ಚಿಕ್ಕಮಗಳೂರು: ವಿದ್ಯಾರ್ಥಿ ಬದುಕು ಅತ್ಯಮೂಲ್ಯ. ಕಲಿಕೆಯ ವಯಸ್ಸಿನಲ್ಲಿ ದುಶ್ಚ ಟ, ವ್ಯಾಮೋಹಕ್ಕೆ ಬಲಿಯಾಗದೇ ಆರೋಗ್ಯಪೂರ್ಣ ಹವ್ಯಾಸಗಳನ್ನು ಅಳವಡಿಸಿಕೊಂಡು ನಿಗಧಿತ ಗುರಿ ಯೆಡೆಗೆ ಹೆಜ್ಜೆ ಹಾಕಬೇಕು ಎಂದು ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಹೇಳಿದರು.
ನಗರದ ಉಪ್ಪಳ್ಳಿ ಸಮೀಪದ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ, ಶ್ರೀ ಶಕ್ತಿ ಮಧ್ಯಪಾನ ಸೇವಾನಿಗಳ ಸಮಗ್ರ ಪುನರ್ವಸತಿ ಕೇಂದ್ರ, ಸಹಯೋಗದೊಂದಿಗೆ ಆಯೋ ಜಿಸಿದ್ದ ‘ನಶ ಮುಕ್ತ ಭಾರತ ಅಭಿಯಾನ’ದ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ ದರು.
ಭಾರತವನ್ನು ನಶೆ ಮುಕ್ತ ದೇಶವನ್ನಾಗಿ ಮಾಡಲು ಪ್ರತಿಯೊಬ್ಬ ಯುವಜನರ ಪಾತ್ರ ಬಹುದೊಡ್ಡದು. ಸದೃಢ ದೇಹ ಇದ್ದರೆ ಮಾತ್ರ, ಸದೃಢದ ದೇಶ ಕಟ್ಟಲು ಸಾಧ್ಯ. ಮದ್ಯಪಾನ, ಧೂಮಪಾನ, ಗುಟ್ಕಾ, ಗಾಂ ಜಾ ಸೇವನೆ ಇನ್ನಿತರೆ ಪದಾರ್ಥಗಳಿಂದ ವಿದ್ಯಾರ್ಥಿಗಳು, ಯುವಜನರು ದೂರವಿರಬೇಕು ಎಂದು ಹೇಳಿ ದರು.
ದುಶ್ಚಟಗಳಿಗೆ ಒಳಗಾಗಿರುವ ವ್ಯಕ್ತಿಯಿಂದ ಅವರ ಮಕ್ಕಳು ಹಾಗೂ ಕುಟುಂಬದ ಮೇಲೂ ಬಹಳ ಪರಿ ಣಾಮ ಬೀರುತ್ತದೆ. ಆದ್ದರಿಂದ ಅಂತಹ ವ್ಯಕ್ತಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳ ನ್ನು ತಿಳಿಸುವ ಮೂಲಕ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ವೈದ್ಯ ಡಾ|| ಅನಿತ್ಕುಮಾರ್ ಮಾದಕ ಮಾತನಾಡಿ ತಂಬಾಕು, ಮದ್ಯಪಾನ ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಗಂಟಲು, ಅನ್ನನಾಳ, ಹೊಟ್ಟೆ ಮತ್ತು ಯಕೃತ್ತಿನಂತಹ ಪ್ರಮುಖ ಅಂಗಗಳು ಹಾನಿ ಗೊಳಗಾಗುತ್ತವೆ. ಇದು ಕೇವಲ ಶಾರೀರಿಕ ಆರೋಗ್ಯವನ್ನು ಮಾತ್ರವಲ್ಲದೆ, ಮೆದುಳಿನ ಮೇಲೆ ಪರಿಣಾಮ ಬೀರಿ, ಜ್ಞಾಪಕ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸುತ್ತದೆ ಎಂದು ಎಚ್ಚರಿಸಿದರು.
ಶಾಲೆಯ ಕಾರ್ಯದರ್ಶಿ ಶ್ರೀ ನಂದಕುಮಾರ್ ಅವರು ಶಾಲೆಯಲ್ಲಿ ಇಂತಹ ದುಶ್ಚಟಗಳನ್ನು ತಡೆಗಟ್ಟಲು ಕೈಗೊಂಡಿರುವ ಶಿಸ್ತು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಳಿಕ ವೈಯಕ್ತಿಕ ಸಲಹೆಗಾರ ಶ್ರೀ ಶಶಿಧರ್ ವ್ಯಸನಮುಕ್ತ ಕೇಂದ್ರಗಳಲ್ಲಿ ವ್ಯಸನಿಗಳ ಮನಪರಿವರ್ತನೆ ಹಾಗೂ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ನಡೆಸಲಾಗುವ ಪ್ರಯತ್ನಗಳ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಮಾದಕ ವಸ್ತುಗಳ ಜಾಗೃತಿ ಕುರಿತು ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲೆಯ ಎಲ್ಲಾ ವಿದ್ಯಾರ್ಥಿ ಗಳು ತಮ್ಮ ಜೀವನದಲ್ಲಿ ಯಾವುದೇ ಮಾದಕ ವಸ್ತುಗಳನ್ನು ಸೇವಿಸುವುದಿಲ್ಲವೆಂದು ಪ್ರತಿಜ್ಞಾವಿಧಿ ಸ್ವೀಕರಿಸಿ ದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಹೆಚ್.ಪಾಲಾಕ್ಷಮ್ಮ, ವ್ಯವಸ್ಥಾಪಕರಾದ ಹೆಚ್. ಮಂಜು ನಾಥ್ ಡಾ. ಕೆ.ಆರ್.ರಶ್ಮಿ, ಆಡಳಿತಾಧಿಕಾರಿ ಎನ್.ಪಿ.ಲಿಖಿತ್ ಉಪಸ್ಥಿತರಿದ್ದರು.
The role of youth in the country is immense.

Leave a Reply