ಚಿಕ್ಕಮಗಳೂರು: ಅಕ್ರಮ ಸಂಪತ್ತು ಹೊಂದಿರುವ ಆರೋಪದ ಮೇಲೆ ಬುಧವಾರ ಲೋಕಾಯುಕ್ತ ದಾಳಿಗೆ ಒಳಗಾಗಿರುವ ವಾಣಿಜ್ಯ ತೆರಿಗೆ ಅಧಿಕಾರಿ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.
ತರೀಕೆರೆ ವಾಣಿಜ್ಯ ತೆರಿಗೆ ಅಧಿಕಾರಿ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಕಡೂರಿನಲ್ಲಿ ವಾಸವಾಗಿರುವ ವಾಣಿಜ್ಯ ತೆರಿಗೆ ಅಧಿಕಾರಿ ಕೆ.ಆರ್. ನೇತ್ರಾವತಿ ಕಳೆದ ೧೩ ವರ್ಷಗಳ ಅವಧಿಯಲ್ಲಿ ಆದಾಯಕ್ಕಿಂತ ಅಧಿಕ ಅಕ್ರಮ ಆಸ್ತಿಯನ್ನು ಹೊಂದಿರುವ ಆರೋಪದ ಮೇಲೆ ಇಂದು ಬೆಳಿಗ್ಗೆ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದೆ.
ಆ ಸಂದರ್ಭದಲ್ಲಿ ೯೦೦ ಗ್ರಾಂ ಚಿನ್ನಾಭರಣ, ಒಂದು ಕೆ ಜಿ ಬೆಳ್ಳಿ ಹಾಗೂ ೫ ಲಕ್ಷ ರೂ ನಗದು ಇತರೆ ದಾಖಲೆಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಲೋಕಾಯುಕ್ತ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಇನ್ಸ್ಪೆಕ್ಟರ್ ವೇದಾವತಿ, ಅನಿಲ್ ನಾಯಕ್ ,ಲೋಕೇಶ್, ಸವಿನಯ್, ಸಲ್ಮಾ ಪಾಲ್ಗೊಂಡಿದ್ದರು.
Lokayukta attack on Tarikere commercial tax officer’s house