ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು

ಶೃಂಗೇರಿ: ಸಾಹಿತ್ಯ ಮನಸ್ಸನ್ನು ಅರಳಿಸುವ ಕೆಲಸ ಮಾಡಬೇಕು.ಕಾಲಕಾಲಕ್ಕೆ ಹೊಸ ಸಾಹಿತ್ಯದ ಸೃಷ್ಟಿಯೊಂದಿಗೆ ಪ್ರತಿಯೊಬ್ಬರ ಬದುಕಿಗೆ ಒಂದು ಅತ್ಯುತ್ತಮವಾದ ಮೌಲ್ಯವನ್ನು ನೀಡಬೇಕು ಎಂದು ವೈದ್ಯೆ ಡಾ.ಲಕ್ಷ್ಮೀಪ್ರಸಾದ್ ತಿಳಿಸಿದರು.

ಅವರು ಶುಕ್ರವಾರ ತಾ.ಕಸಾಪ ಹಾಗೂ ಮಹಿಳಾ ಘಟಕದ ಸಹಯೋಗದಲ್ಲಿ ಕನ್ನಡಭವನದಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಹಿತ್ಯದ ಅಧ್ಯಯನದಿಂದ ನಮ್ಮ ಜ್ಞಾನ ವೃದ್ಧಿಯಾಗುತ್ತದೆ.ನಮ್ಮೊಳಗಿರುವ ಸೃಜನಶೀಲತೆಗೆ ಮೂರ್ತರೂಪ ನೀಡುವ ಸಾಹಿತ್ಯ ಪ್ರಾಕಾರಗಳು ಬೇಕಾದಷ್ಟು ಇದೆ.ಕಥೆ,ಕವನ,ನೀಳ್ಗತೆ,ಕಾದಂಬರಿ ಮುಂತಾದ ಪ್ರಕಾರಗಳ ಪರಿಚಯ ನಮಗೆ ಸಿಗಬೇಕಾದರೆ ನಮಗೆ ಪುಸ್ತಕಗಳನ್ನು ಓದುವ ಅವಶ್ಯಕತೆ ಇದೆ.ಮಹಿಳೆಯರು ಕೂಡಾಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ.

ಅಕ್ಕಮಹಾದೇವಿ,ಸಂಚಿಹೊನ್ನಮ್ಮ.ತ್ರಿವೇಣಿ,ವೈದೇಹಿ,ಸಾಯುಸುತೆ ಮುಂತಾದ ಹಿರಿಯ ಸಾಹಿತಿಗಳ ಬರವಣಿಗೆಯ ಮೌಲ್ಯಗಳು ಇಂದಿಗೂ ಕೂಡಾ ಜನಮಾನಸದಲ್ಲಿ ಶಾಶ್ವತವಾದ ಸ್ಥಾನ ಗಳಿಸಿದೆ.ಮಹಿಳೆಯರು ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದು ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡಬೇಕು.ಪ್ರತಿಯೊಂದು ಕಲಿಕೆಗೆ ಆಧಾರ ಸಾಹಿತ್ಯ.ಸಾಹಿತ್ಯದಿಂದ ಬೌದ್ಧಿಕ ಪ್ರಗತಿ ಸಾಧ್ಯ.ನಮ್ಮೊಳಗಿನ ಸುಪ್ತಪ್ರಜ್ಞೆಗೆ ಪೂರಕವಾಗಿರುವ ಉತ್ತಮ ಸಾಹಿತ್ಯ ಗ್ರಂಥಗಳು ಸಂಸ್ಕೃತಿಯ ಮೌಲ್ಯಗಳು ಬೆಳೆಯುತ್ತದೆ ಎಂದರು.

