ಆಲ್ದೂರು: ಮೂಗ್ತಿಹಳ್ಳಿ ಸಮೀಪದ ದಂಬದಹಳ್ಳಿ ಬಂಟರ ಭವನದ ಮುಂಭಾಗ ಕ್ಯಾಂಟರ್ ಮತ್ತು ಬೈಕ್ಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕು ಬಂದೂರು ಗ್ರಾಮದ ಶಿವರಾಜ್(26) ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಿಂದ ಮೂಡಿಗೆರೆ ಕಡೆಗೆ ಸಾಗುತ್ತಿದ್ದ ಕ್ಯಾಂಟರ್, ಎದುರಿನಿಂದ ಬರುತ್ತಿದ್ದ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ.
ಬೈಕ್ ಹಿಂಬದಿ ಸವಾರರಾಗಿದ್ದ ಲಾವಣ್ಯ ಬಿ.ಬಿ.(20) ಗಾಯಗೊಂಡಿದ್ದಾರೆ. ಲಾವಣ್ಯ ಚಿಕ್ಕಮಗಳೂರಿನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದರು.
ಮತ್ತೊಂದು ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Canter – Bikes head-on collision – Rider killed