ಚಿಕ್ಕಮಗಳೂರು: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರಲ್ಲಿ ಓರ್ವ ಬಾಲಕ ಕೆರೆಯ ಕೆರೆಯ ಗೊರಸು ಮಣ್ಣಿನಲ್ಲಿ ಸಿಲುಕಿ ಮೃತಪಟ್ಟಿರುವ ಧಾರುಣ ಘಟನೆ ಸೋಮವಾರ ನಡೆದಿದೆ.
ನಗರದ ಗಾಂಧಿ ನಗರದ ಶಿಕ್ಷಕಿಯೊಬ್ಬರ ಪುತ್ರ ಶಶಾಂಕ್(೧೩) ಮೃತ ಬಾಲಕನಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ಶಾಶಾಂಕ್ ತನ್ನ ಮೂವರು ಸ್ನೇಹಿತರೊಂದಿಗೆ ನಗರದ ಬೇಲೂರು ರಸ್ತೆಯಲ್ಲಿರುವ ಕೋಟೆ ಕೆರೆ ಬಳಿ ಹೋಗಿದ್ದಾರೆ. ಈ ವೇಳೆ ಕೆರೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೀರು ತುಂಬಿದ್ದ ಕಂಡ ನಾಲ್ವರು ಬಾಲಕರು ಕೆರೆ ಆಳವಿಲ್ಲ ಎಂದು ಭಾವಿಸಿ ನೀರಿನಲ್ಲಿ ಈಜಲು ಇಳಿದಿದ್ದಾರೆ.
ಈ ವೇಳೆ ಕೆರೆಯ ಗೊರಸು ಮಣ್ಣಿನಲ್ಲಿ ಶಶಾಂಕ್ನ ಕಾಲು ಸಿಲುಕಿಕೊಂಡು ಒದ್ದಾಡಿದ್ದಾನೆ. ಎಷ್ಟೇ ಪ್ರಯತ್ನಪಟ್ಟರೂ ಕೆಸರು ಮಣ್ಣಿನಿಂದ ಮೇಲೆ ಬರಲು ಸಾಧ್ಯವಾಗದ ಶಶಾಂಕ್ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾನೆ.
ಜೊತೆಗಿದ್ದ ಸ್ನೇಹಿತರು ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದರಿಂದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಹೋಗಿ ಬಾಲಕನಿಗಾಗಿ ಹುಡುಕಿದ್ದು, ಬಾಲಕನ ಸುಳಿವು ಸಿಕ್ಕಿಲ್ಲ.
ನಂತರ ಮುಳುಗು ತಜ್ಞರು, ಪೊಲೀಸರು ಸ್ಥಳಕ್ಕೆ ಬಂದು ಬಾಲಕನಿಗಾಗಿ ಹುಡುಕಾಡಿದಾಗ ಬಾಲಕ ಶಶಾಂಕ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Boy drowned in Kote lake