ಚಿಕ್ಕಮಗಳೂರು: ಶಿಕ್ಷಣವೂ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಯಾಗಿ ರೂಪಿಸುತ್ತದೆ. ಸಮಾಜದ ಆಗು ಹೋಗುಗಳು, ಒಳಿತು ಕೆಡುಕಗಳ ಪಾಠ ಪ್ರವಚನಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಅವರ ಸಾಧನೆಗೆ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ ಎಂದು ಶ್ರೀ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮಠ ದ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹೇಳಿದರು.
ನಗರದ ಎಐಟಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ಧ ಸರಸ್ವತಿ ಪೂಜೆ ಹಾಗೂ ಪ್ರಥಮ ವರ್ಷದ ಬಿಇ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.
ಅನೇಕ ವಿ?ಯದಲ್ಲಿನ ಗೊಂದಲಗಳು ಮತ್ತು ಹೆಚ್ಚಿನ ಕಲಿಕೆಗಾಗಿ ಗುರುಗಳು ಹಾಗೂ ತಮ್ಮ ಹಿರಿಯ ಸಹಪಾಠಿಗಳೊಂದಿಗೆ ಚರ್ಚಿಸಿ ಸ್ಪ?ತೆ ಪಡೆಯಬೇಕು. ಪಾಲಕರು, ಗುರು ಹಿರಿಯರನ್ನು ಗೌರವಿಸಿ ಮಾಡುವ ಪ್ರತಿ ಕೆಲಸವು ಸಂಪೂರ್ಣವಾಗುತ್ತವೆ. ಹೀಗಾಗಿ ಮಾಡುವ ಕೆಲಸಗಳಿಂದ ಗೌರವ ದೊರಕುವು ದಾದರೆ ಆ ಕಾರ್ಯವನ್ನು ಧೈರ್ಯವಾಗಿ ನಿರ್ವಹಿಸಬೇಕು ಎಂದರು.
ಅನ್ವಯಿಕ ವಿಜ್ಞಾನದ ಗಡಿಗಳನ್ನು ತಳ್ಳುವಲ್ಲಿ ಇಂಜಿನಿಯರ್ಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ, ನಿರ್ಮಾಣ, ಉತ್ಪಾದನೆ, ಔ?ಧ ಮತ್ತು ಹಲವಾರು ಇತರ ಕ್ಷೇತ್ರಗಳನ್ನು ಹೊಸ ಎತ್ತರಕ್ಕೆ ತಲುಪಲು ಅನುವು ಮಾಡಿಕೊಡುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದಲ್ಲದೆ ಕ್ಷೇತ್ರವು ಸಾಮಾನ್ಯವಾಗಿ ನಾವೀನ್ಯತೆಯ ಮುಂಚೂಣಿಯಲ್ಲಿದೆ ಎಂದರು.
ಆರೋಗ್ಯ, ಆಸ್ತಿ, ಆರ್ಥಿಕ ಹಿತಾಸಕ್ತಿ, ಸಾರ್ವಜನಿಕ ಕಲ್ಯಾಣ ಮತ್ತು ಪರಿಸರವನ್ನು ರಕ್ಷಿಸುವುದು ಸೇರಿ ದಂತೆ ಸಮಾಜದ ವಿಶಾಲ ಹಿತಾಸಕ್ತಿಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಿರುತ್ತಾರೆ. ಈ ಕ್ಷೇತ್ರದಲ್ಲಿ ಕಲಿಕೆ ಹಾಗೂ ಸೇವೆಮಾಡಲು ಸದಾ ಚೈತನ್ಯದಿಂದ ಉತ್ಸುಕಾರಾಗಿರಬೇಕು. ವಿಶೇ? ಜ್ಞಾನ ಹಾಗೂ ಕೌಶಲ್ಯ ಉಳ್ಳ ವ್ಯಕ್ತಿಗಳು ಈ ಕ್ಷೇತ್ರದಲ್ಲಿ ಗೆಲುವು ಕಾಣಲು ಸಾಧ್ಯ ಎಂದರು.
ಇಂಜಿನಿಯರಿಂಗ್ ಒಂದು ಕ್ಷೇತ್ರವಾಗಿದ್ದು ಅದು ಸಮುದಾಯಗಳನ್ನು ರೂಪಿಸುವಲ್ಲಿ ಮತ್ತು ಮಾನ ವೀಯತೆಯನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಅಸ್ತಿತ್ವದಲ್ಲಿರುವ ತಂತ್ರ ಜ್ಞಾನಗಳನ್ನು ಸುಧಾರಿಸಲು ಮತ್ತು ಆವಿ?ರಿಸಲು ಪ್ರಯತ್ನಿಸುವ ವ್ಯಾಪಕ ಶ್ರೇಣಿಯ ವಿಶೇ? ವಿಭಾಗಗಳನ್ನು ಒಳಗೊಂಡು ಸಮಾಜದ ಅಗತ್ಯತೆಗಳು ಮತ್ತು ಸವಾಲುಗಳನ್ನು ಪರಿಹರಿಸುತ್ತದೆ ಎಂದು ತಿಳಿಸಿದರು.
ಭಾರತೀಯ ಸೈನ್ಯದ ಕಮಡಿಂಗ್ ಅಧಿಕಾರಿ ಪುನೀತ್ ಶರ್ಮ ಮಾತನಾಡಿ ವಿದ್ಯಾರ್ಥಿಗಳ ಅಗತ್ಯತೆ ಗೆ ಸಕಲ ಸೌಲಭ್ಯವನ್ನು ಒದಗಿಸಿ ಉತ್ತಮವಾಗಿ ಎಐಟಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಮಕ್ಕಳು ಜೀವ ನದಲ್ಲಿ ಶಿಸ್ತುಬದ್ಧತೆಯನ್ನು ಅಳವಡಿಸಿಕೊಳ್ಳಬೇಕು. ಗುರುಗಳು, ಪಾಲಕರಿಗೆ ಗೌರವಿಸುವ ಗುಣ ಮೈಗೂ ಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಎಐಟಿ ಕಾಲೇಜು ಸಮಿತಿ ನಿರ್ದೇಶಕ ಸಿ.ಕೆ.ಸುಬ್ಬರಾಯ ಮಾತನಾಡಿ ರಾಜ್ಯದಲ್ಲೇ ಗುಣಮಟ್ಟ ಶಿಕ್ಷಣ ಒದಗಿಸುವಲ್ಲಿ ಎಐಟಿ ಶ್ರಮಿಸುತ್ತಿದೆ. ಮಕ್ಕಳು ಉಜ್ವಲ ಭವಿಷ್ಯಕ್ಕೆ ಪಣ ತೊಟ್ಟಿರುವ ಸಂಸ್ಥೆ ವಿದ್ಯಾರ್ಥೀಗಳ ಸಾಧನೆಗೆ ಪರಿಣಿತ ಶಿಕ್ಷಕರು ಹಾಗೂ ಕಾಲೇಜು ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಅನೇಕ ಕಾಲದಿಂದ ನಿರತವಾಗಿದೆ ಎಂದರು.
ಈ ಸಂದರ್ಭದಲ್ಲಿ ಎಐಟಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಎಐಟಿ ಪ್ರಾಂಶುಪಾಲ ಸಿ.ಟಿ.ಜಯದೇವ್, ಕಾಲೇಜು ಆಡಳೀತ ಮಂಡಳಿ ಸದಸ್ಯ ಕೆ.ಮೋಹನ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
Children can become perfect individuals through education