May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಪಿಎಲ್‌ಡಿ ಬ್ಯಾಂಕ್‌ನಿಂದ 10 ಕೋಟಿ ರೂ ಸಾಲ ವಿತರಣೆ ಗುರಿ

ಚಿಕ್ಕಮಗಳೂರು: ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯ ೮ ಪಿಸಿಎಲ್‌ಡಿ ಬ್ಯಾಂಕ್‌ಗಳು ಪ್ರಥಮ ಸಾಧನೆಗೈದು ಲಾಭದಾಯಕವಾಗಿ ನಡೆಯುತ್ತಿದ್ದು, ಈ ವರ್ಷ ೧೦ ಕೋಟಿ ರೂ ಸಾಲ ವಿತರಿಸಲು ಗುರಿಹೊಂದಲಾಗಿದೆ ಎಂದು ಬ್ಯಾಂಕಿನ ಜಿಲ್ಲಾ ನಿರ್ದೇಶಕ ಈ.ಆರ್ ಮಹೇಶ್ ತಿಳಿಸಿದರು.

ಅವರು ಇಂದು ನಗರದ ಪಿಸಿಎಲ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ 
ಜಿಲ್ಲೆಯಲ್ಲಿ ಶೇ.೩ ರ ಬಡ್ಡಿದರಲ್ಲಿ ಕಳೆದ ವರ್ಷ ರೈತರಿಗೆ ೪೦ ಕೋಟಿ ರೂಗಳ ಸಾಲವನ್ನು ವಿತರಿಸಲಾಗಿದ್ದು, ಇದರಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಸಾಲ ನೀಡಿದ ಜಿಲ್ಲೆ ಎಂಬ ಪಿಸಿಎಲ್‌ಡಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ಈ ಅವಕಾಶವನ್ನು ಸದುಪಯೊಗಪಡಿಸಿಕೊಳ್ಳುವಂತೆ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ರಾಜ್ಯಸರ್ಕಾರ ಘೋಷಣೆ ಮಾಡಿರುವ ಶೇ.೦ ದರದಲ್ಲಿ ಸಾಲ ನೀಡಲು ಆದೇಶ ಬಂದ ಬಳಿಕ ಐದು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು.

ಶೇ.೩ ರ ಬಡ್ಡಿದರದಲ್ಲಿ ೧೫ ಲಕ್ಷ ರೂಗಳವರೆಗೆ ಸಾಲ ನೀಡಲಾಗುವುದೆಂದ ಅವರು, ರಾಜ್ಯದಲ್ಲೇ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಪಿಸಿಎಲ್‌ಡಿ ಬ್ಯಾಂಕ್ ಮುಂದಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಪಿಸಿಎಲ್‌ಡಿ ಬ್ಯಾಂಕ್, ನಬಾರ್ಡ್, ಡಿಡಿಎಂ ರೇಜಿಸ್, ಬ್ಯಾಂಕಿನ ಅಧ್ಯಕ್ಷ ಸಿ.ಎಸ್ ರಂಗನಾಥ್, ಜಿಲ್ಲೆಯ ವಿವಿಧ ಪಿಎಲ್‌ಡಿ ಬ್ಯಾಂಕ್‌ಗಳ ಅಧ್ಯಕ್ಷರುಗಳಾದ ನಾಗರತ್ನ, ಹೆಚ್.ಎಸ್. ದಿನೇಶ್, ದಿನೇಶ್ ಹೆಗ್ಡೆ, ಸುಂದರೇಶ್, ಯೋಗೀಶ್, ಪುಟ್ಟರಾಜ್ ಹೆಚ್.ಎನ್ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ತೇಜಸ್ವಿನಿ ಉಪಸ್ಥಿತರಿದ್ದರು.

PLD Bank targets to disburse Rs 10 crore in loans this year

Related posts

ಭಾರತ ವಿಶ್ವದಲ್ಲೇ ಅತೀ ದೊಡ್ಡ-ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರ

Team Suddigara

ನಿಗದಿತ ಸ್ಥಳದಲ್ಲಿಯೇ ಗಣಪತಿ ಮೂರ್ತಿ ವಿಸರ್ಜಿಸಬೇಕು

Team Suddigara

ಗುರುಗಳ ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ಶ್ರಮಿಸಬೇಕು

Team Suddigara

Leave a Comment