ಕಡೂರು: ನಾಮಪತ್ರ ಸಲ್ಲಿಕೆಗೆ ಮೊದಲ ದಿನವಾದ ಗುರುವಾರ ಬಿಜೆಪಿ ಅಭ್ಯರ್ಥಿ ಕೆ. ಎಸ್. ಪ್ರಕಾಶ್ ( ಬೆಳ್ಳಿ) ತಮ್ಮ ಉಮೇದುವಾರಿಕೆ ಯನ್ನು ಸಲ್ಲಿಸಿದರು.
ಬೆಳಿಗ್ಗೆ ಕುಂಕಾನಾಡು ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಳಿಕ ಕಡೂರು ಪಟ್ಟಕ್ಕೆ ಆಗಮಿಸಿದ ಅವರು ಗಣಪತಿ- ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಮತ್ತು ಶ್ರೀ ಸಾಯಿಬಾಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸಾವಿರಾರು ಅಭಿಮಾನಿಗಳೊಂದಿಗೆ ತೆರೆದ ವಾಹನದಲ್ಲಿ ಮೆರವಣಿಗೆಯೊಂದಿಗೆ ತಾಲೂಕು ಕಛೇರಿ ತಲುಪಿದರು.
ಚುನಾವಣ ಅಧಿಕಾರಿ ಎಂ ತಿರುಮಲೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಮಯದಲ್ಲಿ ಚಿಕ್ಕಮಗಳೂರು ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಪತ್ನಿ ಮತ್ತು ಜಿಪಂ ಮಾಜಿ ಅಧ್ಯಕ್ಷೆ ಕವಿತಾ ಬೆಳ್ಳಿ ಪ್ರಕಾಶ್, ಬೀರೂರು ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಅವರುಗಳು ನಾಮಪತ್ರ ಸಲ್ಲಿಕೆ ಸಮಯದಲ್ಲಿ ಜತೆಯಲ್ಲಿ ಇದ್ದರು.
ತಮ್ಮ ನೆಚ್ಚಿನ ನಾಯಕ ನಾಮಪತ್ರ ಸಲ್ಲಿಸುವ ವಿಷಯ ತಿಳಿದು ಕ್ಷೇತ್ರದ ಹಲವಾರು ಹಳ್ಳಿಗಳಿಂದ ಸಾವಿರಾರು ಅಭಿಮಾನಿಗಳು ದತ್ತಾತ್ರಿ ನಗರದಲ್ಲಿರುವ ಸಾಯಿಬಾಬ ದೇವಾಲಯದ ಬಳಿ ಜಮಾವಣೆಗೊಂಡಿದ್ದರು. ನಂತರ ಹತ್ತು ಗಂಟೆ ಸಮಯಕ್ಕೆ ಎಲ್ಲಾ ಅಭಿಮಾನಿಗಳ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಸ್ಟೇಷನ್ ರಸ್ತೆ, ಜೈನ್ ಟೆಂಪಲ್ ರಸ್ತೆಯಲ್ಲಿ ಮೂಲಕ ತಾಲೂಕು ಕಚೇರಿ ತಲುಪಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ ಕಲಾಪ್ರಕಾರಗಳು ಇದ್ದವ. ಚಿಕ್ಕಮಗಳೂರು ಶಾಸಕ ಸಿ. ಟಿ. ರವಿ ಅವರು ಜೈನ ಮಂದಿರ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕೂಡಿಕೊಂಡು ಪ್ರಚಾರ ವಾಹನ ಏರಿದರು. ಎತ್ತ ನೋಡಿದರೂ ಕೇಸರಿ ಶಾಲು ಹೊದ್ದ ಅಭಿಮಾನಿಗಳು, ಬಾವುಟ ಹಿಡಿದು ಕುದಿಯುತ್ತಿದ್ದ ಕಾರ್ಯಕರ್ತರು ಹಾಗೂ ರಸ್ತೆಯ ಇಕ್ಕೆಲಗಳಲ್ಲಿ ಮೆರವಣಿಗೆಯನ್ನು ನೊಡಲು ಬಂದಿದ್ದ ಜನರೇ ತುಂಬಿದ್ದರೂ.
ನಂತರ ಸುರುಚಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಬೆಳ್ಳಿ ಪ್ರಕಾಶ್ ಮಾತನಾಡಿ ಕಳೆದ ಐದು ವರ್ಷ ಕಡೂರು ಕ್ಷೇತ್ರದಲ್ಲಿ ಭರಪೂರ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಜನರಿಗೆ ನೀಡಿದ ವಾಗ್ದಾನದಂತೆ ಕೆಲಸ ಮಾಡಿದ್ದು ಮುಂದಿನ ಚುನಾವಣೆಯಲ್ಸಿ ಅಭಿವೃದ್ಧಿ ಆಧಾರದ ಮೇಲೆ ಮತ ಯಾಚಿಸುತ್ತೇನೆ ಎಂದರು.
ನಿಮ್ಮ ಸ್ಪಷ್ಟ ಎದುರಾಳಿ ಯಾರು ಎಂಬ ಪ್ರಶ್ನೆಗೆ ಎದುರಾಳಿ ಪಕ್ಷಗಳಲ್ಲಿ ಸಾಕಷ್ಟು ಗೊಂದಲವಿದೆ ಆದರೆ ಈ ಬಾರಿಯ ಚುನಾವಣೆಯಲ್ಲಿ ಎದುರಾಳಿಯ ಪ್ರಶ್ನೆ ಉದ್ಭವಿಸುವುದೇ ಇಲ್ಲ ಕಾರ್ಯಕರ್ತರು ಅಭಿವೃದ್ದಿಯ ಕಾರ್ಡ್ ಹಿಡಿದೇ ಮತ ಕೇಳುತ್ತಾರೆ ಎಂದರು. ಮುಂದಿನ ಅವಧಿಯಲ್ಲಿ ಈಗ ಆರಂಭಿಸಿರುವ ಕಾರ್ಯಗಳನ್ನು ಪೂರ್ಣ ಗೊಳಿಸಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
K. S. Nomination submission in Prakash (Silver) kadoor