ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಣಿ ಡಾ.ಜಿ.ಪರಮೇಶ್ವರ್

ಚಿಕ್ಕಮಗಳೂರು: ಗೃಹಸಚಿವರಾಗಿ ಮೂರನೇ ಬಾರಿಗೆ ಹುದ್ದೆ ನಿಭಾಯಿಸುತ್ತಿರುವ ಪ್ರಾಮಾಣಿಕ, ಸರಳ ಸಜ್ಜನಿಕೆಯ ರಾಜಕಾರಣಿ ಡಾ. ಜಿ. ಪರಮೇಶ್ವರ್‌ರವರಿಗೆ ಶಾಸಕ ಹೆಚ್.ಡಿ. ತಮ್ಮಯ್ಯ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

zವರು ಇಂದು ನಗರದ ಗಣಪತಿ ದೇವಸ್ಥಾನದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಎಸ್‌ಸಿ ಸೆಲ್ ಘಟಕದ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಗೃಹಸಚಿವ ಡಾ. ಜಿ. ಪರಮೇಶ್ವರ್‌ರವರ ೭೪ನೇ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದರು.

ಮುಂದಿನ ದಿನಗಳಲ್ಲಿ ಸಚಿವರಿಗೆ ಆಯಸ್ಸು, ಆರೋಗ್ಯ, ಹೆಚ್ಚಿನ ಅಧಿಕಾರ ಸಿಗಲಿ ಎಂದು ಕ್ಷೇತ್ರದ ಜನರು ಮತ್ತು ಕಾರ್ಯಕರ್ತರ ಪರವಾಗಿ ಹಾರೈಸಿದರು.
ಡಾ. ಜಿ. ಪರಮೇಶ್ವರ್ ಅವರು ಕೇವಲ ದಲಿತ ಸಮುದಾಯಕ್ಕೆ ಸೀಮಿತರಾಗದೇ ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪರಿಣಾಮ ೨೦೧೩ ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರೊಂದಿಗೆ ಪರಮೇಶ್ವರ್‌ರವರು ೨೦೨೩ ರಲ್ಲಿ ಶ್ರಮಿಸಿದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಸರಳ, ಸೌಮ್ಯ ರಾಜಕಾರಣಿ ಡಾ. ಜಿ. ಪರಮೇಶ್ವರ್‌ರವರಿಗೆ ಆಯಸ್ಸು, ಆರೋಗ್ಯದ ಜೊತೆಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಕಾಂಗ್ರೆಸ್ ಮುಖಂಡರಾದ , ಮಲ್ಲೇಶ್‌ಸ್ವಾಮಿ, ಓಂಕಾರಣ್ಣ, ವೇಣುಗೋಪಾಲ್, ನೇತ್ರಾವತಿ, ಮಹೇಶ್, ಚಂದ್ರು, ಶಾಂತಕುಮಾರ್, ರಾಜ್ ಕುಮಾರ್, ಜಗಧೀಶ್, ವೆಂಕಟೇಶ್, ಸುದೀಪ್ ಮತ್ತಿತರರು ಶುಭ ಹಾರೈಸಿದರು.

Dr.G.Parameshwar a politician with a simple gentlemanly personality

Comments

Leave a Reply

Your email address will not be published. Required fields are marked *