ಶೃಂಗೇರಿ; ಶೃಂಗೇರಿ ಶಾರದಾಪೀಠದಲ್ಲಿ ಭಾನುವಾರ ಶ್ರೀ ಶಂಕರಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಬೆಳಿಗ್ಗೆ ೮ಗಂಟೆಯಿಂದ ೧೨.೩೦ರ ತನಕ ಶ್ರೀ ಶಂಕರಭಗವತ್ಪಾದಮೂರ್ತಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ,ಸಹಸ್ರನಾಮಾರ್ಚನೆ, ಚತುರ್ವೇದ-ಪ್ರಸ್ಥಾನತ್ರಯಭಾಷ್ಯ-ವಿದ್ಯಾರಣ್ಯವೇದಭಾಷ್ಯ-ಶ್ರೀಶಂಕರದಿಗ್ವಿಜಯ ಇತ್ಯಾದಿ ಪಾರಾಯಣಗಳನ್ನು ಶ್ರೀಮಠದ ಋತ್ವಜರು ಪಠನ ಮಾಡಿದರು.
ಶ್ರೀ ಶಂಕರಜಯಂತಿ ಪ್ಯುಕ್ತ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಶ್ರೀಶಂಕರಾಚಾರ್ಯರ ಮೂರ್ತಿಗೆ ಪಂಚಾಮೃತ ಅಭಿಷೇಕ ,ವಿವಿಧ ಪುಪ್ಪಗಳನ್ನು ಸಮರ್ಪಿಸಿ ಸಾಲಂಕೃತಗೊಂಡ ಮೂರ್ತಿಗೆ ಯತಿವರ್ಯರು ವಿಶೇಷಪೂಜೆ ಸಲ್ಲಿಸಿದರು.
ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಅವರು ವಿಶೇಷಪೂಜೆಯಲ್ಲಿ ಭಾಗಿಯಾದರು.ಸಾಯಂಕಾಲ ವೇದಸ್ವಸ್ತಿವಾಚನ ಮತ್ತು ಶ್ರೀಶಂಕರದಿಗ್ವಿಜಯ ಪಾರಾಯಣ,ಭಗವತ್ಪಾದರ ಮೂರ್ತಿಗೆ ಮಹಾಮಂಗಳಾರತಿ,ಪ್ರಸಾದ ವಿನಿಯೋಗ ಮುಂತಾದ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ತಾಲ್ಲೂಕಿನ ಮನೆ೦ಮನೆಗಳಲ್ಲಿ,ಕಿಕ್ರೆ ಶ್ರೀ ಗುರ್ಗಾಪರಮೇಶ್ವರಿ ದೇವಾಲಯತಾಲ್ಲೂಕು ಬ್ರಾಹ್ಮಣ ಮಹಾಸಭಾ ಹಾಗೂ ವಿಪ್ರವೇದಿಕೆಯಿಂದ ಉಳುವೆಬೈಲುಶ್ರೀ ಪ್ರಸನ್ನ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರ ಇರಿಸಿ,ವಿವಿಧ ಪುಪ್ಪಗಳಿಂದ ಅಲಂಕರಿಸಿ, ಹಣ್ಣುಗಳನ್ನು ಸಮರ್ಪಿಸಿ ಶ್ರೀ ಭಗವತ್ಪಾದರು ರಚಿಸಿದ ಸ್ತೋತ್ರಗಳನ್ನು ಪಠಿಸಿ ಸದ್ಭಕ್ತರು ಪೂಜೆ ಸಲ್ಲಿಸಿದರು. ಸೋಮವಾರ ಬೆಳಿಗ್ಗೆ ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ನೆರವೇರಲಿದೆ.
Sri Shankarajayanti at Sringeri Sharadapith