May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ದೇಶದ ಎಲ್ಲಾ ವರ್ಗದ ಜನ ಸುಶಿಕ್ಷಿತರಾದಾಗ ಸಮಸಮಾಜ ನಿರ್ಮಾಣ

ಚಿಕ್ಕಮಗಳೂರು: ದೇಶದ ಎಲ್ಲಾ ವರ್ಗದ ಜನ ಸುಶಿಕ್ಷಿತರಾದಾಗ ಮಾತ್ರ ಸಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ಕ್ಷೇತ್ರದ ಸಖರಾಯಪಟ್ಟಣದಲ್ಲಿ ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿರುವ ಡಾ. ಅಂಬೇಡ್ಕರ್ ಆಟೋ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿ ೧೨ನೇ ಶತಮಾನದಲ್ಲಿ ಬಸವಣ್ಣ, ೧೯ನೇ ಶತಮಾನದಲ್ಲಿ ಬಿ.ಆರ್ ಅಂಬೇಡ್ಕರ್‌ರ ಪರಿಶ್ರಮದ ಫಲವಾಗಿ ಇಂದು ನಾವೆಲ್ಲಾ ನೆಮ್ಮದಿ ಜೀವನ ನಡೆಸಲು ಕಾರಣವಾಗಿದೆ ಎಂದು ತಿಳಿಸಿದರು.

ಆಟೋ ಚಾಲಕರು ಮತ್ತು ಮಾಲಿಕರ ಕುಟುಂಬದ ಎಲ್ಲಾ ಮಕ್ಕಳು ಡಾ. ಬಿ.ಆರ್ ಅಂಬೇಡ್ಕರ್ ಆಶಯದಂತೆ ಉತ್ತಮ ಶಿಕ್ಷಣ ಪಡೆಯಬೇಕು. ಇದು ಕಾರ್ಯರೂಪಕ್ಕೆ ಬಂದಾಗ ಸಮೃದ್ಧ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದರು.

ಆಟೋ, ಟ್ಯಾಕ್ಸಿ ಮಾಲಿಕರು, ಚಾಲಕರು ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟರೆ ರಾಜ್ಯಸರ್ಕಾರ ೫ ಲಕ್ಷ ರೂ ವಿಶೇಷ ಪರಿಹಾರ ಕೊಡಲು ನಿರ್ಧಾರ ಕೈಗೊಂಡಿದೆ. ಅದಕ್ಕಾಗಿ ಕಾರ್ಮಿಕ ಇಲಾಖೆಯಲ್ಲಿ ತಾವುಗಳು ಕೂಡಲೇ ನೊಂದಣಿ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಆಟೋ ಚಾಲಕರು ನೀಡಿದ ಮನವಿಯಲ್ಲಿರುವ ಕೆಲವು ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದ ಅವರು, ಸಖರಾಯಪಟ್ಟಣ ಬಸ್ ನಿಲ್ದಾಣದಿಂದ ಕಲ್ಮರುಡಿ ಮಠದವರೆಗೆ ಸುಸಜ್ಜಿತ ಬೀದಿದೀಪಗಳನ್ನು ಅಳವಡಿಸಲಾಗುವುದು ಹಾಗೂ ಬಸ್ ನಿಲ್ದಾಣದ ಪಕ್ಕದಲ್ಲಿ ನೂತನ ಆಟೋ ನಿಲ್ದಾಣ ನಿರ್ಮಾಣ ಸಧ್ಯದಲ್ಲೇ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ಆಟೋ ನಂಬಿ ಬದುಕುತ್ತಿರುವ ಚಾಲಕರಿಗೆ ಆಟೋ ನಿಲ್ದಾಣ ನಿರ್ಮಾಣ ಮಾಡಿದರೆ ಶಾಶ್ವತವಾಗಿ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಆಟೋ ಚಾಲಕರಲ್ಲಿ ಚಾಲನೆ ಪರವಾನಗಿ, ವಿಮೆ, ಸಮವಸ್ತ್ರ, ಇವುಗಳು ಸಮರ್ಪಕವಾಗಿದ್ದಾಗ ಗೌರವ ಸಿಗುತ್ತದೆ. ದಾಖಲಾತಿಗಳು ಇಲ್ಲ ಎಂಬ ಕಾರಣಕ್ಕೆ ಕೇಸು ದಾಖಲಿಸದೆ ಅರಿವು ಮೂಡಿಸಿ ಎಂದು ಪೊಲೀಸ್ ಠಾಣಾಧಿಕಾರಿಗೆ ಸೂಚನೆ ನೀಡಿದ ಅವರು, ಇದರಿಂದ ಶಿಸ್ತು ಮೂಡಿಸಿದಂತಾಗುತ್ತದೆಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ ವಹಿಸಿದ್ದರು. ಸದಸ್ಯರುಗಳಾದ ಲೋಕೇಶ್, ಗಣೇಶ್, ಬಸವರಾಜ್, ಆನಂದ್ ನಾಯ್ಕ, ಸಮುನ್, ತೇಜಸ್ವಿ, ಠಾಣಾಧಿಕಾರಿ ಪವನ್ ಕುಮಾರ್, ಪಿಡಿಓ ಲತಾಮಣಿ, ಆಟೋ ಸಂಘದ ಅಧ್ಯಕ್ಷ ಪ್ರದೀಪ್ ಉಪಸ್ಥಿತರಿದ್ದರು.

An equal society is created when people from all walks of life in the country are well-educated.

Related posts

ಪ್ರಾಧಿಕಾರದ ಸವಲತ್ತು ಮನೆ ಮನಗಳಿಗೆ ಮುಟ್ಟಿಸುವ ಜವಾಬ್ದಾರಿ ಸದಸ್ಯರ ಮೇಲಿದೆ

Team Suddigara

ನಗರದಲ್ಲಿ ಇ-ಖಾತಾ ಅಭಿಯಾನಕ್ಕೆ ಚಾಲನೆ

Team Suddigara

ಜಿಲ್ಲೆಯ 9 ಲಕ್ಷ ಮಂದಿಗೆ 2 ಸಾವಿರ ಕೋಟಿ ರೂ. ಸಂದಾಯ

Team Suddigara

Leave a Comment