ಚಿಕ್ಕಮಗಳೂರು: ರಾಜ್ಯದ ಬಡವರ್ಗದ ಜನರಿಗೆ ಹಾಗೂ ನಿರುದ್ಯೋಗ ಯುವಸ ಮೂಹದ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಳಿಸುವ ಮೂಲಕ ರಾಜ್ಯಸರ್ಕಾರ ಜನತೆಗೆ ಆರ್ಥಿಕ ಶಕ್ತಿ ತುಂಬಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ಧ ಯುವನಿಧಿ ಕಾರ್‍ಯ ಕ್ರಮದ ಅಂಗವಾಗಿ ಶನಿವಾರ ಯುವನಿಧಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿ ಪ್ರಸ್ತತು ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಒಟ್ಟು ೧೪ ಸಾವಿರ ಯುವಕ-ಯುವತಿಯರು ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೩೪೦೦ಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೋಮಾ ಪದವಿದರರು ಉದ್ಯೋಗದ ಸಂದರ್ಶನಕ್ಕಾಗಿ ಯುವನಿಧಿ ಬಳಸಿಕೊಳ್ಳುತ್ತಿದ್ದಾರೆ ಎಂ ದು ಹೇಳಿದರು.
ದೇಶದ ಭವಿಷ್ಯದ ಪ್ರಜೆಗಳಾದ ಯುವಕರು ಉದ್ಯೋಗದ ಜೊತೆಗೆ ಜೀವನದಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲೇ ಎಲ್ಲೇ ಉದ್ಯೋಗಕ್ಕೆ ತೆರಳಿದರೂ ದೇಶ ಹಾಗೂ ತಾಯ್ನಾಡಿನ ಊರನ್ನು ಮರೆಯಬಾರದು. ಇದೀಗ ಕೆಲವೇ ವರ್ಷಗಳಲ್ಲಿ ಪದವಿಧರರಾಗುವ ಕಾಲೇಜಿನ ವಿದ್ಯಾರ್ಥೀಗಳು ಸರ್ಕಾ ರದ ಸವಲತ್ತನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಪದವಿದರ ರಾದ ವಿದ್ಯಾರ್ಥಿಗಳಿಗೆ ೩೦೦೦ ಹಾಗೂ ಡಿಪ್ಲೋಮಾ ವಿದ್ಯಾರ್ಥೀಗಳಿಗೆ ೧೫೦೦ರಂತೆ ಎರಡು ವರ್ಷಗಳ ಕಾಲ ಗಳದವರೆಗೆ ಸರ್ಕಾರವು ಮಾಶಾಸನವು ನೀಡುತ್ತಿದ್ದು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್‌ಸ್ವಾಮಿ ಮಾತನಾಡಿ ನಿರುದ್ಯೋಗದಿಂದ ಯು ವಜನಾಂಗ ಬಳಲಬಾರದೆಂಬ ದೃಷ್ಟಿಯಿಂದ ರಾಜ್ಯಸರ್ಕಾರ ಉದ್ಯೋಗ ಲಭಿಸುವವರೆಗೂ ಆರ್ಥಿಕ ಸಹಾ ಯಧನ ಕಲ್ಪಿಸಿದ್ದು ತಾಲ್ಲೂಕಿನಲ್ಲಿ ಒಟ್ಟು ೩೪೦೦ಕ್ಕೂ ಹೆಚ್ಚು ಯುವಜನಾಂಗದ ಸೌಲಭ್ಯದ ಪಡೆದುಕೊಂಡು ಯೋಜನೆ ಉಪಯೋಗ ಪಡೆದುಕೊಂಡಿದ್ದಾರೆ ಎಂದರು.
ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಜಿ ಲ್ಲೆ, ರಾಜ್ಯ ಅಥವಾ ಹೊರರಾಜ್ಯಗಳಲ್ಲಿ ಉದ್ಯೋಗ ಹರಸಿ ತೆರಳುವ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೆ ಯುವನಿಧಿ ಸೂಕ್ತವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಜನೆಯ ಶಕ್ತಿ ಪಡೆದು ಪಾಲಕರ ಉದ್ಯೋಗದ ಕನಸನ್ನು ಈಡೇರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಕಾಲೇಜಿನ ಪ್ರಾಂಶುಪಾಲ ಹಸೀನಾಬಾನು, ಶೈಕ್ಷಣಿಕ ಸಲ ಹೆಗಾರ ಮಂಜುನಾಥ್‌ಭಟ್, ಉದ್ಯೋಗ ಕಚೇರಿ ಅಧಿಕಾರಿ ಮಂಜುನಾಥ್ ಮತ್ತಿತರರಿದ್ದದರು.
Youth Fund helps in the economic empowerment of the youth
