರ್ ಅವರು ನೂತನ ಸಿಇಒ ಅವರಿಗೆ ಮುಖ್ಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ವಿಜಯ್ ಮಲ್ಯ ಮಾಲೀಕತ್ವದ UB Groups ಕಂಪನಿಯ ಸಿಇಓ ಆಗಿದ್ದರು. ಬಳಿಕ ಕಂಪೆನಿಗೆ ರಾಜೀನಾಮೆ ನೀಡಿದ್ದರು.
New CEO of Sringeri Sarada Peetha Murali appointed