ಮೂಡಿಗೆರೆ: ಜಗದೀಶ್ ಶೆಟ್ಟರ್ ಹೊರತುಪಡಿಸಿ ಬೇರೆಯವರೆಲ್ಲರೂ ಬೇರೆ ಪಕ್ಷದಿಂದ ಬಂದು ಅಧಿಕಾರಿ ಅನುಭಿವಿಸಿ ಈಗ ಮರಳಿ ಹೋಗುತ್ತಿದ್ದಾರೆ. ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ. ಬಿಜೆಪಿ ಕಾರ್ಯಕರ್ತರ ಪ್ರೇರಿತ ಪಕ್ಷ. ಹಾಗಾಗಿ ಕಾರ್ಯಕರ್ತರ ಶಕ್ತಿಯಿಂದಲೇ ಚುನಾವಣೆ ಗೆಲ್ಲುತ್ತಿರುವಾಗ ಪಕ್ಷದಿಂದ ಹೊರ ಹೋದವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂಎಲ್ಸಿ ಚುನಾವಣೆಯಲ್ಲಿ ಎಂಪಿಕೆ ಅವರು ಪಕ್ಷ ವಿರೋಧಿ ಚುಟುವಟಿಕೆ ನಡೆಸಿದ್ದಾರೋ ಇಲ್ಲವೋ ಎಂಬುದು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಟಿಕೇಟ್ ತಪ್ಪಲು ನಾವು ಕಾರಣ ಎಂದು ಆರೋಪಿಸುತ್ತಿದ್ದಾರೆ.
ಆದರೆ ಅವರಿಗೆ ಬಿಜೆಪಿ ಪಕ್ಷದ ತತ್ವ ಸಿದ್ದಾಂತದ ಬಗ್ಗೆ ಅರಿವಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಬಿಜೆಪಿ ಕಚೇರಿಗೆ ಬರುತ್ತಲೇ ಇರಲಿಲ್ಲ. ಪಕ್ಷಕ್ಕೆ ಮುಜುಗರ ಆಗುವಂತಹ ಚಟುವಟಿಕೆಯನ್ನು ಗಮನಿಸಿ, ನಿಷ್ಟೆಯಿಂದ ಕೆಲಸ ಮಾಡಿದ ದೀಪಕ್ ದೊಡ್ಡಯ್ಯ ಅವರಿಗೆ ಹೈ ಕಮಾಂಡ್ ಟಿಕೇಟ್ ನೀಡಿದೆ. ಹೈ ಕಮಾಂಡ್ ನಿರ್ಧಾರದಂತೆ ದೀಪಕ್ ದೊಡ್ಡಯ್ಯ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಲು ಕಾರ್ಯಕರ್ತರು ಸಿದ್ಧವಾಗಿದ್ದಾರೆಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು ಮಾತನಾಡಿ, ದೀಪಕ್ ದೊಡ್ಡಯ್ಯ ಅವರು ಸೋಮವಾರ ಸಾಂಕೇತವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಕಚೇರಿಯಿಂದ ರೋಡ್ ಶೋ ಮುಖಾಂತರ ಸಾವಿರಾರು ಸಂಖ್ಯೆಯಲ್ಲಿ ತೆರಳಿ ನಾಮಪತ್ರ ಸಲ್ಲಸಲಾಗುವುದು. ಬಳಿಕ ಅಡ್ಯಂತಾಯ ರಂಗಮಂದಿರಲ್ಲಿ ಸಾರ್ವಜನಿಕ ಸಭೆ ನಡೆಸಲಾಗುವುದು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ನಾಯಕರು ಭಾಗವಹಿಸಲಿದ್ದಾರೆಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ, ಆಲ್ದೂರು ಮಂಡಳ ಅಧ್ಯಕ್ಷ ದಿನೇಶ್ ಮುಗುಳುವಳ್ಳಿ, ಎಂ.ಆರ್.ಜಗದೀಶ್, ವಿನೋಧ್ ಕಣಚೂರು, ಕೆ.ಸಿ.ರತನ್, ಅನುಕುಮಾರ್, ಮನೋಜ್ ಹಳೆಕೋಟೆ, ಪಂಚಾಕ್ಷರಿ ಮತ್ತಿತರರಿದ್ದರು.
No matter who leaves the party, he will not lose his head