ಚಿಕ್ಕಮಗಳೂರು: ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅತಿಮ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ೮೨೧೨೨ ಪುರುಷರು, ೮೬೭೫೯ ಮಹಿಳೆಯರು ಸೇರಿ ಒಟ್ಟು ೧೬೮೮೮೨ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೬೮೬೫೩ ಮತದಾರರಿದ್ದರು. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ೮೩೦೦೪ ಪುರುಷರು, ೮೭೯೪೧ ಮಹಿಳೆಯರು ಸೇರಿ ೧೭೦೯೪೭ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೭೧ ೨೨೮ ಮತದಾರರಿದ್ದರು.
ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೧೩೧೫೯ ಪುರುಷರು, ೧೧೭೬೭೩ ಮಹಿಳೆಯರು ಸೇರಿ ೨೩೦೮೫೧ ಮತದಾರರಿದ್ದಾರೆ. ಕಳೆದ ವರ್ಷ ಒಟ್ಟು ೨೩೧೨೬೪ ಮತದಾರರಿದ್ದರು. ತರೀಕೆರೆ ಕ್ಷೇತ್ರದಲ್ಲಿ ೯೫೪೬೧ ಪುರುಷರು, ೯೮೭೧೬ ಮಹಿಳೆಯರು ಸೇರಿ ಒಟ್ಟು ೧೯೪೧೭೯ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೯೪೦೫೫ ಮತದಾರರಿದ್ದರು. ಕಡೂರು ಕ್ಷೇತ್ರದಲ್ಲಿ ೧೦೩೬೫೬ ಪುರುಷರು, ೧೦೪೭೭೬ ಮಹಿಳೆಯರು ಸೇರಿ ೨೦೮೪೪೩೬ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೨೦೮೭೧೩ ಮತದಾರರಿದ್ದರು.
೨೦೨೪ ಅಕ್ಟೋಬರ್ ೨೯ ರ ಹಿಂದಿನ ಪಟ್ಟಿಗೆ ಹೋಲಿಸಿದಲ್ಲಿ ವಿಶೇಷ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ ಒಟ್ಟು ೬೧೮ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಇದಕ್ಕೆ ನಿಧನ ಹೊಂದಿದವರನ್ನು ಕೈಬಿಟ್ಟಿರುವುದು ಸೇರಿದಂತೆ ವರ್ಗಾವಣೆ ಇನ್ನಿತರೆ ವಿಷಯಗಳು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಟ್ಟಿ ಪರಿಷ್ಕರಣೆ ನಂತರವೂ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಒಟ್ಟು ೪೭೭೪೦೨ ಪುರುಷ ಮತದಾರರಿದ್ದರೆ, ೪೯೫೮೬೫ ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ ಒಟ್ಟು ೧೮೪೬೩ ಮಹಿಳಾ ಮತದಾರರು ಹೆಚ್ಚಿದ್ದಾರೆ. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೯, ಶೃಂಗೇರಿ-೧, ಮೂಡಿಗೆರೆ-೨, ತರೀಕೆರೆ-೨ ಹಾಗೂ ಕಡೂರು ಕ್ಷೇತ್ರದಲ್ಲಿ ೪ ಮಂದಿ ಸೇರಿ ಒಟ್ಟು ೨೮ ಮಂದಿ ಇತರೆ ಮತದಾರರಿದ್ದಾರೆ.
ಸೇನೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಮತಕ್ಷೇತ್ರದಿಂದ ಹೊರಗಿರುವ ಮತದಾರರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು ೪೨೨ ಇದ್ದು, ಇದರಲ್ಲಿ ೪೩೦ ಪುರುಷರು, ೧೨ ಮಂದಿ ಮಹಿಳೆಯರಿದ್ದಾರೆ. ಕಳೆದವರ್ಷ ಇದರ ಸಂಖ್ಯೆ ೪೪೯ ಇತ್ತು. ಜಿಲ್ಲೆಯಲ್ಲಿ ೧೮ ರಿಂದ ೨೧ ವರ್ಷದೊಳಗಿನ ೧೦೨೮೬ ಯುವ ಮತದಾರರಿದ್ದಾರೆ. ಇದರಲ್ಲಿ ೫೩೫೩ ಪುರುಷರು ಹಾಗೂ ೪೯೩೩ ಮಹಿಳೆಯರಿದ್ದಾರೆ.
ಮತದಾರರ ಪಟ್ಟಿ ಮಾರ್ಪಾಡು ವೇಳೆ ಜಿಲ್ಲೆಯಲ್ಲಿ ಒಟ್ಟು ಹೊಸದಾಗಿ ೩೮೫೫ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದರೆ, ೪೪೭೩ ಮತದಾರರನ್ನು ಕೈಬಿಡಲಾಗಿದೆ. ಒಟ್ಟು ೩೮೮೦ ಮಾರ್ಪಾಡುಗಳು ಆಗಿವೆ. ಶೃಂಗೇರಿ ಕ್ಷೇತ್ರದಲ್ಲಿ ೮೧೦ ಸೇರ್ಪಡೆ, ೫೮೧ ತೆರವು, ಮೂಡಿಗೆರೆಯಲ್ಲಿ ೩೮೯ ಸೇರ್ಪಡೆ, ೧೧೧೯ ತೆರವು, ಚಿಕ್ಕಮಗಳೂರಿನಲ್ಲಿ ೮೧೫ ಸೇರ್ಪಡೆ, ೧೨೨೮ ತೆರವು, ತರೀಕೆರೆಯಲ್ಲಿ ೭೬೮ ಸೇರ್ಪಡೆ, ೯೦೧ ತೆರವು ಹಾಗೂ ಕಡೂರು ಕ್ಷೇತ್ರದಲ್ಲಿ ೬೨೪ ಸೇರ್ಪಡೆ ಹಾಗೂ ೯೦೧ ಮತದಾರರ ಹೆಸರನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಇದ್ದರು.
After a brief revision of voters a total of 973295 voters were registered in the district.
