ಚಿಕ್ಕಮಗಳೂರು: ಶಾಸಕ ಸಿ.ಟಿ.ರವಿ ಅವರು ಸೋಮವಾರ ನಾಮಪತ್ರದ ಜತೆ ಆಸ್ತಿ ವಿವರ ಸಲ್ಲಿಸಿದ್ದು, ಚರಾಸ್ತಿ ಮತ್ತು ಸ್ಥಿರಾಸ್ತಿ ಸಹಿತ ಒಟ್ಟು ₹ 4.38 ಕೋಟಿ ಸ್ವತ್ತು ಹೊಂದಿದ್ದಾರೆ.
ಚರಾಸ್ತಿ ₹ 2.39 ಕೋಟಿ ಹಾಗೂ ಸ್ಥಿರಾಸ್ತಿ ₹ 1.61 ಕೋಟಿ ಇದೆ. 400 ಗ್ರಾಂ ಚಿನ್ನದ ಒಡವೆ, 2.1 ಕೆ.ಜಿ ಬೆಳ್ಳಿ ಉಪಕರಣ ಇವೆ. ಒಂದು ಸ್ಕಾರ್ಪಿಯೋ ವಾಹನ, ಪಿಸ್ತೂಲ್ ಇದೆ.
ಹಣಕಾಸು ಸಂಸ್ಥೆಗಳಲ್ಲಿ ₹ 17.24 ಲಕ್ಷ ಹಾಗೂ ಇತರರಿಂದ ₹ 77.33 ಲಕ್ಷ ಸಾಲ ಪಡೆದಿದ್ದಾರೆ. ಕೃಷಿ ಮಹಿಳೆ ಮತ್ತು ವ್ಯಾಪಾರಿಯೂ ಆಗಿರುವ ಪತ್ನಿ ಪಲ್ಲವಿ ಅವರ ಚರಾಸ್ತಿ ₹ 96.27 ಲಕ್ಷ ಹಾಗೂ ಸ್ಥಿರಾಸ್ತಿ ₹ 84.22 ಲಕ್ಷ ಇದೆ. ಮದುವೆ ಸಮಯದ ಉಡುಗೊರೆ ಸಹಿತ 940 ಗ್ರಾಂ ಚಿನ್ನದ ಒಡವೆ, ₹ 1.15 ಲಕ್ಷ ಬೆಲೆ ಬಾಳುವ ವಜ್ರಾಭರಣ ಹಾಗೂ 6 ಕೆ.ಜಿ ಬೆಳ್ಳಿ ಉಪಕರಣಗಳು ಇವೆ.
ಪಲ್ಲವಿ ಅವರು ಹಣಕಾಸು ಸಂಸ್ಥೆಗಳಲ್ಲಿ ₹ 1.54 ಕೋಟಿ ಹಾಗೂ ಇತರರಿಂದ ₹ 62.04 ಲಕ್ಷ ಸಾಲ ಪಡೆದಿದ್ದಾರೆ. ಪುತ್ರ ಸಮರ್ಥ ಸೂರ್ಯ ಹೆಸರಿನಲ್ಲಿ ಚರಾಸ್ತಿ ₹ 17. 11 ಲಕ್ಷ ಇದೆ. ಸಾಲ ₹ 20.78ಲಕ್ಷ ಇದೆ.ಹಿಂದೂ ಆವಿಭಕ್ತ ಕುಟುಂಬದ ಹೆಸರಿನಲ್ಲಿ ಚರಾಸ್ತಿ ₹ 27.94 ಲಕ್ಷ ಹಾಗೂ ಸ್ಥಿರಾಸ್ತಿ ₹ 16.71 ಲಕ್ಷ ಇದೆ. ₹ 43 ಸಾವಿರ ಸಾಲ ಇದೆ.
ಸಿ.ಟಿ.ರವಿ ಅವರು ಕೃಷಿಕರಾಗಿದ್ದಾರೆ. ವಯಸ್ಸು 55 ವರ್ಷ. ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾರೆ. ಅವರ ಹೆಸರಿನಲ್ಲಿ ಅಪರಾಧ ಪ್ರಕರಣಗಳು ಇಲ್ಲ.
MLA CT Ravi owns assets of ₹ 4.38 crore