13 ಫಲಾನುಭವಿಗಳಿಗೆ ಸುಮಾರು 65 ಲಕ್ಷ ರೂ. ವೆಚ್ಚದಲ್ಲಿ ಉಚಿತ ಬೋರ್‌ವೆಲ್

ಚಿಕ್ಕಮಗಳೂರು: ಸಣ್ಣ ನೀರಾವರಿ ಇಲಾಖೆ ವತಿಯಿಂದ ಎಸ್ಸಿಪಿ-ಟಿಎಸ್‌ಪಿ ಯೋಜನೆಯಡಿ ಕ್ಷೇತ್ರದ ೧೩ ಫಲಾನುಭವಿಗಳಿಗೆ ಸುಮಾರು ೬೫ ಲಕ್ಷ ರೂ. ವೆಚ್ಚದಲ್ಲಿ ಉಚಿತವಾಗಿ ಬೋರ್‌ವೆಲ್ ಕೊರೆಸಿಕೊಡುವ ಕಾರ್ಯಕ್ಕೆ ತಾಲ್ಲೂಕಿನ ಹಿರೇಗೌಜದಲ್ಲಿ ಗ್ರಾಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಷಿತ ವರ್ಗದ ಜನರನ್ನು ಮುನ್ನೆಲೆಗೆ ತರಲು ಶ್ರಮಿಸುತ್ತಿದ್ದಾರೆ. ೧೨ ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟ ಮಾರ್ಗದಲ್ಲೇ ಮುಖ್ಯಮಂತ್ರಿಗಳು ಸಾಗುತ್ತಿದ್ದಾರೆ. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದಾರೆ ಎಂದರು.

ಸಣ್ಣ ನೀರಾವರಿ ಇಲಾಖೆ ವತಿಯಿಂದ ಶೋಷಿತ ವರ್ಗದವರಿಗೆ ಬೋರ್‌ವೆಲ್ ಕೊರೆಸಿ ಅವರ ಬದುಕನ್ನು ಬಂಗಾರಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಎಲ್ಲಾ ವರ್ಗದಲ್ಲೂ ಬಡವರು, ರೈತರಿದ್ದಾರೆ. ಅವರಾಗಿರೂ ಜಾತಿ, ಪಕ್ಷ ಇರುವುದಿಲ್ಲ. ಶೇ.೭೦ ರಷ್ಟು ರೈತರಿರುವ ನಮ್ಮ ದೇಶ, ರಾಜ್ಯದಲ್ಲಿ ಒಳ್ಳೆಯ ಮಳೆ ಬೆಳೆ ಯಾಗಿ ಸಂವೃದ್ಧವಾಗಿಸಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.

ಹಾಲಿನ ಬೆಲೆ ೪ ರೂ. ಹೆಚ್ಚಿಸಿರುವುದು ರೈತರಿಗೆ ಕೊಡಲಿಕ್ಕಾಗಿ, ಕಷ್ಟಪಟ್ಟು ಹಾಲು ಉತ್ಪಾದನೆ ಮಾಡುವ ರೈತರಿಗೆ ಅವರ ಖರ್ಚು ಸಹ ಸಿಗದಿದ್ದರೆ ಹೇಗೆ? ಈ ಹಿನ್ನೆಲೆಯಲ್ಲಿ ಹಸು ಸಾಕಿ ಹಾಲು ಉತ್ಪಾದಿಸುವ ರೈತರಿಗೆ ಕೊಡುವ ಸಲುವಾಗಿ ಬೆಲೆ ಏರಿಸಲಾಗಿದೆ. ವಿರೋಧ ಪಕ್ಷದಲ್ಲಿರುವವರು ಆರೋಪ ಮಾಡುವುದು ಸಹಜ ಎಂದರು.

ನಮ್ಮ ಸರ್ಕಾರ ಬಂದ ಮೇಲೆ ಸಹಸ್ರಾರು ಹೊಸ ಬಸ್‌ಗಳನ್ನು ಬಿಟ್ಟಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಗಾಣದಾಳಿನಲಿ ಎಂವಿಎಸ್‌ಎಸ್ ಸ್ಟೇಷನ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಅದು ಪೂರ್ಣಗೊಂಡ ಮೇಲೆ ಸಮಸ್ಯೆ ಪರಿಹಾರವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ಶಿವಕುಮಾರ್, ಚಂದ್ರಶೇಖರ್, ಲೋಕಯ್ಯ, ಜ್ಞಾನೇಂದ್ರ, ಶಿವಲಿಂಗಯ್ಯ, ತಾ.ಪಂ. ಮಾಜಿ ಸದಸ್ಯ ಮಲ್ಲೇಗೌಡ, ಇಂಜಿನೀಯರ್ ದಕ್ಷಿಣಾ ಮೂರ್ತಿ ಇತರರು ಇದ್ದರು.

Free borewells for 13 beneficiaries at a cost of about Rs. 65 lakhs

Comments

Leave a Reply

Your email address will not be published. Required fields are marked *