ಚಿಕ್ಕಮಗಳೂರು : ನಗರದ ಹನುಮಂತಪ್ಪ ಸರ್ಕಲ್ ಬಳಿ ಹೂವಿನ ಮಾರುಕಟ್ಟೆಯಲ್ಲಿ ಶ್ರೀ ಗುರು ಹುವಾಡಿಗ ಮಾದಯ್ಯ ಜಯಂತಿಯನ್ನು ಅನಂತ ಹುಣ್ಣಿಮೆ ಪ್ರಯುಕ್ತ ಶ್ರೀ ಗುರು ಮಾದಯ್ಯ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
12ನೇ ಶತಮಾನದ ಶ್ರೀ ಗುರು ಹೂವಾಡಿಗ ಮಾದಯ್ಯರವರ ಅನಂತ ಹುಣ್ಣಿಮೆ ಜಯಂತೋತ್ಸವ ಸಂದರ್ಭದಲ್ಲಿ ಸಮುದಾಯದ ರಾಜ್ಯಾಧ್ಯಕ್ಷರಾದ ಸಿಆರ್ ರಘು ಅವರು ಮಾತನಾಡುತ್ತಾ ರಾಜ್ಯದಲ್ಲಿ ಸಮುದಾಯದ ನಿಗಮ ಮಂಡಳಿ ಸ್ಥಾಪನೆಯಾಗಿದ್ದರು ಇದುವರೆಗೂ ಅಧ್ಯಕ್ಷರು ಇತರ ಪದಾಧಿಕಾರಿಗಳ ನೇಮಕ ಆಗಿಲ್ಲ ಸರ್ಕಾರ ತಕ್ಷಣ ಕಾರ್ಯಪ್ರವತ್ತರಾಗಬೇಕೆಂದು ಸಮಾಜದ ಪರವಾಗಿ ಒತ್ತಾಯಿಸಿದರು.
ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಧ್ಯಕ್ಷ ಆನಂದ್ ಮಾತನಾಡುತ್ತಾ ಸಮುದಾಯದ ಏಳಿಗೆಗೆ ಶ್ರೀಗಳ ಆದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ನಮಗೆ ಸಮುದಾಯದ ಭಾವನೆ ಅವಶ್ಯಕತೆ ಇದ್ದು ಈ ಹೂವಿನ ಮಾರುಕಟ್ಟೆಗೆ ವಾಡಿಗ ಮಾದೇವ ರವರ ಹೆಸರಿಡಬೇಕು ಹೇಳುತ್ತಾ ಶಾಸಕರಾದ ಹೆಚ್ ಡಿ ತಮಯ್ಯ ರವರು ಸ್ಥಳೀಯ ಹಾಗೂ ಸರ್ಕಾರದ ಗಮನಕ್ಕೆ ತರಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಜಯಂತೋತ್ಸವ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸಿ ಡಿ ವಿನಯ್, ಖಜಾಂಚಿ ಕುಮಾರಸ್ವಾಮಿ ಹಾಗೂ ಬಸವರಾಜು ಮಂಜುನಾಥ್, ನಿತಿನ್, ಯತೀಶ್ ಮಹಿಳೆಯರು ಸೇರಿದಂತೆ ಮುಂತಾದ ಸಮುದಾಯದ ಮುಖಂಡರು ಭಾಗವಹಿಸಿದ್ದರು.