ಚಿಕ್ಕಮಗಳೂರು: ಉಳುವವನೇ ಭೂ ಒಡೆಯ ಯೋಜನೆಯಡಿ ನನ್ನ ಹೆಸರಿಗೆ ಪಡೆದುಕೊಂಡಿರುವ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಯತ್ನಿಸಲಾಗಿದೆ. ಈ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದು, ಅವರ ಹಿಂಬಾಲಕರು ಕಿರುಕುಳ ನೀಡಲು ಮುಂದಾಗಿದ್ದಾರೆಂದು ಮಹಿಳೆ ಪಾರ್ವತಮ್ಮ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ಲಿಂಗದಹಳ್ಳಿ ಗ್ರಾಮದಲ್ಲಿ ೫ ಎಕರೆ ಜಮೀನನ್ನು ಉಳುವವನೇ ಭೂ ಒಡೆಯ ಯೋಜನೆಯಡಿ ೧೯೮೧ ರ ಆಗಸ್ಟ್ ೧ ರಂದು ತರೀಕೆರೆಯ ಭೂ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿ ನಾನು ಗೇಣಿಮಾಡುತ್ತಿದ್ದ ಜಮೀನನ್ನು ಖಾಯಂಗೊಳಿಸಲು ಮನವಿ ಮಾಡಿದ್ದು, ಅದರಂತೆ ಭೂ ನ್ಯಾಯ ಮಂಡಳಿ ಅಧ್ಯಕ್ಷರು ಪ್ರಕರಣವನ್ನು ನಡೆಸಿ ಅಂತಿಮವಾಗಿ ೧೯೮೧ರ ಸೆಪ್ಟೆಂಬರ್ ೧೨ರಂದು ಜಮೀನನ್ನು ನನ್ನ ಹೆಸರಿಗೆ ಮಾಡಿಕೊಟ್ಟಿದ್ದಾರೆಂದು ಹೇಳಿದರು.
ಜಮೀನು ನನ್ನ ಹೆಸರಿಗೆ ಬಂದ ಮೇಲೆ ೨೦೦೦-೨೦೦೧ನೇ ಸಾಲಿನವರೆಗೂ ಕೈ ಬರಹದ ಪಹಣಿ ನನ್ನ ಹೆಸರಿಗೆ ಬಂದಿರುತ್ತದೆ. ಖಾತೆ ಸಂಖ್ಯೆ ೨೮೧ ಮತ್ತು ಎಂ.ಆರ್. ೨೭/೧೯೮೨-೮೩ ಆಗಿದೆ. ಕೆಲವು ದಿನಗಳನಂತರ ಪಹಣಿಯನ್ನು ಗಣಕೀಕೃತಗೊಳಿಸಿದ ನಂತರ ನನ್ನ ಸಹೋದರ ನನಗೆ ತಿಳಿಯದಂತೆಮೂಲ ಮಾಲೀಕರಿಂದ ಜಮೀನನ್ನು ಕೊಂಡಿರುವಂತೆ ಹಾಗೂ ನನಗೆ ತಿಳಿಯದೆ ಕ್ರಯ ಮಾಡಿಸಿಕೊಂಡು ಮೋಸಕಮಾಡಿರುತ್ತಾರೆಂದು ದೂರಿದರು.
ಗಣಕೀಕೃತ ಪಹಣಿ ಅವರ ಹೆಸರಿಗೆ ಬರುವಂತೆ ಮಾಡಿರುತ್ತಾರೆ. ನಮ್ಮ ಮನೆಯವರು ಮನೆಬಿಟ್ಟುಹೋದ ಮೇಲೆ ಮಕ್ಕಳು ಸಣ್ಣವರಾಗಿದ್ದರಿಂದ ನನಗೆ ಜಮೀನಿನಲ್ಲಿ ಮೋಸಮಾಡಿರುತ್ತಾರೆ.ಈ ಜಮೀನು ಇಲ್ಲಿಯವರೆಗೂ ನನ್ನ ಸ್ವಾಧೀನದಲ್ಲಿಯೇ ಇದೆ. ಕಣ, ಬಣವೆ, ಮನೆ ಎಲ್ಲಾ ಇದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಉಳುವೆಮಾಡಿಕೊಂಡು ಬೆಳೆ ಬೆಳೆಯುತ್ತಿದ್ದೇನೆಂದು ತಿಳಿಸಿದರು.
ಈ ಜಮೀನನ್ನು ಸಹೋದರ ಬೇರೆಯವರಿಗೆ ಮಾರಾಟ ಮಾಡಿರುತ್ತಾನೆ. ಅವರು ಯಾರೆಂದು ತಿಳಿದಿರುವುದಿಲ್ಲ ಅವರು ಸ್ಥಳಕ್ಕೆ ಬಾರದೆ ಹಿಂಬಾಲಕರನ್ನು ಕಳುಹಿಸಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಜಮೀನಿನಲ್ಲಿರುವ ೮ ಗಂಧದ ಮರ, ೮ ಸಪೋಟಮರ, ೧೨ ಸಿಲ್ವರ್ಮರ, ೪ ಸೇಬೆಮರಗಳಮನ್ನು ಕಡಿದುಹಾಕಿದ್ದಾರೆಂದು ಆರೋಪಿಸಿದರು.
ಮೂರು ಮಂದಿ ಹಿಂಬಾಲಕರು ಜಮೀನಿಗೆ ಬಂದು ಜಗಳ ತೆಗೆಯುತ್ತಿದ್ದಾರೆ. ನಾನು ಮತ್ತು ನನ್ನ ಮಗ ಇಬ್ಬರೆ ಇದ್ದು, ನಮಗೆ ತೊಂದರೆಕೊಡುತ್ತಿದ್ದಾರೆ. ದೌರ್ಜನ್ಯ ಕಾಯ್ದೆಯಡಿ ಕೇಸುದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ನಮಗೆ ಸೂಕ್ತ ರಕ್ಷಣೆನೀಡಿ, ನ್ಯಾಯದೊರಕಿಸಿಕೊಡಬೇಕೆಂದು ಕೋರಿದರು. ಪ್ರತಾಪ್, ಅರುಣ್ಕುಮಾರ್ ಇದ್ದರು.
An attempt was made to seize the land in Lingadahalli village by creating a fake document