ಚಿಕ್ಕಮಗಳೂರು: ಮೈಸೂರು ಜಿಲ್ಲೆಯ ಉರಿಲಿಂಗಿ ಪೆದ್ದಿ ಮಠ ಮಹಾ ಸಂಸ್ಥಾನದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ನಿನ್ನೆ ನಗರಕ್ಕೆ ಸಮೀಪದ ತೇಗೂರಿನಲ್ಲಿ ಡಾ . ಬಿ .ಆರ್. ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಆರಂಭಿಸಲಾಗಿರುವ ಬುದ್ಧ ವಿಹಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕರ್ನಾಟಕ ಸಾರಿಗೆ ನಿಗಮದ ನೌಕರರ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕ್ರಮ ಮುಗಿದ ನಂತರ ಸ್ವಾಮೀಜಿಯವರು ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಬಿ.ಬಿ.ನಿಂಗಯ್ಯನವರು ಹಾಗೂ ದಲಿತ ಸಂಘಟನೆಗಳ ಮುಖಂಡರುಗಳೊಂದಿಗೆ ಬುದ್ದ ವಿಹಾರಕ್ಕೆ ತೆರಳಿದ ಸ್ವಾಮೀಜಿ ಅವರು ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಉದ್ದೇಶಿತ ಕಾರ್ಯ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಉದ್ದೇಶಿತ ಬುದ್ದ ವಿಹಾರ ಮತ್ತು ಅಂಬೇಡ್ಕರ್ ಆದ್ಯಯನ ಸಂಸ್ಥೆಗೆ ಮಂಜೂರಾತಿಗೆ ಕೋರಿರುವ ಜಮೀನನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಹೋರಾಟ ನಡೆಸ ಬೇಕೆಂದು ಕಿವಿ ಮಾತು ಹೇಳಿದ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಈ ಜಮೀನನು ಮಂಜೂರು ಮಾಡುವ ಸಂಬಂಧ ನಡೆಯುವ ಹೋರಾಟಕ್ಕೆತಾವೂ ಬೆಂಬಲಿಸಿ ಭಾಗವಹಿಸುವುದಾಗಿ ತಿಳಿಸಿದರು.
ಬುಧ್ದ ವಿಹಾರಕ್ಕೆ ಆಗಮಿಸಿದ ಅವರಿಗೆ ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಕಾಂಗ್ರೆಸ್ ಮುಖಂಡರೂ ಆಗಿರುವ ವಿಭಾಗೀಯ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯರಾಗಿರುವ ಹುಣುಸೇಮಕ್ಕಿ ಲಕ್ಷ್ಮಣ್ ಅವರು ಸ್ವಾಗತಿಸಿ ವಂದಿಸಿದರು.
ಕೆ.ಎಸ್ ಆರ್ ಟಿಸಿ ಎಸ್ಸಿ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾದ್ಯಕ್ಷ ವಕೀಲರಾದ ಅನಿಲ್ ಕುಮಾರ್, ದಲಿತ ಸಂಘಟನೆಗಳ ಮುಖಂಡರುಗಳಾದ ಮರ್ಲೆ ಅಣ್ಣಯ್ಯ ಹೊನ್ನೇಶ್ ಮತ್ತಾವರ ಪ್ಕಾಶ್ ಹರೀಶ್ ಮಿತ್ರ ಲೋಕೇಶ್. P ಹರಿಯಪ್ಪ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
Jnana Prakash Swamiji’s visit to Buddha Vihara