ಚಿಕ್ಕಮಗಳೂರು: ಕಾರ್ಮಿಕನೊಬ್ಬ ಬಾಯ್ಲರ್ ರಿಪೇರಿ ಮಾಡುವಾಗ ಏಕಾಏಕಿ ಶಾಖವು ಹೊರಹೊಮ್ಮಿದೆ. ಪರಿಣಾಮ ರಿಪೇರಿ ಮಾಡುತ್ತಿದ್ದ ಕಾರ್ಮಿಕನ ದೇಹ ಸುಟ್ಟು ಕರಕಲಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರದ ಹೊರವಲಯದ ಕುರುಬರಹಳ್ಳಿ ಬಳಿ ಇರುವ ವಿದ್ಯಾ ಕಾಫಿ ಕ್ಯುರಿಂಗ್ನಲ್ಲಿ ಘಟನೆ ನಡೆದಿದೆ.
ಉದಯ್ (೨೭) ಮೃತ ದುರ್ದೈವಿ. ಮಡಿಕೇರಿಯ ಕುಶಾಲನಗರ ಮೂಲದ ಉದಯ್ ಬಾಯ್ಲರ್ ಸರಿಪಡಿಸುವಾಗ ಏಕಾಏಕಿ ೩೪೦ ಡಿ.ಸೆ ಶಾಖ ಹೊರ ಬಂದಿದೆ. ಶಾಖದ ತೀವ್ರತೆಗೆ ಉದಯ್ ದೇಹ ಸುಟ್ಟು ಕರಕಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಸದ್ಯ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿದೆ.
ಶವಗಾರದ ಬಳಿ ಮಗನನ್ನು ಕಳೆದುಕೊಂಡ ತಾಯಿಯ ಕಣ್ಣೀರು ಹಾಕುತ್ತಿದ್ದ ದೃಶ್ಯ ಕಂಡು ಬಂತು. ವಿಷಯ ತಿಳಿಯುತ್ತಿದ್ದಂತೆ ಶವಗಾರದ ಬಳಿ ಕಾಫಿ ಕ್ಯುರಿಂಗ್ ಕಾರ್ಮಿಕರು ಜಮಾಯಿಸಿದ್ದರು. ಸದ್ಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.
Worker death while repairing boiler