ತಾ|ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಅವರು ಮಾತನಾಡಿ”ಪಾಲಕರು ಮನೆಯಲ್ಲಿ ಹೆಣ್ಣುಮಕ್ಕಳಿಗೆ ಅವರ ಮೌಲ್ಯಗಳನ್ನು ತಿಳಿಸುವ ಅಗತ್ಯವಿದೆ.ತಾರತಮ್ಯ ಮನೋಭಾವ ಬದಿಗಿಟ್ಟು ಹೆಣ್ಣಿನ ಅಂತರ್ಗತದಲ್ಲಿರುವ ಸೃಜನಶೀಲತೆಗೆ ಮಹಿಳೆಯರು ಪ್ರೋತ್ಸಾಹ ನೀಡಬೇಕು.ಅಡುಗೆ ಮನೆಯಿಂದ ಅಂತರಿಕ್ಷದ ತನಕ ಮಹಿಳೆಯರು ಸಾಧನೆ ಮಾಡಿದ್ದು ಒಂದು ಹೆಣ್ಣಿಗೆ ಮತ್ತೊಬ್ಬ ಹೆಣ್ಣು ಸಹಕಾರ ನೀಡುವ ಭಾವ ಹೊರಹೊಮ್ಮಬೇಕು.ಸಾಂಸ್ಕೃತಿಕ,ಸಾಹಿತ್ಯ,ಶೈಕ್ಷಣಿಕ,ಸಾಮಾಜಿಕ ಸೇವೆಯಲ್ಲಿ ಮುನ್ನಡೆ ಸಾಧಿಸಿ ತನ್ನತನವನ್ನು ಉಳಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರು,ಹಿರಿಯ ಹೆರಿಗೆ ತಜ್ಞೆ ಸರೋಜಮ್ಮ ಕಿಗ್ಗಾ ಹಾಗೂ ಸುಮಂಗಲಿ ಅನಮದಸ್ವಾಮಿ ಅವರನ್ನು ಗೌರವಿಸಲಾಯಿತು.ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ತಾ|ಕಸಾಪ ಮಾಜಿ ಅಧ್ಯಕ್ಷೆ ಪೂರ್ಣಿಮಾ ಸಿದ್ಧಪ್ಪ ಬಹುಮಾನ ವಿತರಿಸಿದರು.ದತ್ತಿ ದಾನಿ ಗಾಯತ್ರಿ ರಾಮಚಂದ್ರ,ತಾ|ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಮಣ್ಯ,ಜಿಲ್ಲಾ ಕಸಾಪ ಸಂಚಾಲಕಿ ಪುಪ್ಪಲಕ್ಮೀನಾರಾಯಣ್,ಕಸಬಾ ಮತ್ತು ಕಿಗ್ಗ ಹೋಬಳಿ ಘಟಕದ ಅಧ್ಯಕ್ಷರಾದ ಅಂಗುರ್ಡಿ ದಿನೇಶ್,ಮಂಜುನಾಥ್ ನಾಯ್ಕ್,ಮಹಿಳಾಘಟಕದ ಕಾರ್ಯದರ್ಶಿ ನೇತ್ರಾವತಿ,ಕ್ಷೇತ್ರಶಿಕ್ಷಣಾಧಿಕಾರಿ ವರಲಕ್ಷ್ಮೀ ಉಪಸ್ಥಿತರಿದ್ದರು.

೨೯ಎಸ್.ಆರ್.ಐ ೨;-ಶುಕ್ರವಾರ ತಾ|ಕಸಾಪ ಹಾಗೂ ಮಹಿಳಾ ಘಟಕದ ಸಹಯೋಗದಲ್ಲಿ ಕನ್ನಡಭವನದಲ್ಲಿ ಆಯೋಜಿಸಿದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರಭಟ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಗ್ರಾ.ಪಂ ವ್ಯಾಪ್ತಿಯ ಸ್ವಚ್ಛವಾಹಿನಿ ಚಾಲಕಿಯರನ್ನು ಗೌರವಿಸಲಾಯಿತು.ಪಲ್ಲವಿ,ಶಶಿರೇಖಾ,ಇಂಚರ,ಪ್ರಕೃತಿ,ಪ್ರೀತಿ,ಕವಿತ,ಮಾನಸ,ಆನಂದ ಸ್ವಾಮಿ,ಕವಿತಾ ಬಾಪಟ್ ಇದ್ದರು.

Literature should work to blossom the mind.

Comments

Leave a Reply

Your email address will not be published. Required fields are marked *