ಚಿಕ್ಕಮಗಳೂರು: ರಕ್ತದಾನವು ಮಾನವೀಯತೆ ಹಾಗೂ ಸತ್ಕಾರ್ಯದ ಕೆಲಸ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಶರೀರವನ್ನು ಹಲವಾರು ಕಾಯಿಲೆಗಳಿಂದ ದೂರಿಡುವಲ್ಲಿ ಸಹಕಾರಿಯಾಗ ಲಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ವಿಶ್ವ ಬಂಧುತ್ವ ದಿನದ ಪ್ರಯುಕ್ತ ಪ್ರಜಾಪಿತ ಬ್ರಹ್ಮ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಏರ್ಪ ಡಿಸಿದ್ಧ ರಾಜಯೋಗಿನಿ ಬ್ರಹ್ಮಾಕು ಮಾರಿ ದಾದಿ ಡಾ|| ಪ್ರಕಾಶ್‌ಮಣಿಜೀಯವರ ೧೮ನೇ ಪುಣ್ಯ ಸ್ಮೃತಿದಿನದ ಪ್ರಯುಕ್ತ ಬೃಹತ್ ರಕ್ತದಾನ ಅಭಿ ಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ವಿದ್ಯಾದಾನ, ಅಂಗಾಂಗದಾನ, ಅನ್ನದಾನದ ನಡುವೆ ರಕ್ತದಾನವು ಬಹುಪುಣ್ಯದ ಕೆಲ ಸವಾಗಿದೆ. ರಕ್ತದ ಅವಶ್ಯಕತೆಯಿರುವ ತುರ್ತು ಸ್ಥಿತಿಯ ರೋಗಿಗಳನ್ನು ಉಳಿಸಲು ರಕ್ತದಾನ ಬಹುಮುಖ್ಯ ವಾಗಿದೆ. ಹೀಗಾಗಿ ಯುವಸಮೂಹ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಮತ್ತೊಂದು ಜೀವ ಉಳಿಸಲು ಮು ಂದಾಗಬೇಕಿದೆ ಎಂದರು.
ರಕ್ತಕಣದಲ್ಲಿ ಋಣಾತ್ಮಕ ಮತ್ತು ಧನಾತ್ಮಕಗಳೆಂಬ ಅಂಶಗಳಿವೆ. ವಿಶೇಷವಾಗಿ ‘ಓ’ ರಕ್ತಕಣವು ತುಂಬಾ ವಿರಳವಾಗಿದೆ. ಅಪಘಾತವಾದಲ್ಲಿ ಸಿಗುವುದು ಬಹಳಷ್ಟು ಕಷ್ಟಸಾಧ್ಯ. ಬಿಳಿರಕ್ತಣವು ದೇಹದಲ್ಲಿ ಕ್ಷೀಣಿಸಿದರೆ ಜೀವಕ್ಕೆ ಕುತ್ತು ಬಂದಂತೆ. ಹೀಗಾಗಿ ಪ್ರತಿಯೊಬ್ಬರು ಕನಿಷ್ಟ ವರ್ಷಕ್ಕೆ ಎರಡ್ಮೂರು ಭಾರೀ ರಕ್ತದಾನ ಮಾಡಿ ದರೆ ದೇಹವು ಆರೋಗ್ಯದಿಂದ ಕೂಡಿರಲಿದೆ ಎಂದು ಹೇಳಿದರು.
ದಾದಿಯರ ಪುಣ್ಯಸ್ಮೃತಿದಿನದ ಪ್ರಯುಕ್ತ ರಕ್ತದಾನ ಸೇರಿದಂತೆ ಉಚಿತ ಕಣ್ಣಿನ ತಪಾಸಣೆಗೆ ಬ್ರಹ್ಮಕು ಮಾರೀಸ್ ಸಂಸ್ಥೆ ಮುಂದಾಗಿರುವುದು ಹೆಮ್ಮೆಯ ಸಂಗತಿ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರು, ಸಂಘ-ಸಂ ಸ್ಥೆಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಆರೋಗ್ಯಪೂರ್ಣ ಸಮಾಜ ಕಟ್ಟುವಲ್ಲಿ ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಜಿಲ್ಲಾ ಸಂಚಾಲಕಿ ಭಾಗ್ಯಕ್ಯ ಪ್ರಾಸ್ತಾವಿಕವಾಗಿ ಮಾತನಾಡಿ ೧೯೩೬ರಲ್ಲಿ ದಾದಿ ಯವರು ಸಂಸ್ಥೆಗೆ ಪಾದಾರ್ಪಣೆ ಮಾಡಿ ಸಾಮಾಜಿಕ ಚಟುವಟಿಕೆ ಮುಖೇನಾ ದೇಶ-ವಿದೇಶಗಳಲ್ಲಿ ಹೆಸರು ಸಂಪಾದಿಸಿದ್ದಾರೆ. ಉಳ್ಳವರ ಕುಟುಂಬಕ್ಕೆ ಸೇರಿದ ದಾದಿಯವರು ಜನಸ್ನೇಹಿ ಕಾರ್ಯ ಆಯ್ಕೆಮಾಡಿಕೊಂ ಡು ಮುನ್ನೆಡೆದವರು ಎಂದರು.
ಪ್ರಾರಂಭದಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆಗೆ ಓಂ ಮಂಡಳಿ ಎಂಬ ಹೆಸರಿತ್ತು. ತದನಂತರ ಬ್ರಹ್ಮಕುಮಾ ರೀಸ್ ಸಂಸ್ಥೆಯಾಗಿ ನಾಮಕರಣಗೊಂಡಿತು. ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಹೊಂದಿದ ದಾದಿಯವರು ವಿಶ್ವಸೇ ವಾ ಕಾರ್ಯ ವಿಚಾರವಾಗಿ ಸಂಸ್ಥೆಯು ದಾದಿಯವರಲ್ಲಿ ಸಲಹೆ, ಸೂಚನೆಗಳನ್ನು ಪಡೆಯುವಷ್ಟು ಮನ್ನಣೆ ಪಡೆದುಕೊಂಡಿದ್ದರು ಎಂದು ಹೇಳಿದರು.
ಭಾರತ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಕಳೆದ ಎರಡು ದಿನಗಳಿಂದ ಬ್ರಹ್ಮಕುಮಾರೀಸ್ ಸಂಸ್ಥೆ ಬೃಹತ್ ರಕ್ತದಾನ ಶಿಬಿರವನ್ನು ಎಲ್ಲೆಡೆ ಆಯೋಜಿಸಿದೆ. ಒಟ್ಟಾರೆ ಒಂದು ಲಕ್ಷ ರಕ್ತ ಸಂಗ್ರಹಿಸುವ ಗುರಿಯಿದ್ದು ಇದೀಗ ೫೦ ಸಾವಿರಕ್ಕೆ ತಲುಪಿದ್ದೇವೆ. ಇದಕ್ಕೆ ಮೂಲ ಪ್ರೇರಣೆ ಡಾ|| ಪ್ರಕಾಶ್‌ಮಣಿಜೀಯವರ ಅಮೂಲ್ಯ ಸೇವೆ. ಹೀಗಾಗಿ ಅವರ ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಸರ್ಜನ್ ಡಾ|| ಚಂದ್ರಶೇಖರ್ ಮಾತನಾಡಿ ಅಪಘಾತ ಅಥವಾ ಡೆಂಗ್ಯೂ ಪ್ರಕರಣಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್‌ಸಂಸ್ಥೆ ರಕ್ತದಾನ ಶಿಬಿರದ ಮೂಲಕ ಸಾಮಾಜಿಕ ಚ ಟುವಟಿಕೆ ಮುಂದಾಗಿ ಜೀವ ಉಳಿಸುವಂಥ ಸತ್ಕಾರ್ಯ ಮಾಡಿರುವುದು ಉತ್ತಮ ಕೆಲಸವಾಗಿದೆ ಎಂದರು.
೧೮ ವರ್ಷ ಮೇಲ್ಪಟ್ಟ ಆರೋಗ್ಯವಂತರು ರಕ್ತದಾನದಲ್ಲಿ ಪಾಲ್ಗೊಳ್ಳಬಹುದು. ಕನಿಷ್ಟ ಮೂರು ತಿಂಗಳಿ ಗೊಮ್ಮೆ ರಕ್ತದಾನ ಮಾಡಿದ್ದಲ್ಲಿ ಶರೀರದಲ್ಲಿ ಹೊಸ ರಕ್ತ ಉತ್ಪಾತ್ತಿಯಾಗಿ ಮಾರಕ ಕಾಯಿಲೆಗಳಿಂದ ತಡೆಗಟ್ಟ ಬಹುದು. ಯಾವುದೇ ವ್ಯಕ್ತಿಯ ರಕ್ತವು ಸಂಪೂರ್ಣವಾಗಿ ಪರಿಶೀಲಿಸಿದ ನಂತರವೇ ಬೇರೆ ವ್ಯಕ್ತಿಗೆ ನೀಡಲಾ ಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರ ಮ್ ಅಮಟೆ, ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಪಿ.ಲಿಖಿತ್, ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಲೂಸೀ ಜಾನ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ, ಜೇಸಿಐ ಅಧ್ಯಕ್ಷ ಪ್ರದೀಪ್‌ಕೋಟೆ, ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ|| ಕೆ.ಎ.ಅನೀತ್‌ಕುಮಾರ್, ಟೌನ್ ಮಹಿಳಾ ಸಮಾಜ ಅಧ್ಯಕ್ಷೆ ನೇತ್ರ ವೆಂಕಟೇಶ್, ಅಣುವೃತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ, ಲಯನ್ಸ್ ಕಾರ್ಯದರ್ಶಿ ಗೋಪಿಕೃಷ್ಣ, ಕನ್ನಡಸೇನೆ ಮಹಿಳಾ ಅಧ್ಯಕ್ಷೆ ಚೈತ್ರಗೌಡ ಮತ್ತಿತರರಿದ್ದರು.
Blood donation is a humanitarian act – a good deed.
